ಶಶಿಧರ ಕೆ ಮಾವಿನಕಟ್ಟೆಯವರಿಗೆ ರೋಟರ್‍ಯಾಕ್ಟ್ ಕೆನರಾ ವಲಯದ ಅತ್ಯುತ್ತಮ ವಲಯ ಪ್ರತಿನಿಧಿ ಪ್ರಶಸ್ತಿ

0

 

ಪುತ್ತೂರು: ರೋಟರ್‍ಯಾಕ್ಟ್‌ನ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಅಡ್ಯಾರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು. ಆರ್.ಐ ಜಿಲ್ಲೆ 3181 ಇದರ ನಾಲ್ಕು ವಲಯಗಳಲ್ಲಿ ಕೆನರಾ ವಲಯದ ಅತ್ಯುತ್ತಮ ವಲಯ ಪ್ರತಿನಿಧಿ ಪ್ರಶಸ್ತಿ ರೊ.ಶಶಿಧರ ಕೆ ಮಾವಿನಕಟ್ಟೆ ಅವರಿಗೆ ಲಭಿಸಿತು. ರೋಟರಿ ಜಿಲ್ಲಾ ಗವರ್ನರ್ ರೊ.ಪ್ರಕಾಶ್ ಕಾರಂತ್ ಪ್ರಶಸ್ತಿ ವಿತರಿಸಿದರು. 2022-24ನೇ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ರೊ.ವಿಕ್ರಂ ದತ್ತ, 2020-21ನೇ ಸಾಲಿನ ಜಿಲ್ಲಾ ಪ್ರತಿನಿಧಿ ರೊ.ಅಭಿಜಿತ್ ಎಂ.ಎಸ್ ಹಾಗೂ ಪ್ರಸ್ತುತ ಸಾಲಿನ ಜಿಲ್ಲಾ ಪ್ರತಿನಿಧಿ ರೊ.ಡೆರಿಲ್ ಸ್ಟೀವನ್ ಡಿಸಿಲ್ವಾ ಮತ್ತಿತರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here