ಅರ್ಕ ಶ್ರೀ ಮಹಾದೇವಿ ಭಜನಾ ಮಂದಿರಕ್ಕೆ ಹಸಿರುವಾಣಿ ಸಮರ್ಪಣೆ

0

ಇಂದು ಕಲಾಮಂದಿರ ಲೋಕಾರ್ಪಣೆ, ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ


ಪುತ್ತೂರು: ಕೊಡಿಪಾಡಿ ಗ್ರಾಮದ ಅರ್ಕ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಹಾಗೂ ವೇದಮೂರ್ತಿ ಶ್ರೀಧರ ಭಟ್ ಕಬಕರವರ ನೇತೃತ್ವದಲ್ಲಿ ಮೇ 28ರಂದು ನಡೆಯಲಿರುವ ವೈದಿಕ ಕಾರ್ಯಕ್ರಮ, ಶ್ರೀ ಮಹಾದೇವಿ ಕಲಾಮಂದಿರದ ಲೋಕಾರ್ಪಣೆ ಹಾಗೂ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಪ್ರಯುಕ್ತ ಮೇ.27ರಂದುಹಸಿರುವಾಣಿ ಸಮರ್ಪಣೆಗೊಂಡಿತು.

ಸಾಯಂಕಾಲ 4ಗಂಟೆಯಿಂದ ಹಸಿರುವಾಣಿ ಮೆರವಣಿಗೆ ಆರಂಭಗೊಂಡಿದ್ದು, ಹಣಿಯೂರು, ಪಳ್ಳತ್ತಾರು, ಕೋಂಟ್ರುಪ್ಪಾಡಿ, ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನ, ಆನಾಜೆ, ಬಟ್ರುಪ್ಪಾಡಿ, ಓಜಾಳ ಮೊದಲಾದ ಕಡೆಗಳಿಂದ ಸಂಗ್ರಹಿಸಿದ ಹಸಿರುವಾಣಿಯನ್ನು ಮೆರವಣಿಗೆ ಮೂಲಕ ಅರ್ಕ ಶ್ರೀ ಮಹಾದೇವಿ ಭಜನಾ ಮಂದಿರಕ್ಕೆ ತರಲಾಯಿತು. ವಿವಿಧ ವಾಹನಗಳು ಮೆರವಣಿಗೆಯಲ್ಲಿ ಭಾಗವಹಿಸಿದವು.

ಭಜನಾಮಂದಿರದ ವಠಾರದಲ್ಲಿ ವೇದಮೂರ್ತಿ ಶ್ರೀಧರ ಭಟ್ ಕಬಕರವರ ನೇತೃತ್ವದಲ್ಲಿ ಮೆರವಣಿಗೆಯನ್ನು ಸ್ವಾಗತಿಸಲಾಯಿತು. ಬಳಿಕ ಉಗ್ರಾಣ ಮುಹೂರ್ತ ನಡೆಯಿತು.

ಈ ಸಂದರ್ಭದಲ್ಲಿ ಕೊಡಿಪಾಡಿ ಗ್ರಾ.ಪಂ. ಸದಸ್ಯರಾದ ಗಿರಿಧರ ಗೌಡ ಗೋಮುಖ, ಸೋಮಪ್ಪ ಪೂಜಾರಿ ಓಜಾಲ, ಗಿರೀಶ್ ನಂದನ, ಶ್ರೀಧರ ಅರ್ಕ, ಸುಧೀರ್ ಪ್ರಸಾದ್ ಆನಾಜೆ, ಜಯರಾಮ ನಾಯ್ಕ್ ಅರ್ಕ, ನಾಗೇಶ್ ಪೆಲತ್ತಡಿ, ದೇವಪ್ಪ ಶೆಟ್ಟಿ, ಮನ್ಮಥ ಶೆಟ್ಟಿ ಶ್ಯಾರ, ರುಕುಮ ಬಟ್ರುಪ್ಪಾಡಿ, ದಿವಾಕರ ಗುತ್ತು, ಹರಿಕೃಷ್ಣ ಗೌಡ ಗುತ್ತು, ರಾಧಾಕೃಷ್ಣ ಪೂಜಾರಿ ಅರ್ಕ, ಧೀರಜ್ ಗೌಡ ಹಿರ್ಕುಡೆಲ್, ಕಿಶನ್ ಅರ್ಕ, ಜ್ಯೋತಿ ಜಯರಾಮ ನಾಯ್ಕ್   ಅರ್ಕ, ದಿವ್ಯಶ್ರೀಧರ ಅರ್ಕ, ಅಮಿತ ದೇವಪ್ಪ ಶೆಟ್ಟಿ, ಸರೋಜಿನಿ ಅರ್ಕ, ಪೌರ್ಣಿಕ ಮೊದಲಾದವರು ಉಪಸ್ಥಿತರಿದ್ದರು.


ಇಂದು: ಮೇ.28ರಂದು ಬೆಳಗ್ಗಿನಿಂದ ವೈದಿಕ ಕಾರ್ಯಕ್ರಮಗಳು ನಡೆದು ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ವಿವಿಧ ಭಜನಾ ಮಂಡಳಿಯವರಿಂದ ಭಜನಾಸೇವೆ ನಡೆಯಲಿದೆ.

ಸಾಯಂಕಾಲ ಕಲಾಮಂದಿರದ ಲೋಕಾರ್ಪಣೆ ನಡೆಯಲಿದೆ. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಊರಿನ ಸಾಧಕರಿಗೆ ಸನ್ಮಾನ ನಡೆಯಲಿದೆ. ಬಳಿಕ ರಾತ್ರಿ 9ಗಂಟೆಯಿಂದ ಶ್ರೀ ವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಸಂಪೂರ್ಣ ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ

LEAVE A REPLY

Please enter your comment!
Please enter your name here