ಗಲ್ಫ್ ಯೂತ್ ಕಬಕ ಜಮಾಅತ್: ಅಧ್ಯಕ್ಷರಾಗಿ ಆಸಿಫ್ ಬಗ್ಗುಮೂಲೆ; ಪ್ರ.ಕಾರ್ಯದರ್ಶಿಯಾಗಿ ಶರೀಫ್ ಕಬಕ

0

ಪುತ್ತೂರು:ಗಲ್ಫ್ ಯೂತ್ ಕಬಕ ಜಮಾಅತ್ ಇದರ ನೂತನ ಅಧ್ಯಕ್ಷರಾಗಿ ಆಸಿಫ್ ಬಗ್ಗುಮೂಲೆ ಕೆಎಸ್‌ಎ, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಕಬಕ ಕತಾರ್ ಹಾಗೂ ಕೋಶಾಧಿಕಾರಿಯಾಗಿ ನವಾಝ್ ಅಡೆಕ್ಕಲ್ ಯುಎಇ ಆಯ್ಕೆಗೊಂಡಿದ್ದಾರೆ. ಕಳೆದ ೬ ವರ್ಷಗಳಿಂದ ಕಬಕ ಜಮಾತಿನ ಬಡ ನಿರ್ಗತಿಕರ ಸೇವೆಗೆಯುವ ಅನಿವಾಸಿ ಯುವಕರ ಸಂಘಟನೆ ಗಲ್ಫ್ ಯೂಥ್ ಕಬಕ ಜಮಾಅತ್ ಇದರ ವಾರ್ಷಿಕ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರುಗಳಾಗಿ ರಝಾಕ್ ಹಾಜಿ ಮೌಲಾನ, ಸಿತಾರ್ ಮಹಮ್ಮದ್ ಹಾಜಿ, ಇಸ್ಮಾಯಿಲ್ ಬ್ರೈಟ್ ಅವರನ್ನು ಆಯ್ಕೆ ಮಾಡಲಾಯಿತು. ಹಿರಿಯ ಸಲಹಾ ಸಮಿತಿ ಸದಸ್ಯರುಗಳಾಗಿ ಉಸ್ಮಾನ್ ಮಸ್ಕತ್, ಇಸ್ಮಾಯಿಲ್ ಬಗ್ಗುಮೂಲೆ, ರಫೀಕ್ ಬ್ರೈಟ್, ಮಹಮ್ಮದ್ ಬೊಳ್ವಾರ್, ಸುಲೈಮಾನ್ ಕಬಕಕಾರ್ಸ್, ಅನ್ವರ್ ಮಸ್ಕತ್‌ರವರನ್ನು ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ಬಶೀರ್ ಹಾಜಿ ಅಬುಧಾಬಿ, ರವೂಫ್ ದುಬೈ ಹಾಗೂ ಅಮ್ಜದ್ ಖಾನ್ ದಮ್ಮಾಮ್ ಆಯ್ಕೆಯಾದರು.


ಉಪಾಧ್ಯಕ್ಷರಾಗಿ ಬದ್ರುದ್ದೀನ್ ಮದೀನ ಮತ್ತು ಅಬ್ದುಲ್ ರಹಿಮಾನ್ ಕುವೈಟ್, ಜೊತೆ ಕಾರ್ಯದರ್ಶಿ ಸಮ್ನಾಝ್ ಕಬಕ, ಜೊತೆ ಕೋಶಾಧಿಕಾರಿ: ರಝಕ್ ದುಬೈ, ಲೆಕ್ಕ ಪರಿಶೋಧಕರಾಗಿ ಆಶಿಕ್ ಕತಾರ್ ಆಯ್ಕೆಗೊಂಡರು. ಊರಿನ ಪ್ರತಿನಿಧಿಗಳಾಗಿ ಖಾದರ್ ಭಾರತ್, ಹಾರಿಸ್, ಸಿದ್ದೀಕ್ ಎಚ್‌ಕೆಬಿಕೆ, ಇರ್ಫಾನ್, ಸೌಕಾತ್ ಅಲಿ ಆಯ್ಕೆಗೊಂಡರು. ಕ್ಯಾಬಿನೆಟ್ ಸಮಿತಿಗೆ ಹೊಸದಾಗಿ, ಇಕ್ಬಾಲ್ ಯುಎಇ, ಝಕೀರ್ ಯುಎಇ, ತಾಜುದ್ದೀನ್ ತಂಙಳ್, ಸಿರಾಜ್ ಕತಾರ್, ಖಾಲಿದ್ ಕತಾರ್, ಇಲ್ಯಾಸ್ ಕುವೈಟ್‌ರವರನ್ನು ಸೇರ್ಪಡೆಗೊಳಿಸಲಾಯಿತು. ಅಸ್ಲಮ್ ಸಿತಾರ್, ಶಾಕಿರ್ ರಾಜಧಾನಿ,ಸುಲೈಮಾನ್ ಓಜಲ ಕತಾರ್, ಶಮೀರ್ ಕರ್ನಾಟಕ ಮತ್ತು ಅಶ್ರಫ್ ಯುನೈನ್ ಕತಾರ್ ಇವರನ್ನು ಕ್ಯಾಬಿನೆಟ್ ಸದಸ್ಯರುಗಳಾಗಿ ಮುಂದುವರಿಸಯಿತು. ಹಾಜಿ ರಝಾಕ್ ಮೌಲಾನಾ ದುವಾ ನೆರವೇರಿಸಿದರು. ಸುಲೈಮಾನ್ ಕಬಕಕಾರ್ಸ್ ನಿರೂಪಿಸಿದರು.

LEAVE A REPLY

Please enter your comment!
Please enter your name here