ಭಕ್ತಕೋಡಿ ಎಸ್‌ಜಿಎಂ ವಿದ್ಯಾರ್ಥಿ ಪ್ರಜ್ವಲ್ ಪ್ರಾಮಾಣಿಕತೆ ಬಿದ್ದು ಸಿಕ್ಕಿದ ನಗದು ವಾರಸುದಾರ ಕಾರ್ಮಿಕನಿಗೆ ಹಸ್ತಾಂತರ

0

ಪುತ್ತೂರು:ವೀರಮಂಗಲ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ,ಪ್ರಸ್ತುತ ಭಕ್ತಕೋಡಿ ಎಸ್‌ಜಿಎಂ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ವೀರಮಂಗಲ ಹಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಪ್ರಜ್ವಲ್‌ರವರಿಗೆ ದಾರಿಯಲ್ಲಿ ಬಿದ್ದು ಸಿಕ್ಕಿದ ರೂ. 8000 ನಗದನ್ನು, ಹಣ ಕಳೆದುಕೊಂಡ ವಾರಿಸುದಾರ ರಬ್ಬರ್ ಟ್ಯಾಪರ್ ಕಾರ್ಮಿಕನಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

 


ವೀರಮಂಗಲದ ಶ್ರೀ ದೇವಿ ಸ್ಟೋರ್‌ನ ಬಾಡಿಗೆ ಮನೆಯಲ್ಲಿರುವ ತಮಿಳುನಾಡಿನ ನಿವಾಸಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಹಣವನ್ನು ಕಳೆದುಕೊಂಡಿದ್ದರು. ಭಕ್ತಕೋಡಿ ಎಸ್‌ಜಿಎಂ ಶಾಲೆಯಿಂದ ಸಂಜೆ ಮನೆಗೆ ತೆರಳುತ್ತಿದ್ದ ಪ್ರಜ್ವಲ್‌ರವರಿಗೆ ಮಾರ್ಗದ ಬದಿ ರೂ.8 ಸಾವಿರ ನಗದಿರುವ ಕಟ್ಟು ಸಿಕ್ಕಿತ್ತು.ಈ ಕುರಿತು ಮನೆಯವರಲ್ಲಿ ವಿಷಯ ತಿಳಿಸಿದಾಗ, ಹಣ ಕಳೆದುಕೊಂಡವರ ಬಗ್ಗೆ ಶಾಲೆಯಲ್ಲಿ ಹೇಳಿದ್ದ ಪ್ರಕಟಣೆಯನ್ನು ಪ್ರಜ್ವಲ್‌ರವರ ತಂಗಿ ತಿಳಿಸಿದರು.ಮಗನಿಗೆ ಹಣ ಬಿದ್ದು ಸಿಕ್ಕಿರುವ ಕುರಿತು ಪ್ರಜ್ಚಲ್‌ರವರ ತಂದೆ ಲಿಂಗಪ್ಪ ಗೌಡರು ತಕ್ಷಣ ಶಾಲೆಯ ಮುಖ್ಯಗುರುಗಳಿಗೆ ತಿಳಿಸಿದ್ದಾರೆ.ಮರುದಿನ ವಾರಸುದಾರರನ್ನು ಶಾಲೆಗೆ ಬರಹೇಳಿ ಹಣವನ್ನು ನೀಡಲಾಯಿತು.ಹಣಕಳೆದುಕೊಂಡಿದ್ದ ವ್ಯಕ್ತಿ ಪ್ರಜ್ವಲ್‌ರಿಗೆ ಬಹುಮಾನ ರೂಪವಾಗಿ ರೂ.500 ನಗದು ಹಾಗೂ ಶಾಲಾ ಮಕ್ಕಳಿಗೆ ಸಿಹಿತಿಂಡಿ ಹಂಚಿ ಕೃತಜ್ಣತೆ ಅರ್ಪಿಸಿದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ತಾರಾನಾಥ ಸವಣೂರು, ಶಿಕ್ಷಕರಾದ ಹರಿಣಾಕ್ಷಿ, ಶೋಭಾ ,ಶ್ರೀಲತಾ, ಹೇಮಾ, ಕವಿತಾ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here