ಪ್ರಗತಿಯ ಪಥದಲ್ಲಿ ಸಾಗುತ್ತಿದೆ… ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ-ಗ್ರಾಮೀಣ ಪ್ರದೇಶದ ಪ್ರಗತಿ ವಿದ್ಯಾಸಂಸ್ಥೆಯಿಂದ ಶೈಕ್ಷಣಿಕ ಕ್ರಾಂತಿ

0

  • ಆಂಗ್ಲ ಮಾಧ್ಯಮದಲ್ಲಿ 19ನೇ ಬಾರಿ ಶೇ 100 ಫಲಿತಾಂಶದ ಸಾಧನೆ
  • ಕನ್ನಡ ಮಾಧ್ಯಮದಲ್ಲಿಯೂ 13ನೇ ಬಾರಿ ಶೇ 100 ಫಲಿತಾಂಶದ ಸಾಧನೆ
  • ಯೋಗ, ಕರಾಟೆ, ಚೆಸ್   ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಸಾಧನೆ
  • ಕಬಡ್ಡಿಯಲ್ಲಿ 9ನೇ ಬಾರಿ ರಾಷ್ಟ್ರ ಮಟ್ಟಕ್ಕೆ
  • ರಾಷ್ಟ್ರ ಮಟ್ಟದಲ್ಲಿಯೂ ಸಂಸ್ಥೆಯ ಹೆಸರು ಮುಂದು…

 

ಸುಧಾಕರ ಆಚಾರ್ಯ ಕಾಣಿಯೂರು

ಕಾಣಿಯೂರು: ಪ್ರಕೃತಿಯ ರಮಣೀಯವಾದ ತಾಣದಲ್ಲಿ ಕಂಗೊಳಿಸುತ್ತಿರುವ ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆ ಗ್ರಾಮೀಣ ಭಾಗದಲ್ಲಿ ಹೊಸ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದೆ. ಬೆಳ್ಳಿಹಬ್ಬದ ಸಂಭ್ರಮವನ್ನು ಆಚರಿಸಿದ ಪ್ರಗತಿ ವಿದ್ಯಾಸಂಸ್ಥೆಯು ಇಂದು ಪ್ರಗತಿಯ ಪಥದಲ್ಲಿ ಸಾಗುತ್ತಿದೆ…

 


ಹೌದು..ಸಾವಿರಾರು ವಿದ್ಯಾರ್ಥಿಗಳ ಪ್ರಗತಿಗೆ ಭದ್ರ ಬುನಾದಿ ಹಾಕಿದ ಕಾಣಿಯೂರು -ಸುಬ್ರಹ್ಮಣ್ಯ – ಮಂಜೇಶ್ವರ ರಾಜ್ಯ ಹೆದ್ದಾರಿಯ ಮಧ್ಯೆ ಕಾಣಿಯೂರಿನಲ್ಲಿ ಸುಂದರ ಸೊಬಗಿನ ಪ್ರಕೃತಿಯ ಮಡಿಲಲ್ಲಿ ಪ್ರಗತಿ ವಿದ್ಯಾಸಂಸ್ಥೆಯು ಇದೆ. ಪ್ರಶಾಂತ ವಾತಾವರಣವಿರುವ ಪ್ರದೇಶದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ಇಲ್ಲಿ ಇದೆ. ಗ್ರಾಮೀಣ ಪ್ರದೇಶವಾದ ಕಾಣಿಯೂರಿನಲ್ಲಿ 1993ರಲ್ಲಿ ಪ್ರಾರಂಭಗೊಂಡ ಪ್ರಗತಿ ವಿದ್ಯಾಸಂಸ್ಥೆ ಈದೀಗ ಪ್ರಗತಿಯ ಪಥದತ್ತ ಸಾಗುತ್ತಿದೆ. 2 ದಶಕಗಳ ಹಿಂದೆ ಈ ಗ್ರಾಮೀಣ ಭಾಗದಲ್ಲಿ ಕೆಲವೇ ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಈ ವಿದ್ಯಾಸಂಸ್ಥೆ ಇಂದು ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಕಲರವದೊಂದಿಗೆ ಮುನ್ನಡೆಯುತ್ತಿದೆ. ಕಾಣಿಯೂರು ಮಾತ್ರವಲ್ಲದೇ ರಾಜ್ಯದ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಾ ಇದ್ದಾರೆ. ದೂರದ ಊರಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಪ್ರತ್ಯೇಕ ಸುಸಜ್ಜಿತ ಹಾಸ್ಟೇಲ್‌ನ ವ್ಯವಸ್ಥೆ, ಬೇರೆ ಬೇರೆ ಕಡೆಗಳಿಂದ ಬರುವ ವಿದ್ಯಾರ್ಥಿಗಳಿಗಾಗಿ ಶಾಲಾ ವಾಹನದ ವ್ಯವಸ್ಥೆಗಳು ಇದೆ. ಇಲ್ಲಿ ಇಂದಿನ ಆಧುನಿಕ ಶಿಕ್ಷಣದ ಜೊತೆಗೆ ನಮ್ಮ ಸಾಂಸ್ಕೃತಿಕ, ಕಲೆ, ಸಾಹಿತ್ಯ, ಕ್ರೀಡೆ, ಯೋಗ, ಯಕ್ಷಗಾನ, ಕರಾಟೆ, ಭರತನಾಟ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಲಾಗುತ್ತಿದ್ದು, ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಏಕಕಾಲದಲ್ಲಿ ಮೂರು ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಹೊರಗಿನ ಸಭಾಂಗಣ ಸಿದ್ದಗೊಂಡಿದೆ

