ಸಾರ್ವಜನಿಕ, ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ವಿಚಾರ-ಅಧಿಕಾರಿಗಳ ಸಮಿತಿ ರಚಿಸಿ ಡಿಸಿ ಆದೇಶ

0

  • ಧ್ವನಿವರ್ಧಕ ಬಳಕೆಗೆ ಸಮಿತಿಯಿಂದ ಅನುಮತಿ ಕಡ್ಡಾಯ
  • ರಾತ್ರಿ 10ರಿಂದ ಬೆಳಿಗ್ಗೆ 6ರ ತನಕ ಧ್ವನಿವರ್ಧಕ ಬಳಕೆಗಿಲ್ಲ ಅವಕಾಶ
  • ಅನುಮತಿ ಪಡೆದಿದ್ದರೂ ಶಬ್ದದ ಮಿತಿ ಮೀರಿದರೆ ಕ್ರಮ
  • ವಿದ್ಯಾಸಂಸ್ಥೆ, ಆಸ್ಪತ್ರೆ ಪರಿಸರದಲ್ಲಿ ಧ್ವನಿವರ್ಧಕ ಬಳಸುವಂತಿಲ್ಲ
ಮಂಗಳೂರು: ಸಾರ್ವಜನಿಕ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳು ಮತ್ತು ಧ್ವನಿ ಉತ್ಪಾದಿಸುವ ಉಪಕರಣಗಳ ಬಳಕೆ ಮಾಡುವ ಸಂಬಂಧ ಅಧಿಕಾರಿಗಳ ಸಮಿತಿ ರಚಿಸಲಾಗಿದೆ.ಮಂಗಳೂರು ಪೊಲೀಸ್ ಕಮಿಷನರೇಟ್ ಉತ್ತರ ವಿಭಾಗ, ದಕ್ಷಿಣ ವಿಭಾಗ ಹಾಗೂ ಕೇಂದ್ರ ವಿಭಾಗ, ಬಂಟ್ವಾಳ ತಾಲ್ಲೂಕು, ಪುತ್ತೂರು-ಕಡಬ ತಾಲ್ಲೂಕು, ಬೆಳ್ತಂಗಡಿ ತಾಲ್ಲೂಕು, ಸುಳ್ಯ ತಾಲ್ಲೂಕುಗಳಿಗೆ ಸಮಿತಿ ರಚಿಸಲಾಗಿದೆ. ಧ್ವನಿ ಉತ್ಪಾದಿಸುವ ಉಪಕರಣಗಳ ಬಳಕೆದಾರರು 15 ದಿನಗಳ ಒಳಗಾಗಿ ಅಧಿಕೃತ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.ಅನುಮತಿ ಪಡೆಯದಿದ್ದಲ್ಲಿ ಇಂತಹ ಉಪಕರಣಗಳನ್ನು ತೆರವುಗೊಳಿಸಲಾಗುತ್ತದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಅಸ್ತಿತ್ವದಲ್ಲಿರುವ ಎಲ್ಲಾ ಧ್ವನಿವರ್ಧಕ ಮತ್ತು ಧ್ವನಿ ಉತ್ಪಾದಿಸುವ ಉಪಕರಣಗಳ ಬಳಕೆದಾರರು ೧೫ ದಿನಗಳೊಳಗೆ ಅಧಿಕೃತ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು.ಅನುಮತಿ ಪಡೆಯದೇ ಇರುವವರು ಸ್ವಯಂ ಪ್ರೇರಣೆಯಿಂದ ಧ್ವನಿವರ್ಧಕಗಳನ್ನು ಮತ್ತು ಧ್ವನಿ ಉತ್ಪಾದಿಸುವ ಉಪಕರಣಗಳನ್ನು ತೆರವುಗೊಳಿಸಬೇಕು ಇಲ್ಲವಾದಲ್ಲಿ ಅಧಿಕೃತ ಪ್ರಾಧಿಕಾರದಿಂದಲೇ ೧೫ ದಿನಗಳೊಳಗೆ ತೆರವುಗೊಳಿಸಲಾಗುವುದು. ಶಬ್ದ ಮಾಲಿನ್ಯ ನಿಯಂತ್ರಣ ಮತ್ತು ನಿಯಂತ್ರಣ ನಿಯಮಗಳು, ೨೦೦೦ ಇದರ ನಿರ್ದೇಶನಗಳನ್ನು ಮತ್ತು ಪರಿಸರ ಸಂರಕ್ಷಣಾ ಕಾಯ್ದೆ 1986ರ ನಿಯಮ 15, 19 ಮತ್ತು 24ರ ಪ್ರಕಾರ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು.ಸಾರ್ವಜನಿಕರು ಯಾವುದೇ ಸಭೆ, ಸಮಾರಂಭಗಳಲ್ಲಿ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ಬಳಸಲು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ ೧೦ರ ವರೆಗೆ ಮಾತ್ರ ಅವಕಾಶವಿದೆ. ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆ ತನಕ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಲಾಗಿದೆ.ಒಂದು ವೇಳೆ ಈ ಅವಧಿಯಲ್ಲಿ ಬಳಕೆ ಮಾಡಿದೆ ಆದಲ್ಲಿ ಸಂಬಂಧಪಟ್ಟ ಸಮಿತಿಯವರು ಕಾನೂನು ಕ್ರಮಕೈಗೊಳ್ಳಬೇಕು.
