ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮಹಾಸಭೆ ; 75-85 ವರ್ಷ ತುಂಬಿದ ಸದಸ್ಯರಿಗೆ ಸನ್ಮಾನ

0

  • ಸಂಘದ ಸದಸ್ಯರಾದರೆ ನೆಮ್ಮದಿ ಸಂತೋಷ ಸಿಗುತ್ತದೆ-ಐತ್ತಪ್ಪ ನಾಯ್ಕ್

ಪುತ್ತೂರು:ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದಲ್ಲಿ 888 ಮಂದಿ ಸದಸ್ಯರಿದ್ದಾರೆ. ಆದರೆ ಇನ್ನೂ ಸುಮಾರು 1 ಸಾವಿರ ಮಂದಿ ಸದಸ್ಯರಾಗಲು ಬಾಕಿ ಇದ್ದಾರೆ. ಸಂಘಕ್ಕೆ ಸೇರಿದರೆ ಏನು ಸಿಗುತ್ತದೆ ಎಂಬ ಮನೋಭಾವನೆ ಕೆಲವರಲ್ಲಿದೆ.ಸಂಘಕ್ಕೆ ಸದಸ್ಯರಾದರೆ ನೆಮ್ಮದಿ, ಸಂತೋಷ ಸಿಗುತ್ತದೆ ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ ಅವರು ಹೇಳಿದರು.


ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಮೇ 28ರಂದು ನಡೆದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘ 40 ವರ್ಷದ ಅವಧಿಯಲ್ಲಿ 362 ಮಂದಿ ಸದಸ್ಯರನ್ನೊಳಗೊಂಡಿತ್ತು. 2013ರಲ್ಲಿ ಸುಂದರ ಭಟ್ ಅಧ್ಯಕ್ಷರಾದ ಬಳಿಕ ಸಂಘದಲ್ಲಿ ಹಲವು ಬದಲಾವಣೆ ಆಯಿತು.ಆಗ ಸದಸ್ಯತ್ವ ಸಂಖ್ಯೆ 424ಕ್ಕೆ ಏರಿತ್ತು.೨೦೧೬ರಲ್ಲಿ ಸಮಿತಿ ಬದಲಾವಣೆಯಾಗಿ ನಾನು ಅಧ್ಯಕ್ಷನಾಗಿ, ಶರತ್ ಕುಮಾರ್ ಕಾರ್ಯದರ್ಶಿಯಾಗಿ 26 ಮಂದಿಯ ಕಾರ್ಯಕಾರಿ ಸಮಿತಿಯಲ್ಲಿ ಇಲ್ಲಿನ ತನಕ ಒಟ್ಟು 888 ಮಂದಿಯ ಸದಸ್ಯತ್ವ ಮಾಡಲಾಯಿತು. ಈ ಪೈಕಿ 689 ಮಂದಿ ಸಕ್ರಿಯರಾಗಿದ್ದಾರೆ. ಇನ್ನೂ ಸುಮಾರು 1 ಸಾವಿರ ಮಂದಿ ಸದಸ್ಯರಾಗಲು ಬಾಕಿ ಇದ್ದಾರೆ. ಅವರೆಲ್ಲ ಸದಸ್ಯರಾಗಬೇಕು ಎಂದ ಅವರು, ಇದೇ ಸಂದರ್ಭ ಸಂಘದ ಸುವರ್ಣ ಮಹೋತ್ಸವ ಸಮಿತಿಯನ್ನು ಬರ್ಕಾಸ್ತುಗೊಳಿಸಿದರು.
75-85 ವರ್ಷ ತುಂಬಿದವರಿಗೆ ಸನ್ಮಾನ: ಸಂಘದ ಸದಸ್ಯರಾಗಿದ್ದು 75 ವರ್ಷ ತುಂಬಿದ 19 ಮಂದಿ, 80 ವರ್ಷ ತುಂಬಿದ 15 ಮಂದಿ, 85 ವರ್ಷ ತುಂಬಿದ ಓರ್ವರನ್ನು ಸಂಘದ ಮೂಲಕ ಸನ್ಮಾನಿಸಲಾಯಿತು. ಸುವರ್ಣ ಮಹೋತ್ಸವ ಸಂದರ್ಭ ವಿಶೇಷ ಹಾಡು ರಚನೆ ಮಾಡಿದ್ದ ವಿಶ್ರಾಂತ ಪ್ರಾಧ್ಯಾಪಕ ಪ್ರೊ|ಹರಿನಾರಾಯಣ ಮಾಡಾವು, ಸುವರ್ಣ ಮಹೋತ್ಸವದ ದಾನಿಗಳನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯಚಟುವಟಿಕೆ ಮತ್ತು ಅಭಿವೃದ್ಧಿಯಲ್ಲಿ ಪೂರ್ಣ ರೀತಿಯಲ್ಲಿ ಶ್ರಮಿಸಿದ ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್, ಕಾರ್ಯಕ್ರಮದ ಜೋಡಣೆಯಲ್ಲಿ ಸಹಕರಿಸಿದ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ಸೇರಿದಂತೆ ಹಲವು ರೀತಿಯಲ್ಲಿ ಸಹಕರಿಸಿದವರನ್ನು ಸಂಘದಿಂದ ಸನ್ಮಾನಿಸಲಾಯಿತು. ಹಿರಿಯರ ಸನ್ಮಾನ ಕಾರ್ಯಕ್ರಮವನ್ನು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಭಟ್ ನಿರ್ವಹಿಸಿದರು. ಸುವರ್ಣ ಮಹೋತ್ಸವದ ದಾನಿಗಳ ಸನ್ಮಾನ ಕಾರ್ಯಕ್ರಮವನ್ನು ಪ್ರೊ|ವತ್ಸಲಾರಾಜ್ಞಿ ಅವರು ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಲೀನಾ ಪುಡ್ತಾದೊ ದಾನಿಗಳ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ಜಗನ್ನಾಥ ರೈ ವರದಿ ಮಂಡಿಸಿದರು. ಕೋಶಾಧಿಕಾರಿ ಶರತ್ ಕುಮಾರ್ ಲೆಕ್ಕಪತ್ರ ಮಂಡಿಸಿದರು. ನಾರ್ಣಪ್ಪ ನಾಯ್ಕ ಅವರು ಅಂದಾಜು ಆಯವ್ಯಯ ಪತ್ರ ಮಂಡಿಸಿದರು.
ನೂತನ ಕಾರ್ಯಕಾರಿ ಸಮಿತಿ ರಚನೆ: ಸಂಘದ ಮುಂದಿನ 3 ವರ್ಷದ ಅವಧಿಗೆ ಸಂಬಂಧಿಸಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸಂಘದ ಕೋಶಾಧಿಕಾರಿ ಶರತ್ ಕುಮಾರ್ ಅವರು ಚುನಾವಣಾಧಿಕಾರಿಯಾಗಿ ಸಭೆಗೆ ಮಂಡಿಸಿದರು. ನಿರ್ಮಲ ಬಿ.ಕೆ., ಎನ್.ನಾರ್ಣಪ್ಪ ನಾಯ್ಕ್, ಶಿವಾನಂದ ಎನ್, ಜಗನ್ನಾಥ ರೈ, ಲೀನಾ ಪುಡ್ತಾದೋ, ಶರತ್ ಕುಮಾರ್ ರಾವ್, ಕೆ.ಸುಂದರ ನಾಯ್ಕ್, ಪ್ರೊ|ವತ್ಸಲಾರಾಜ್ಞಿ, ಬಿ.ಸೂರಪ್ಪ ಗೌಡ, ಶಂಕರಿ ಎಮ್.ಎಸ್ ಭಟ್, ಬಿ.ರಾಧಾಕೃಷ್ಣ ಭಟ್, ಜಯಂತಿ ಪಿ ನಾಯಕ್, ಯಶೋದಾ ಬಿ.ರಾವ್, ಕೆ.ಎಮ್. ದೇವದಾಸ್ ಗೌಡ, ಎ.ಗಂಗಯ್ಯ ಗೌಡ, ಸದಾಶಿವ ಎಸ್ ಎನ್, ಯು ಮಹಮ್ಮದ್ ಹಾಜಿ, ನಾಗಪ್ಪ ಗೌಡ ಬೊಮ್ಮೆಟ್ಟಿ, ಸರೋಜಿನಿ, ಬಿ.ಐತ್ತಪ್ಪ ನಾಯ್ಕ್, ಶಾಂತಿ ಟಿ ಹೆಗ್ಡೆ, ರಾಮದಾಸ್ ಗೌಡ, ಶಶಿಕಲಾ, ವಿಶ್ವನಾಥ ಶೆಟ್ಟಿ, ತಿರುಮಲೇಶ್ವರ ಭಟ್ ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಮಧ್ಯಾಹ್ನ ಭೋಜನದ ಬಳಿಕ ನೂತನ ಅಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ಸಂಘದ ಸದಸ್ಯ ಶಿವಾನಂದ ನಾಯ್ಕ್ ವಂದಿಸಿದರು. ಶಾಂತಿ ಟಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.ಸಂಘದ ಸದಸ್ಯರಾಗಿದ್ದು ನಿಧನರಾದ ಹಿರಿಯರಿಗೆ ಕಾರ್ಯಕ್ರಮದ ಆರಂಭದಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆಯೊಂದಿಗೆ ಅವರ ಅತ್ಮಕ್ಕೆ ಚಿರಶಾಂತಿ ಕೋರಲಾಯಿತು.
ಗೊತ್ತುವಳಿ ಮಂಡನೆ
ಇಲಾಖೆಗಳಲ್ಲಿ ಹಿರಿಯ ನಾಗರಿಕರ ಕೆಲಸಗಳನ್ನು ವಿಳಂಬಗೊಳಿಸಬಾರದು. ಸರಕಾರಿ/ ಖಾಸಗಿ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಕಾಯ್ದಿಟ್ಟ ಆಸನಗಳನ್ನು ಬಿಟ್ಟುಕೊಡುವಂತೆ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಬೇಕು ಎಂದು ಸಂಘದ ಗೊತ್ತುವಳಿಯನ್ನು ಸಂಘದ ಉಪಾಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ ಅವರು ಮಂಡಿಸಿದರು.

LEAVE A REPLY

Please enter your comment!
Please enter your name here