.
ಶಿಕ್ಷಣ ಸಂಸ್ಥೆಯು ಕೇವಲ ಮಕ್ಕಳ ಶೈಕ್ಷಣಿಕ ಪ್ರಗತಿ, ಅಂಕಗಳಿಗೆ ಮಾತ್ರ ಸೀಮಿತಗೊಳಿಸದೇ ಶಿಕ್ಷಣದ ಜೊತೆ ಜೊತೆಗೆ ಪ್ರಶಾಂತವಾದ ವಾತಾವರಣದಲ್ಲಿ ಕಲಿಕೆಗೆ ಪೂರಕವಾದ ಸಂಸ್ಕಾರಯುತವಾದ, ಮೌಲ್ಯಾಧಾರಿತವಾದ ಶಿಕ್ಷಣ ವ್ಯವಸ್ಥೆ, ಭರತನಾಟ್ಯ, ಯಕ್ಷಗಾನ ಮತ್ತು ಜನಪದ ನೃತ್ಯ ತರಗತಿಗಳು ಇನ್ನಿತರ ಚಟುವಟಿಕೆಗಳಲ್ಲಿಯೂ ಮಕ್ಕಳನ್ನು ತೊಡಗಿಸಿಕೊಳ್ಳುತ್ತಿರುವುದು ಇಲ್ಲಿಯ ವಿಶೇಷ. ನಿರಂತರ 24 ಗಂಟೆಗಳ ಸೋಲಾರ್ ವಿದ್ಯುತ್ ಸೌಲಭ್ಯ, ಆಧುನಿಕ ಶಿಕ್ಷಣದಲ್ಲಿ ಸ್ಮಾರ್ಟ್ ಕ್ಲಾಸ್ ಯೋಜನೆಗಳು ಇಲ್ಲಿವೆ. ಪರಿಪೂರ್ಣ ಪಠ್ಯೇತರ ಚಟುವಟಿಕೆಗಳ ಮೂಲಕ ಸಮಗ್ರ ಮತ್ತು ಪರಿಪೂರ್ಣ ಶಿಕ್ಷಣ ದೊರಕಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿರುವುದು ಇಲ್ಲಿನ ಪ್ರಗತಿಯಿಂದ ಕಾರಣವಾಗಿದೆ.

