ಲಂಚ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾವಿಧಿ  ಸ್ವೀಕರಿಸಿದ ಗ್ರಾಮಸ್ಥರು

0

ಸವಣೂರು : ಜನರ ಬಳಿಗೆ ಅಧಿಕಾರಿಗಳು ಬರುವುದರಿಂದ ತಳಮಟ್ಟದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡಕೊಳ್ಳಬಹುದಾಗಿದೆ. ಅಲ್ಲದೆ ಜನರಿಗೆ ಸರಕಾರದ ಯೋಜನೆ, ಕಾರ್ಯಕ್ರಮಗಳ ಮಾಹಿತಿ ತಿಳಿಯಲು ಪೂರಕವಾಗುತ್ತದೆ. ಇದನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು.ಗ್ರಾಮ ವಾಸ್ತವ್ಯ ಸರಕಾರ ಮಹತ್ವಾಕಾಂಕ್ಷಿ ಯೋಜನೆ ಎಂದು ಪುತ್ತೂರು ಉಪ ವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್ ಹೇಳಿದರು. ಅವರು ಸವಣೂರು ವಿನಾಯಕ ಸಭಾಭವನದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕಂದಾಯ ಇಲಾಖೆಯಲ್ಲಿ ಅಕ್ರಮ ಸಕ್ರಮ  ಮಂಜೂರಾತಿ,94 ಸಿ ಸಕ್ರಮೀಕರಣ ನಡೆಯುತ್ತಿದೆ. ದಾಖಲೆಗಳು ಕ್ರಮಬದ್ದವಾಗಿದ್ದರೆ ಅಕ್ರಮ ಸಕ್ರಮ ಸಮಿತಿಯ ಸಭೆಯಲ್ಲಿ ಮಂಜೂರು ಮಾಡಲಾಗುತ್ತದೆ ಎಂದರು.
ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು ಈಗ ಫಲಾನುಭವಿಗಳ ಮನೆಬಾಗಿಲಿಗೆ ಬರುತ್ತಿದೆ. ಸರಕಾರಿ ಸೌಲಭ್ಯಗಳ ಮಾಹಿತಿಯನ್ನು ಸಾರ್ವಜನಿಕರು ಅರ್ಹರಿಗೆ ಮುಟ್ಟುವಂತೆ ಮಾಡಬೇಕು.ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರ ಅರ್ಜಿ ವಿಲೇವಾರಿ ಪರಿಹಾರಕ್ಕೆ ಗ್ರಾಮ ವಾಸ್ತವ್ಯ ಉತ್ತಮ ವೇದಿಕೆ.ಎಲ್ಲಾ ಯೋಜನೆಗಳ ಜಾರಿಯಲ್ಲಿಯೂ ಅದರದ್ದೇ ಆದ ನಿಯಾಮವಳಿಗಳಿವೆ,ಪರಿಶೀಲನೆಯ ಬಳಿಕ ಮಂಜೂರು ಸಾಧ್ಯ ಎಂದರು.

ವೇದಿಕೆಯಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ,ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ,ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ,ಎಪಿಎಂಸಿ ಅಧ್ಯಜ್ಷ ದಿನೇಶ್ ಮೆದು,ಲೋಕೋಪಯೋಗಿ ಇಲಾಖೆಯ ಅಭಿಯಂತರ ರಾಜರಾಮ್,ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಉಪಸ್ಥಿತರಿದ್ದರು.
ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಸವಣೂರು ಗ್ರಾಮಕರಣಿಕ ಚಂದ್ರ ನಾಯ್ಕ,ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಎ.ಮನ್ಮಥ,ಗ್ರಾ.ಪಂ.ಸದಸ್ಯೆ ಚಂದ್ರಾವತಿ ಸುಣ್ಣಾಜೆ, ಪಶುವೈದ್ಯ ಇಲಾಖೆಯ ರಮೇಶ್ ಅತಿಥಿಗಳನ್ನು ಗೌರವಿಸಿದರು.
ಸಚಿವ ಅಂಗಾರ ಅವರಿಂದ ಪಿಂಚಣಿ ಪತ್ರ ವಿತರಣೆ
ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮಧ್ಯಾಹ್ನ ಆಗಮಿಸಿದ ಬಂದರು,ಮೀನುಗಾರಿಕೆ ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಅವರು ಅರ್ಹ ಫಲಾನುಭವಿಗಳಿಗೆ  ಪಿಂಚಣಿ ಆದೇಶ ಪತ್ರ ವಿತರಿಸಿ ಮಾತನಾಡಿ,ಸರಕಾರದ ಸವಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎನ್ನುವ ನೆಲೆಯಲ್ಲಿ ಸರಕಾರ ಈ ವಿಶಿಷ್ಠ ಯೋಜನೆಯನ್ನು ಜಾರಿಗೆ ತಂದಿದೆ, ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರಾಜ್ಯದ ಪ್ರತೀ ಗ್ರಾಮದಲ್ಲಿ ನಡೆಯುತ್ತದೆ.ಜನರ ಸಮಸ್ಯೆಯನ್ನು ಅವರ ಮನೆಬಾಗಿಲಿನಲ್ಲೇ ಪರಿಹರಿಸಲು ಸಾಧ್ಯವಾಗುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು  ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮಧ್ಯೆ ವಿಶ್ವಾಸ ಮೂಡಿಸುವ ಕಾರ್ಯ ಗ್ರಾಮ ವಾಸ್ತವ್ಯದಿಂದ ಆಗಲಿದೆ ಎಂದರು.
ಸಭೆಯಲ್ಲಿ 32 ಮಂದಿಗೆ  ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಯ ಆದೇಶ ಪತ್ರ ನೀಡಲಾಯಿತು.
ಕಡಬ ತಹಶೀಲ್ದಾರ್ ಅನಂತ ಶಂಕರ್ ಸ್ವಾಗತಿಸಿದರು, ಶಿಜ್ಷಣಾಧಿಕಾರಿ ಸಿ.ಲೋಕೇಶ್ ವಂದಿಸಿದರು. ನ್ಯಾಯವಾದಿ ಮಹೇಶ್ ಕೆ.ಸವಣೂರು ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಲಂಚ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿಯನ್ನು ಗ್ರಾಮಸ್ಥರು ಸ್ವೀಕರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಸುದ್ದಿ ಮೀಡಿಯಾ ಗ್ರೂಪ್ ಸಿಇಒ ಸೃಜನ್ ಊರುಬೈಲು, ಸುದ್ದಿ ಬಿಡುಗಡೆ ವರದಿಗಾರರಾದ  ಗಣೇಶ್ ಕಲ್ಲರ್ಪೆ ,ಪ್ರವೀಣ್ ಚೆನ್ನಾವರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here