ಮಂಗಳೂರಿನಲ್ಲಿ ಎಸ್.ಡಿ.ಪಿ.ಐ.ನಿಂದ ಬೃಹತ್ ಜನಾಧಿಕಾರ ಸಮಾವೇಶ

0

  • ಪುತ್ತೂರು, ಕಡಬದಿಂದ ಸಾವಿರಾರು ಮಂದಿ ಭಾಗಿ

 

ಜನಾಧಿಕಾರ ಸಮಾವೇಶದಲ್ಲಿ ಜನಸ್ತೋಮ

 ಪುತ್ತೂರು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮೇ.27ರಂದು ಮಂಗಳೂರು ಕಣ್ಣೂರು ಮೈದಾನದಲ್ಲಿ ನಡೆದ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನಿಂದ ಸಾವಿರಾರು ಮಂದಿ ಭಾಗಿಯಾದರು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆಯವರು ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಪುತ್ತೂರಿನಿಂದ ಸಮಾವೇಶಕ್ಕೆ ಹೊರಟ ವಾಹನಗಳಿಗೆ ಚಾಲನೆ ನೀಡಿದರು.

ಪುತ್ತೂರು, ಕಡಬ, ಉಪ್ಪಿನಂಗಡಿ, ವಿಟ್ಲ, ಈಶ್ವರಮಂಗಲ, ಬೆಟ್ಟಂಪಾಡಿ, ಪುರುಷರಕಟ್ಟೆ, ಮುಕ್ವೆ, ಕೂರ್ನಡ್ಕ, ಕುಂಬ್ರ, ಸಾಲ್ಮರ, ಪರ್ಲಡ್ಕ, ಬೀಟಿಗೆ, ಕೊಡಿಪ್ಪಾಡಿ, ಕಬಕ, ಮಿತ್ತೂರು, ಕಂಬಳಬೆಟ್ಟು, ಸಂಟ್ಯಾರು, ಸಂಪ್ಯ ಸೇರಿದಂತೆ ವಿವಿಧ ಕಡೆಗಳಿಂದ ಒಟ್ಟು ೨೨ ಬಸ್ ಹಾಗೂ ಇನ್ನಿತರ ಹಲವು ವಾಹನಗಳಲ್ಲಿ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ತೆರಳಿ ಸಮಾವೇಶದಲ್ಲಿ ಭಾಗಿಯಾದರು. ಸಮಾವೇಶದಲ್ಲಿ ನಿರೀಕ್ಷೆಗೂ ಮೀರಿ ಜನರು ಪಾಲ್ಗೊಂಡಿದ್ದರು ಎಂದು ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here