ದಾಖಲೆಯ ಫಲಿತಾಂಶ: ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಆಂಗ್ಲ ಮತ್ತು ಕನ್ನಡ ಮಾಧ್ಯಮದ ವಿಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಇಲ್ಲಿನ ವಿದ್ಯಾರ್ಥಿಗಳು ಅತ್ಯುತ್ತಮ ಶೈಕ್ಷಣಿಕ ಸಾಧನೆಯಿಂದ ಸಾಗುತ್ತಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗದಲ್ಲಿ ೧೯ವರುಷಗಳಿಂದ ನಿರಂತರವಾಗಿ ಉತ್ತಮವಾದ ಅಂಕಗಳೊಂದಿಗೆ ಶೇ ೧೦೦ ಫಲಿತಾಂಶ ಪಡೆದು ದ.ಕ ಜಿಲ್ಲೆಯಲ್ಲಿ ದಾಖಲೆಯನ್ನು ನಿರ್ಮಿಸಿದೆ. ಕನ್ನಡ ಮಾಧ್ಯಮ ವಿಭಾಗದಲ್ಲೂ ೧೩ಬಾರಿ ನೂರು ಶೇ ಫಲಿತಾಂಶವನ್ನು ಗಳಿಸಿಕೊಂಡ ಈ ಸಂಸ್ಥೆ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಾಕೃತಿಕ ರಮ್ಯ ತಾಣದಲ್ಲಿ ಕಂಗೊಳಿಸುತ್ತಿರುವ, ಸುಸಜ್ಜಿತ ಕ್ಯಾಂಪಸ್‌ನಲ್ಲಿ ನೆಲೆಗೊಂಡಿರುವ ಪ್ರಗತಿಮುಖಿ ಸಂಸ್ಥೆ ಇದಾಗಿದೆ. ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರ ಕಲ್ಪನೆಯ ಕನಸು ಸಾಕಾರಗೊಳ್ಳಲು ವಿದ್ಯಾಸಂಸ್ಥೆಯ ಮುಖ್ಯಗುರು ಸರಸ್ವತಿಯವರೊಂದಿಗೆ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಉತ್ತಮ ಆಡಳಿತ ಮಂಡಳಿ, ಭೋಧಕ ವೃಂದ ಮತ್ತು ಭೋದಕೇತರ ಸಿಬ್ಬಂದಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಕ್ಷಣ ಸಂಸ್ಥೆಯು ಕೇವಲ ಮಕ್ಕಳ ಶೈಕ್ಷಣಿಕ ಪ್ರಗತಿ, ಅಂಕಗಳಿಗೆ ಮಾತ್ರ ಸೀಮಿತಗೊಳಿಸದೇ ಶಿಕ್ಷಣದ ಜೊತೆ ಜೊತೆಗೆ ಪ್ರಶಾಂತವಾದ ವಾತಾವರಣದಲ್ಲಿ ಕಲಿಕೆಗೆ ಪೂರಕವಾದ ಸಂಸ್ಕಾರಯುತವಾದ, ಮೌಲ್ಯಾಧಾರಿತವಾದ ಶಿಕ್ಷಣ ವ್ಯವಸ್ಥೆ, ಭರತನಾಟ್ಯ, ಯಕ್ಷಗಾನ ಮತ್ತು ಜನಪದ ನೃತ್ಯ ತರಗತಿಗಳು ಇನ್ನಿತರ ಚಟುವಟಿಕೆಗಳಲ್ಲಿಯೂ ಮಕ್ಕಳನ್ನು ತೊಡಗಿಸಿಕೊಳ್ಳುತ್ತಿರುವುದು ಇಲ್ಲಿಯ ವಿಶೇಷ. ಗ್ರಾಮೀಣ ಪ್ರದೇಶವಾದ ಕಾಣಿಯೂರಿನಲ್ಲಿ ಸಮಾಜಕ್ಕೆ ಉನ್ನತ ಮಟ್ಟದ ವಿದ್ಯಾಭ್ಯಾಸ ಹಾಗೂ ಕ್ರೀಡಾಕ್ಷೇತ್ರದಲ್ಲಿ ಸಮಾಜವನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ 1993ರಲ್ಲಿ ಪ್ರಾರಂಭಿಸಿದ ಪ್ರಗತಿ ವಿದ್ಯಾಸಂಸ್ಥೆಯು ಹೆಜ್ಜೆ ಹೆಜ್ಜೆಗಳನ್ನು ಇಡುತ್ತಾ ಇದೀಗ ಬೆಳ್ಳಿಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿದೆ. ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಒಂದಾಗಿ ಗುರುತಿಸಲ್ಪಟ್ಟು ಇತಿಹಾಸದ ಪುಟದಲ್ಲಿ ಸೇರುವಂತಾಗಲು ಸಂಸ್ಥೆಯ ಫಲಿತಾಂಶ ಕಾರಣವಾಗಿದೆ. ಅದಕ್ಕಾಗಿ ಎಲ್ಲಾ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಪ್ರೋತ್ಸಾಹಿಸಿದ ಪೋಷಕರನ್ನು ಹಿತೈಷಿಗಳನ್ನು, ಹಿರಿಯ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಿದ್ದೇವೆ.- ಜಯಸೂರ್ಯ ರೈ ಮಾದೋಡಿ, ಸಂಚಾಲಕರು, ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು

ರಾಷ್ಟ್ರ ಮಟ್ಟದಲ್ಲಿಯೂ ಸಂಸ್ಥೆಯ ಹೆಸರು ಮುಂದು…
ಕಬಡ್ಡಿಯಲ್ಲಿ ೯ನೇ ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ, ಅಲ್ಲದೇ ಯೋಗ,ಕರಾಟೆ,ಚೆಸ್ ಸ್ಪರ್ಧೆಯಲ್ಲಿಯೂ ಕೂಡ ಈ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಹೆಸರನ್ನು ಗಳಿಸಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ..

LEAVE A REPLY

Please enter your comment!
Please enter your name here