ಬಾಬನಕಟ್ಟೆ ಶಾಲೆಯಲ್ಲಿ ಬಂಟ್ವಾಳ ತಹಶೀಲ್ದಾರ್ ರವರ ಗ್ರಾಮವಾಸ್ತವ್ಯ

0

 

  • ಗ್ರಾಮಸ್ಥರ ಸಮಸ್ಯೆಗಳಿಗೆ ಗ್ರಾಮದಲ್ಲೇ ಪರಿಹಾರ ಕಂಡುಕೊಳ್ಳುವ ಕಾರ್ಯಕ್ರಮವಿದು: ಡಾ.ಸ್ಮಿತಾ ರಾಮ್ 
  • ಗ್ರಾಮದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುವ ಆಶಯವಿದೆ: ಗಣೇಶ್ ಪೂಜಾರಿ

 

ವಿಟ್ಲ: ಗ್ರಾಮಸ್ಥರ ಸಮಸ್ಯೆಗಳಿಗೆ ಗ್ರಾಮಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸರ್ಕಾರ ಗ್ರಾಮ ವಾಸ್ತವ್ಯ ವನ್ನುಆಯೋಜಿಸಿದ್ದು, ಪ್ರತೀ ತಾಲೂಕಿನಲ್ಲೂ ಉತ್ತಮ‌ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಬಂಟ್ವಾಳ ತಹಶೀಲ್ದಾರ್ ಡಾ.ಸ್ಮಿತಾ ರಾಮ್ ಹೇಳಿದ್ದಾರೆ.

ಬಂಟ್ವಾಳ‌ ತಾಲೂಕು ಆಡಳಿತ, ಕಂದಾಯ ಇಲಾಖೆ ಹಾಗೂ ಅನಂತಾಡಿ‌ ಗ್ರಾ.ಪಂ. ಆಶ್ರಯದಲ್ಲಿ‌ ಬಾಬನಕಟ್ಟೆ ಶಾಲೆಯಲ್ಲಿ ನಡೆದ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹರಿಸುವುದು ಹಾಗೂ ಇಲಾಖೆ ಮತ್ತು ಗ್ರಾಮಸ್ಥರ ಅಂತರವನ್ನು ಕಡಿನೆ ಮಾಡುವುದು ಇದರ ಆಶಯ ಎಂದವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ ವಹಿಸಿದ್ದರು.ಅನಂತಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಮ್ಮ ಪಂಚಾಯತ್ ‌ಗೆ ಹೆಮ್ಮೆಯ ವಿಷಯವಾಗಿದ್ದು, ಗ್ರಾಮದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುವ ಆಶಯವಿದೆ ಎಂದರು.
ಗ್ರಾ.ಪಂ.ಉಪಾಧ್ಯಕ್ಷ ಕುಸುಮಾಧರ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅಜಿತ್, ತಾ.ಹಿಂದುಳಿದ ವರ್ಗಗಳ‌ ಅಭಿವೃದ್ಧಿ ಅಧಿಕಾರಿ ಬಿಂಧ್ಯಾ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಟ್ಲ ಉಪತಹಶೀಲ್ದಾರ್ ವಿಜಯ ವಿಕ್ರಮ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಪ್ರಶಾಂತ್ ವಂದಿಸಿದರು. ಗ್ರಾಮಕರಣಿಕ ಅನಿಲ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here