ಅರ್ಕ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ಕಲಾಮಂದಿರ ಲೋಕಾರ್ಪಣೆ

0

ಪುತ್ತೂರು: ದೇವರಿಗೆ ಭಕ್ತರ ಮೇಲೆ ಪ್ರೀತಿ ಹೆಚ್ಚಾದಾಗ ಅವರು ಸಾನಿಧ್ಯ ಸೃಷ್ಠಿ ಮಾಡುತ್ತಾರೆ. ಭಜನೆಗಳು ಮನೆ ಮನೆಗಳಲ್ಲಿ ನಡೆದು ಬರಬೇಕು. ಕಾಲ ಕೂಡಿದಾಗ ಯಾವುದೇ ಕಾರ್ಯ ನೆರವೇರಲು ಸಾಧ್ಯ. ಪ್ರತಿಯೊಂದೂ ದೇವಸ್ಥಾನಗಳಿಗೆ ಅದರದೇ ಮಹತ್ವವಿದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣರವರು ಹೇಳಿದರು.


ಅವರು ಮೇ.೨೮ರಂದು ಕೊಡಿಪ್ಪಾಡಿ ಗ್ರಾಮದ ಅರ್ಕ ಶ್ರೀ ಮಹಾದೇವಿ ಭಜನಾಮಂದಿರದ ನೂತನ ಶ್ರೀ ಮಹಾದೇವಿ ಕಲಾಮಂದಿರವನ್ನು ಲೋಕಾರ್ಪಣೆಗೊಳಿಸಿ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಭಜನೆ ದೇವರನ್ನು ಒಲಿಸುವ ಪ್ರಮುಖ ಮಾರ್ಗ. ದೇವರ ಪ್ರೇರಣೆ ಇಲ್ಲದಿದ್ದರೆ ಏನನ್ನೂ ಸಾಧಿಸಲಾಗದು. ದೇವರಿಗಾಗಿ ನಿಸ್ವಾರ್ಥ ಕೆಲಸ ಮಾಡುವ ಮನಸ್ಸು ನಮ್ಮದಾಗಬೇಕು. ದೇವರು ಬಿಂಬ, ನಾವು ಪ್ರತಿಬಿಂಬ. ಕಲಾ ಸೇವೆ ಮಾಡಿದಾಗ ದೇವರು ಒಲಿಯಲು ಸಾಧ್ಯ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ಈ ವೇದಿಕೆಯಿಂದ ಆಗಲಿ. ಸಂಸ್ಕಾರ ನೀಡುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ. ಇದೊಂದು ಬಹಳಷ್ಟು ಕಾರಣಿಕದ ಕ್ಷೇತ್ರವಾಗಿ ಬೆಳಗಲಿ ಎಂದರು.

ಕಲಾಮಂದಿರ ನಿರ್ಮಾಣ ಈ ಕ್ಷೇತ್ರಕ್ಕೆ ಮತ್ತಷ್ಟು ಬಲ ನೀಡಿದೆ:

ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ರವರು ಆಶೀರ್ವಚನ ನೀಡಿ ಹರಿನಾಮ ಸಂಕೀರ್ತನೆಯ ಮೂಲಕ ಈ ಮಣ್ಣಿನಲ್ಲಿ ದೇವರನ್ನು ಒಲಿಸಿಕೊಳ್ಳಲಾಗಿದೆ. ಭಾವುಕತೆ ಭಕ್ತಿಯ ಪರವಶತೆಯ ಮೂಲಕ ಸಿದ್ದಿಯ ಕ್ಷೇತ್ರವಾಗಲು ಸಾಧ್ಯ. ಈ ಪ್ರದೇಶದಲ್ಲಿ ಜಾಗೃತ ಸಮಾಜ ನಿರ್ಮಾಣವಾಗಿದೆ. ಕಲಾಮಂದಿರ ನಿರ್ಮಾಣ ಈ ಕ್ಷೇತ್ರಕ್ಕೆ ಮತ್ತಷ್ಟು ಬಲ ನೀಡಿದೆ ಎಂದರು. ನಾವಿಂದು ಸಂದಿಗ್ದ ಪರಿಸ್ಥಿತಿಯಲ್ಲಿದ್ದೇ ವೆ. ಈ ದೇಶದ ಮೇಲೆ ಹಲವಾರು ಆಕ್ರಮಣಗಳು ಈ ಹಿಂದೆ ನಡೆದು ಹೋಗಿದೆ. ಈಗಲೂ ಬೇರೆಬೇರೆ ರೀತಿಯಲ್ಲಿ ನಡೆಯುತ್ತಲೇ ಇದೆ. ಹಾಳಾಗಿರುವುದು ಮನುಷ್ಯನ ಗುಣ ಸ್ವಭಾವ, ಆಚಾರ ವಿಚಾರಗಳು. ಸುದೃಡ ಹಿಂದೂ ಸಮಾಜದಲ್ಲಿರುವ ಜಾತಿಗಳಿಗೆ ಅದರದೇ ಆದ ಮಹತ್ವವಿದೆ. ನಮ್ಮಲ್ಲಿರುವ ಆಚಾರ ವಿಚಾರಗಳನ್ನು ಗಟ್ಟಿಗೊಳಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದ ಅವರು, ಭಜನೆ, ಯಜ್ಞಯಾಗಾದಿಗಳ ಪ್ರಭಾವ ದೇಶದಲ್ಲಿ ಬೀರಿದೆ. ನಮ್ಮ ಪರಂಪರೆಯನ್ನು ಉಳಿಸಿಬೆಳೆಸುವ ಕೆಲಸವಾಗಬೇಕು. ದೇಶಕ್ಕೆ, ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುವ ಮನಸ್ಸು ನಮ್ಮದಾಗಲಿ. ನಾವಿಂದು ಯೋಚನೆ ಮಾಡಬೇಕಾದ ಪರಿಸ್ಥಿತಿಯಲ್ಲಿzವೆ. ಮಾತ್ಸರ್ಯವನ್ನು ಬಿಟ್ಟು ಧರ್ಮ ಕ್ಷೇತ್ರದ ಏಳಿಗೆಗೆ ಎಲ್ಲರೂ ಸಹಕಾರ ನೀಡಬೇಕಾಗಿದೆ. ಪಾವಿತ್ರ್ಯತೆ ಉಳಿಸುವ ಕೆಲಸ ನಮ್ಮಿಂದಲೇ ಆಗಬೇಕು ಎಂದರು.

ಭಜನೆಯ ಜೊತೆಗೆ ಸಂಸ್ಕೃತಿ ಬಿಂಬಿಸುವ ಕೆಲಸವಾಗಬೇಕು:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರುರವರು ಮಾತನಾಡಿ ಹಿಂದೂ ಸಮಾಜ ಒಂದಾಗಿ ಒಟ್ಟಾಗಬೇಕಾಗಿದೆ. ಯುವ ಪೀಳಿಗೆಗೆ ಸನಾತನ ಹಿಂದೂ ಸಂಸ್ಕೃತಿ ಜ್ಞಾನ ಹುಟ್ಟಿಸುವ ಕೆಲಸವಾಗಬೇಕು. ಶ್ರದ್ಧಾ ಸಂಪ್ರದಾಯವನ್ನು ನಾವು ಪಾಲನೆಮಾಡುವುದು ಅತೀ ಅಗತ್ಯ. ನಮ್ಮ ಆರಾಧನಾ ಪದ್ದತಿಯಲ್ಲಿ ವೈವಿಧ್ಯವಿದೆ.

ಕಲಾರಾಧನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಲಾಮಂದಿರ ನಿರ್ಮಾಣವಾಗಿರುವುದು ಸಂತಸದ ವಿಚಾರ. ಈ ಭಜನಾ ಮಂದಿರದ ಅಭಿವೃದ್ಧಿಯ ಮೂಲಕ ಇಲ್ಲಿನ ಜನರ ಹೃದಯ ಶ್ರೀಮಂತಿಕೆ ಅನಾವರಣವಾಗಿದೆ. ಭಜನೆಯ ಜೊತೆಗೆ ಸಂಸ್ಕೃತಿ ಬಿಂಬಿಸುವ ಕೆಲಸವಾಗಬೇಕು ಎಂದರು. ದೈವದೇವಸ್ಥಾನ ಭಜನಾ ಮಂದಿರಗಳಿಗೆ ಅನುದಾನ ಕೊಡುವ ಕೆಲಸ ಸರಕಾರದಿಂದ ಆಗುತ್ತಿದೆ. ಹಿಂದೂ ಬಾಂಧವರ ಭಾವನೆಗೆ ಸರಕಾರ ಮನ್ನಣೆ ನೀಡುತ್ತಿದೆ. ನಮ್ಮ ನಂಬಿಕೆಯನ್ನು ನಾವು ಉಳಿಸಿಕೊಂಡು ಬರಬೇಕು. ನಮ್ಮ ಸಮಾಜಕ್ಕೆ ಹಲವಾರು ಆಘಾತ ನೀಡುವ ಸಂಗತಿಗಳಾಗುತ್ತಿದೆ. ನಮ್ಮ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಅವಶ್ಯಕತೆ ಬಹಳಷ್ಟಿದೆ. ಧರ್ಮ ಕ್ಷೇತ್ರಗಳ ಅಭಿವೃದ್ದಿ ಇನ್ನಷ್ಟು ಆಗಬೇಕಾಗಿದೆ ಎಂದ ಅವರು ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ೧೦ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಮಂದಿರ ನಿರ್ಮಾಣದ ಹಿಂದೆ ಹಲವರ ಶ್ರಮವಿದೆ:

ಮಂಗಳೂರು ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ಕೆ.ಸಿ.ನಾಕ್ ರವರು ಮಾತನಾಡಿ ನಾನು ಹುಟ್ಟಿದ ಊರಿನಲ್ಲಿ ಇಷ್ಟೊಂದು ದೊಡ್ಡ ಭಜನಾಮಂದಿರ ನಿರ್ಮಾಣವಾಗಿರುವುದು ತುಂಬ ಕುಶಿ ತಂದಿದೆ. ಮಂದಿರದ ನಿರ್ಮಾಣದಲ್ಲಿ ಹಲವರ ಶ್ರಮವಿದೆ. ಇದೀಗ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಈ ಮಂದಿರ ಮುಂದಿನ ದಿನಗಳಲ್ಲಿ ಬಹಳಷ್ಟು ದೊಡ್ಡ ಕ್ಷೇತ್ರವಾಗಿ ಬೆಳಗಲಿ ಎಂದು ಶುಭಹಾರೈಸಿದರು.

ಧರ್ಮ ಜಾಗೃತಿ ತಿಳಿ ಹೇಳುವ ಕೆಲಸ ಭಜನಾ ಮಂದಿರದಿಂದ ಆಗಲಿ:

ಸಂಪ್ಯ ಅಕ್ಷಯ ಕಾಲೇಜಿನ ಸಂಚಾಲಕರಾದ ಜಯಂತ ನಡುಬೈಲುರವರು ಮಾತನಾಡಿ ಧರ್ಮ ಜಾಗೃತಿ ತಿಳಿ ಹೇಳುವ ಕೆಲಸ ಇಂತಹ ಭಜನಾ ಮಂದಿರದ ಮೂಲಕ ಆಗಲಿ. ಇದೀಗ ಕೂಡುಕುಟುಂಬ ಕಡಿಮೆಯಾಗುತ್ತಿದೆ, ಸಂಸ್ಕಾರ ಸಂಸ್ಕೃತಿ ದೂರವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ಭಜನೆಯತ್ತ ಒಲವು ತೋರುತ್ತಿದ್ದಾರೆ. ಭಜನೆಗೆ ಅದರz ಆದ ಮಹತ್ವವಿದೆ. ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲರಿಂದಲೂ ಆಗಬೇಕು. ಊರು ಸದೃಢವಾಗಲು ಇಂತಹ ಭಜನಾಮಂದಿರ, ಧರ್ಮಕೇಂದ್ರಗಳು ಅಗತ್ಯಎಂದರು.

