ಅರ್ಕ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ದ್ವಾದಶ ನಾಳಿಕೇರ ಗಣಪತಿ ಹವನ, ಪುರಸ್ವರ ಶ್ರೀ ದುರ್ಗಾ ಹವನ

0


ಪುತ್ತೂರು: ಕೊಡಿಪಾಡಿ ಗ್ರಾಮದ ಅರ್ಕ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮೇ.28ರಂದು ನಡೆಯಲಿರುವ ಶ್ರೀ ಮಹಾದೇವಿ ಕಲಾಮಂದಿರದ ಲೋಕಾರ್ಪಣೆ ಕಾರ್ಯಕ್ರಮ ಹಾಗೂ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಪ್ರಯುಕ್ತ ಬೆಳಗ್ಗೆ ವೈದ್ಧಿಕ ಕಾರ್ಯಕ್ರಮ ಹಾಗೂ ಭಜನೆಗೆ ವೇದಮೂರ್ತಿ ಶ್ರೀ‌ ಶ್ರೀಧರ ಭಟ್ ಕಬಕ ರವರು ಚಾಲನೆ‌ ನೀಡಿದರು.

ಮೇ.28ರಂದು ಬೆಳಗ್ಗೆ ಗುರು ಗಣಪತಿ ಪ್ರಾರ್ಥನೆಯೊಂದಿಗೆ ದ್ವಾದಶ ನಾಳಿಕೇರ ಗಣಪತಿ ಹವನ, ಪುರಸ್ವರ ಶ್ರೀ ದುರ್ಗಾ ಹವನ, ಮಧ್ಯಾಹ್ನ ಹವನದ ಪೂರ್ಣಾಹುತಿ, ಶ್ರೀ ಮಹಾದೇವಿ ಅಮ್ಮನವರಿಗೆ ವಿಶೇಷ ದುರ್ಗಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಬೆಳಗ್ಗಿನಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನಾಸೇವೆ ನಡೆಯಿತು.

LEAVE A REPLY

Please enter your comment!
Please enter your name here