ಸುಳ್ಯಪದವು ಸರ್ವೋದಯ ಪ್ರೌಢ ಶಾಲಾ ವಿದ್ಯಾರ್ಥಿ ಸೃಜನಾಳಿಗೆ ಹಿಂದು ಜಾಗರಣ ವೇದಿಕೆ ವತಿಯಿಂದ ಸನ್ಮಾನ

0

ಬಡಗನ್ನೂರುಃ  ಸುಳ್ಯಪದವು ಸರ್ವೋದಯ ಪ್ರೌಢ ಶಾಲಾ ವಿದ್ಯಾರ್ಥಿ  ಸೃಜನಾ  2021-22 ನೇ ಸಾಲಿನ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ 612 ಅಂಕಗಳೊಂದಿಗೆ ಇತಿಹಾಸವನ್ನು ಬರೆದು ಶಾಲೆಗೂ, ಹೆತ್ತವರಿಗೂ, ಊರಿನವರಿಗೂ ಕೀರ್ತಿಯನ್ನು ತಂದು ಕೊಟ್ಟಿರುತ್ತಾಳೆ  ಈಕೆಯನ್ನು  ಮೇ 29 ತಮ್ಮ ನಿವಾಸದಲ್ಲಿ ಹಿಂದು ಜಾಗರಣ ವೇದಿಕೆ ಸುಳ್ಯಪದವು  ಇದರ ವತಿಯಿಂದ  ಸಾಲು ಹೊದಿಸಿ ಸನ್ಮಾನ ಮತ್ತು ಆರ್ಥಿಕವಾಗಿ 5,000 ರೂ ವನ್ನು ನೀಡಿ ಅಭಿನಂದಿಸಲಾಯಿತು. 

 

 

 ಸುಳ್ಯಪದವು ಆನಂದ ಪೂಜಾರಿ ಮತ್ತು ಪುಷ್ಪಾವತಿ ದಂಪತಿಗಳ ಪುತ್ರಿ.   ಈ ಸಂದರ್ಭದಲ್ಲಿ  ಸಮಿತಿ ಗೌರವ ಅಧ್ಯಕ್ಷ ವಾಮನ ಮುಲ್ಯ, ಅಧ್ಯಕ್ಷ ಹರಿಶ್ಚಂದ್ರ , ಪ್ರಧಾನ ಕಾರ್ಯದರ್ಶಿ ಸುಧೀರ್ ಶಬರಿನಗರ ಹಾಗೂ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here