ಕ್ಷೇತ್ರ ಬೆಳಗಿದರೆ ಊರಿಗೆ ಶ್ರೇಯಸ್ಸು:

ನವಚೇತನ ಚಿಟ್ಸ್ ಮಂಗಳೂರು ಇದರ ಲೊಕೇಶ್ ಶೆಟ್ಟಿ ಕಲ್ಲಂದಡ್ಕರವರು ಮಾತನಾಡಿ ಈ ಕ್ಷೇತ್ರದಲ್ಲಿ ಇಷ್ಟೊಂದು ಬೆಳವಣಿಗೆ ಕಂಡಾಗ ತುಂಬಾ ಕುಶಿಯಾಗಿದೆ. ಕ್ಷೇತ್ರ ಬೆಳಗಿದರೆ ಊರಿಗೆ ಶ್ರೇಯಸ್ಸು. ಭಜನೆಗೆ ಅಪಾರ ಶಕ್ತಿ ಹಾಗೂ ಒಗ್ಗಟ್ಟು ಇದೆ. ಜನರ ಭಜನೆಯ ಶಕ್ತಿಯಿಂದ ಇಲ್ಲಿ ಇಷ್ಟೆಲ್ಲ ಅಭಿವೃದ್ದಿಯಾಗಲು ಸಾಧ್ಯವಾಗಿದೆ ಎಂದರು.

ವಾಸ್ತು ಇಂಜಿನಿಯರ್, ನಗರಸಭಾ ಸದಸ್ಯರಾದ ಪಿ.ಜಿ. ಜಗನ್ನಿವಾಸ ರಾವ್, ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಎರ್ಕಡಿತ್ತಾಯ, ನಗರಸಭಾ ಸದಸ್ಯರಾದ ಸುಂದರ ಪೂಜಾರಿ ಬಡಾವು, ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನ ಪುತ್ತೂರು ಶಾಖಾ ವ್ಯವಸ್ಥಾಪಕರಾದ ಮನೋಹರ್ ಕೊಳಕ್ಕಿಮಾರ್, ಭಜನಾಮಂಡಳಿಯ ಅಧ್ಯಕ್ಷರಾದ ಶ್ರೀಧರ ಅರ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅರ್ಕ ಶ್ರೀ ಮಹಾದೇವಿ ಭಜನಾಮಂದಿರದ ಗೌರವಾಧ್ಯಕ್ಷರಾದ ವೇದಮೂರ್ತಿ ಶ್ರೀ ಶ್ರೀಧರ ಭಟ್ ಕಬಕ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಊರಿನ ಸಾಧಕರಾದ ಮೋನಪ್ಪ ಮಡಿವಾಳ, ಪ್ರವೀಣ್ ಬಟ್ರುಪ್ಪಾಡಿ, ಮನ್ಮತ ಶೆಟ್ಟಿ ಶ್ಯಾರರವರನ್ನು ಸನ್ಮಾನಿಸಲಾಯಿತು.

ಕಲಾಮಂದಿರ ನಿರ್ಮಾಣ ಸಂದರ್ಭದಲ್ಲಿ ಸಹಕಾರ ನೀಡಿದ ಸಮೃದ್ದಿ ಕನ್ಸಸ್ಟ್ರಕ್ಷ ನ್ ನ ಇಂಜಿನಿಯರ್ ಸುಧೀರ್ ಪ್ರಸಾದ್ ಎಂ., ಗಿರೀಶ್ ಗೌಡ ಗುತ್ತು, ನಾಗೇಶ ಪೆಲತ್ತಡಿ ಹಾಗೂ ಸುದ್ದಿ ಬಿಡುಗಡೆಯ ವರದಿಗಾರರಾದ ನಿಶಾಕಿರಣ್ ಬಾಳೆಪುಣಿರವರನ್ನು ಅತಿಥಿಗಳು ಗೌರವಿಸಿದರು.

ಜಯರಾಮ ನಾಕ್ ಅರ್ಕ ದಂಪತಿ ಸ್ವಾಮೀಜಿಗೆ ಹಾಗೂ ಲೋಕಾರ್ಪಣಾ ಸಮಿತಿ ಅಧ್ಯಕ್ಷ ಸುಧೀರ್ ಪ್ರಸಾದ್ ಎಂ. ರವರು ಅಸ್ರಣ್ಣರವರಿಗೆ ಫಲಪುಷ್ಪ ನೀಡಿ ಸ್ವಾಗತಿಸಿದರು.

