ವಿಟ್ಲದ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ಎಸ್.ಎಸ್.ಎಲ್.ಸಿ‌. ಸಾಧಕ ವಿದ್ಯಾರ್ಥಿಗಳಿಗೆ ಅಬಿನಂದನಾ ಕಾರ್ಯಕ್ರಮ

0

  • ವಿದ್ಯಾರ್ಥಿಗಳ ಸಾಧನೆ ನಮಗೆಲ್ಲ ಸ್ಫೂರ್ತಿ: ಫಾ. ಐವನ್ ಮೈಕಲ್ ರೋಡ್ರಿಗಸ್

 

ವಿಟ್ಲ:ನಮಗೆಲ್ಲಾ ತುಂಬ ಸಂತಸದ ಕ್ಷಣ ಇದಾಗಿದೆ. ವಿದ್ಯಾರ್ಥಿಗಳ ಸಾಧನೆ ನಮಗೆಲ್ಲ ಸ್ಫೂರ್ತಿ. ಶಿಕ್ಷಕರ ನಿರಂತರ ಪರಿಶ್ರಮವೇ ವಿದ್ಯಾರ್ಥಿಗಳ ಈ ಸಾಧನೆಗೆ ಕಾರಣ ಎಂದು ಶಾಲಾ ಸಂಚಾಲಕರಾದ ಫಾ. ಐವನ್ ಮೈಕಲ್ ರೋಡ್ರಿಗಸ್ ಹೇಳಿದರು.

ಅವರು ವಿಟ್ಲದ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ಮೇ.27ರಂದು ನಡೆದ ಎಸ್.ಎಸ್.ಎಲ್.ಸಿ.ಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ ಮುಖ್ಯಸ್ಥರಾದ ಫಾ. ಸುನಿಲ್ ಪ್ರವೀಣ್ ಪಿಂಟೋರವರು ಸ್ವಾಗತಿಸಿ, ಮಾತನಾಡಿ ನಮ್ಮ ಪ್ರಯತ್ನಕ್ಕೆ ಸಂದ ಪುರಸ್ಕಾರ ಇದಾಗಿದ್ದು ವಿದ್ಯಾರ್ಥಿಗಳ ಈ ಸಾಧನೆ ನಮಗೆ ತುಂಬಾ ಸಂತೋಷ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಸಾಧನೆಗೈದ ಕ್ರಿಸ್ಟಲ್ ಜ್ಯೋತಿ ಲೋಬೋ, ಪ್ರಣಮ್ಯ ಬಿ ಶೆಟ್ಟಿ, ಆರ್. ವಿ. ಭುವನ್, ಫ್ಲವಿಟ ತನಿಷ ಮಿನೇಜಸ್ , ಜೆನಿಶಾ ಪಿಂಟೋ, ಅನುಷಾ ಶಾಲೆಟ್, ವಸುಂದರ ಗಣೇಶ್, ಯುವರಾಜ್ ಎಸ್ ನಾಯ್ಕ, ಅನುಪಮಾ ಪೂರ್ತಿರವರನ್ನು ಸನ್ಮಾನಿಸಲಾಯಿತು. ಸಾಧನೆಗೈದ ವಿದ್ಯಾರ್ಥಿಗಳ ಪೈಕಿ ಕ್ರಿಸ್ಟಲ್ ಜ್ಯೋತಿ ಲೋಬೋ ಹಾಗೂ ಪ್ರಣಮ್ಯ ಬಿ ಶೆಟ್ಟಿರವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಸಾಧನೆಗೆ ಸಹಕಾರವಿತ್ತ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ವಿಜಯ ಪಾಯಿಸ್, ಕ್ಲೋಡಿ ಲೋಬೊ ಹಾಗೂ ಶಿಕ್ಷಕರು ಉಪಸ್ಥಿತರಿದ್ದು, ಶಿಕ್ಷಕಿ ಸಂಧ್ಯಾ ಎಂ. ಡಿ. ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.

LEAVE A REPLY

Please enter your comment!
Please enter your name here