ಬುಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ, ಪ್ರಭಾವಳಿ ಸಮರ್ಪಣೆ

0

 

  ಪುತ್ತೂರು:  ಶ್ರೀ ಚಕ್ರ ರಾಜರಾಜೇಶ್ವರಿ ದೇವಿಗೆ ದೇವಸ್ಥಾನದಲ್ಲಿ ಕುಕ್ಕಾಡಿ ಪ್ರೀತಮ್ ಪುತ್ತೂರಾಯರ ನೇತೃತ್ವದ್ಲಲಿ ನೇತೃತ್ವದಲ್ಲಿ ಮೇ.29ರಂದು ಪ್ರತಿಷ್ಠಾ ಮಹೋತ್ಸವ ಹಾಗೂ ರಂಗ ಪೂಜೆ ಜರಗಿತು. ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಹೋಮ, ಕಲಶಾಭಿಷೇಕ ಬಳಿಕ ಶ್ರೀಕೃಷ್ಣ ಯುವಕ ಮಂಡಲದ ವತಿಯಿಂದ ನೂತನ ಪ್ರಭಾವಳಿ ಸಮರ್ಪಣೆ ನಡೆದು ಸಂಜೆ ರಂಗ ಪೂಜೆ ನಡೆಯಿತು.


ಈ ಸಂದರ್ಭದಲ್ಲಿ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ಕಾರ್ಯದರ್ಶಿ ಜಯಂತ ಶೆಟ್ಟಿ ಕಂಬಳತಡ್ಡ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಿ.ಟಿ. ಸುರೇಶ್, ಶ್ರೀ ಕೃಷ್ಣ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಸುವರ್ಣ ಮೇರ್ಲ, ಕಾರ್ಯದರ್ಶಿ ಸುರೇಶ್ ಪೆಲತ್ತಡಿ ಮತ್ತು ಯುವಕ ಮಂಡಲದ ಸದಸ್ಯರುಗಳು ಉಪಸ್ಥಿತರಿದ್ದರು.

 

 

LEAVE A REPLY

Please enter your comment!
Please enter your name here