ಮಹಾಲಿಂಗೇಶ್ವರ ದೇವಸ್ಥಾನದ ನೇತೃತ್ವದ ಧಾರ್ಮಿಕ ಶಿಕ್ಷಣ – ಕಲ್ಲೇಗದಲ್ಲಿ 7ನೇ ಶಾಖೆ ಆರಂಭ

0

 


ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೇತೃತ್ವದಲ್ಲಿ ನಡೆಸಲ್ಪಡುತ್ತಿರುವ ಹಿಂದು ಧಾರ್ಮಿಕ ಶಿಕ್ಷಣದ 7ನೇ ಶಾಖೆಯನ್ನು ಮೇ 27ರಂದು ಕಲ್ಲೇಗ ಶ್ರೀದೇವಿ ಭಜನಾ ಮಂದಿರದಲ್ಲಿ ಆರಂಭಿಸಲಾಯಿತು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ ನಾರಾವಿ ಅವರು ಧಾರ್ಮಿಕ ಶಿಕ್ಷಣ ಶಿಬಿರನವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸುಬ್ರಹ್ಮಣ್ಯ ಶರ್ಮ ಉಪಸ್ಥಿತರಿದ್ದರು. ದೇವಳದ ಧಾರ್ಮಿಕ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಶಂಕರಿ ಶರ್ಮ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣವೇಣಿ ಮುಳಿಯ ಪ್ರಾರ್ಥಿಸಿದರು ಹಾಗೂ ಧಾರ್ಮಿಕ ತರಗತಿ ಪ್ರಾರಂಭಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಯಲಕ್ಷ್ಮೀ ವಿ.ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here