7 ದಿನಗಳ ಮೊದಲು ಅನುಮತಿ: ಸಾರ್ವಜನಿಕ ಸಂಸ್ಥೆ, ಕೇಂದ್ರ, ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಉಪಯೋಗಿಸಲು ೧೫ ದಿನಗಳ ಮುಂಚಿತವಾಗಿ ಸಂಬಂಧಿಸಿದ ಸಮಿತಿಗಳಿಗೆ ಅರ್ಜಿ ಸಲ್ಲಿಸಬೇಕು ಮತ್ತು ಕಾರ್ಯಕ್ರಮ ನಡೆಯುವ ಏಳು ದಿನ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಅನುಮತಿ ನೀಡಬೇಕು.ಅನುಮತಿ ಪಡೆದಿದ್ದರೂ ಮಿತಿ ಮೀರಿ ಬಳಕೆ ಮಾಡಿದಲ್ಲಿ ಕಾನೂನು ಕ್ರಮವನ್ನು ಸಂಬಂಧಿಸಿ ಸಮಿತಿ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿದ್ಯಾಸಂಸ್ಥೆ, ಆಸ್ಪತ್ರೆ ಸಮೀಪ ಇಲ್ಲ ಅವಕಾಶ: ವಿದ್ಯಾಸಂಸ್ಥೆ ಮತ್ತು ಆಸ್ಪತ್ರೆಗಳ ಸಮೀಪ ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ.ವಿದ್ಯಾ ಸಂಸ್ಥೆ, ಸಾರ್ವಜನಿಕ ಸಂಸ್ಥೆ, ಕೇಂದ್ರ, ಧಾರ್ಮಿಕ ಸ್ಥಳಗಳ ಒಳಾಂಗಣದಲ್ಲಿಯೂ ಧ್ವನಿವರ್ಧಕ ಉಪಕರಣಗಳನ್ನು ಶಬ್ದದ ಮಿತಿ ಮೀರಿ ಉಪಯೋಗಿಸುವಂತಿಲ್ಲ.
ಪುತ್ತೂರು, ಕಡಬ ತಾಲೂಕು ಸಮಿತಿ:
ಡಾ| ಗಾನ ಪಿ ಕುಮಾರ್, ಪೊಲೀಸ್ ಉಪ ಅಧೀಕ್ಷಕರು ಪುತ್ತೂರು ಉಪವಿಭಾಗ (ಮೊ :9480805321)
ಡಾ| ಮಹೇಶ್ವರಿ ಸಿಂಗ್, ಉಪ ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಮೊ:9464901504),
ರಮೇಶ್ ಬಾಬು, ತಹಶೀಲ್ದಾರ್ ಪುತ್ತೂರು (ಮೊ:9480168864) ಮತ್ತು ಅನಂತಶಂಕರ ಬಿ.,ತಹಶೀಲ್ದಾರ್ ಕಡಬ(ಮೊ:9902541695).
ಬಂಟ್ವಾಳ ತಾಲೂಕು:
ಶಿವಾಂಶ ರಾಜಪೂತ್,ಪೊಲೀಸ್ ಉಪಅಧೀಕ್ಷಕರು ಬಂಟ್ವಾಳ(ಮೊ:9480805309), ಡಾ| ಮಂಜು ಆರ್, ಉಪಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(ಮೊ:9980241122), ಡಾ.ಸ್ಮಿತಾ ರಾಮು, ತಹಸಿಲ್ದಾರ್ ಬಂಟ್ವಾಳ(7760966609) ಮತ್ತು ಬೆಳ್ತಂಗಡಿ ತಾಲೂಕಿಗೆ ಶಿವಾಂಶ ರಾಜಪೂತ್, ಡಾ| ಮಂಜು ಆರ್ ಅಲ್ಲದೆ ಹೆಚ್ಚುವರಿಯಾಗಿ ಮಹೇಶ್ ತಹಶೀಲ್ದಾರ್, ಬೆಳ್ತಂಗಡಿ (ಮೊ:9902434583)
ಅಧಿಕಾರಿಗಳ ಸಮಿತಿಯವರು ವಾಟ್ಸ್ ಆಪ್ ಗ್ರೂಪ್ ರಚಿಸಿಕೊಂಡು ಸಿಂಗಲ್ ವಿಂಡೋ ಸಿಸ್ಟಮ್ ಮೂಲಕ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ದ.ಕ.ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಪೊಲೀಸ್ ಉಪ ಅಧೀಕ್ಷಕರ ನೇತೃತ್ವದಲ್ಲಿ ತಹಶೀಲ್ದಾರರು ಮತ್ತು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here