ನಾಗೇಶ್ ಪೆಲತ್ತಡಿ, ಹರಿಕೃಷ್ಣ ಗುತ್ತು, ದೇವಯ್ಯ ಗೌಡ ಅಂಜಲ, ಶೀನಪ್ಪ ನಾಯ್ಕ್, ದಿವಾಕರ ಗೌಡ ಗುತ್ತು, ರಾಧಾಕೃಷ್ಣ ಅರ್ಕ, ದಿನೇಶ್ ನಾಯ್ಕ್ ಅರ್ಕ, ದೇವಪ್ಪ ಶೆಟ್ಟಿ, ಗಿರೀಶ್ ಗುತ್ತು, ಲಕ್ಷ್ಮಣ ಬಟ್ರುಪ್ಪಾಡಿ, ರುಕ್ಮಯ್ಯ ಬಟ್ರುಪ್ಪಾಡಿರವರು ಅತಿಥಿಗಳನ್ನು ಸ್ವಾಗತಿಸಿದರು.

ಮನ್ಮಥ ಶೆಟ್ಟಿ ಶ್ಯಾರ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೋಕಾರ್ಪಣಾ ಸಮಿತಿ ಅಧ್ಯಕ್ಷ ಸುಧೀರ್ ಪ್ರಸಾದ್ ಎಂ. ವಂದಿಸಿದರು.

ದ್ವಾದಶ ನಾಳಿಕೇರ ಗಣಪತಿ ಹವನ, ಪುರಸ್ವರ ಶ್ರೀ ದುರ್ಗಾ ಹವನ : ಬೆಳಗ್ಗೆ ವೈದಿಕ ಕಾರ್ಯಕ್ರಮ ಹಾಗೂ ಭಜನೆಗೆ ವೇದಮೂರ್ತಿ ಶ್ರೀಧರ ಭಟ್ ಕಬಕ ರವರು ಚಾಲನೆ ನೀಡಿದರು.

ಬೆಳಗ್ಗೆ ಗುರು ಗಣಪತಿ ಪ್ರಾರ್ಥನೆಯೊಂದಿಗೆ ದ್ವಾದಶ ನಾಳಿಕೇರ ಗಣಪತಿ ಹವನ, ಪುರಸ್ವರ ಶ್ರೀ ದುರ್ಗಾ ಹವನ, ಮಧ್ಯಾಹ್ನ ಹವನದ ಪೂರ್ಣಾಹುತಿ, ಶ್ರೀ ಮಹಾದೇವಿ ಅಮ್ಮನವರಿಗೆ ವಿಶೇಷ ದುರ್ಗಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಬೆಳಗ್ಗಿನಿಂದ ಸಾಯಂಕಾಲದ ವರೆಗೆ ವಿವಿಧ ಭಜನಾ ಮಂಡಳಿಯವರಿಂದ ಭಜನಾಸೇವೆ ನಡೆಯಿತು.

ಸುದ್ದಿ ಚಾನೆಲ್ ನಲ್ಲಿ ನಡೆದ ಭಜನಾ ಸ್ಪರ್ದೆಯಲ್ಲಿ ವಿಜೇತರಾದ ಅರ್ಕ ತಂಡಕ್ಕೆ ಪ್ರಶಸ್ತಿ ವಿತರಣೆ

 


ಸುದ್ದಿ ಬಿಡುಗಡೆ ಹಾಗೂ ಸುದ್ದಿ ಚಾನೆಲ್ ವತಿಯಿಂದ ನವರಾತ್ರಿ ಸಂದರ್ಭದಲ್ಲಿ ನಡೆದ ಭಜನಾ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ಮಹಾದೇವಿ ಭಜನಾ ಮಂಡಳಿ ಅರ್ಕ ತಂಡಕ್ಕೆ ಶ್ರೀದಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣರು ಪ್ರಶಸ್ತಿ ನೀಡಿ ಆಶಿರ್ವದಿಸಿದರು.

LEAVE A REPLY

Please enter your comment!
Please enter your name here