ರೋಟರಿ ಕ್ಲಬ್ ಪುತ್ತೂರು ಸಿಟಿಗೆ ಪ್ಲಾಟಿನಂ ಫ್ಲಸ್ ಗೌರವ

0

ಪುತ್ತೂರು: ರೋಟರಿ ಜಿಲ್ಲೆ 3181 ವ್ಯಾಪ್ತಿಗೊಳಪಟ್ಟ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಹೀಗೆ ನಾಲ್ಕು ಕಂದಾಯ ಜಿಲ್ಲೆಗಳಲ್ಲಿನ ಸುಮಾರು 86 ಕ್ಲಬ್‌ಗಳಲ್ಲಿ2021-22ನೇ ಸಾಲಿನಲ್ಲಿ ಹಮ್ಮಿಕೊಂಡ ಸಮಾಜಮುಖಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗುರುತಿಸಿ ನೀಡಲ್ಪಡುವ ಉನ್ನತ ಪ್ರಶಸ್ತಿಯಾದ ಪ್ಲಾಟಿನಂ ಫ್ಲಸ್‌ಗೆ ಆಯ್ಕೆಯಾದ ಏಳು ಕ್ಲಬ್‌ಗಳಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿಯು ಭಾಜನವಾಗಿದೆ ಮಾತ್ರವಲ್ಲ ರೋಟರಿ ಮೀಡಿಯಂ ಕ್ಲಬ್ ಕೆಟಗರಿಯಲ್ಲಿ ಜಿಲ್ಲೆಯಲ್ಲಿ ನಂಬರ್ ವನ್ ಸ್ಥಾನವನ್ನು ಪಡೆದಿದೆ.

ಕ್ಲಬ್‌ನಲ್ಲಿನ ಕ್ಲಬ್ ಸರ್ವಿಸ್, ಕಮ್ಯೂನಿಟಿ ಸರ್ವಿಸ್, ಇಂಟರ್‌ನ್ಯಾಷನಲ್ ಸರ್ವಿಸ್, ಯೂತ್ ಸರ್ವಿಸ್, ಪೊಲೀಯೋ ಜಾಗೃತಿ, ಪಬ್ಲಿಕ್ ಇಮೇಜ್ ವ್ಯಾನ್ ಕಾರ್ಯಕ್ರಮ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಇತ್ತೀಚೆಗೆ ಮೈಸೂರಿನಲ್ಲಿ ಜರಗಿದ ರೋಟರಿ ಜಿಲ್ಲೆ 3181 ಇದರ ಅಧ್ಯಯನ ಅವಾರ್ಡ್ಸ್ ನೈಟ್‌ನಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಹಂಚಿಕೆಯನ್ನು ಆಯಾ ಕ್ಲಬ್‌ಗಳ ಸದಸ್ಯರ ಸಂಖ್ಯೆಗನುಗುಣವಾಗಿ ಪ್ಲಾಟಿನಂ ಫ್ಲಸ್, ಪ್ಲಾಟಿನಂ, ಗೋಲ್ಡ್ ಹಾಗೂ ಸಿಲ್ವರ್ ಹೀಗೆ ನಾಲ್ಕು ಕೆಟಗರಿಯನ್ನು ಮಾಡಲಾಗಿತ್ತು. ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್, ಚಿತ್ರನಟಿ ಪ್ರಿಯಾಂಕ ಕುಮಾರಿ, ಜಿಲ್ಲಾ ಅವಾರ್ಡ್ಸ್ ಕಮ್ಯೂನಿಟಿ ಚೇರ್‌ಮ್ಯಾನ್ ರಂಗನಾಥ್ ಭಟ್‌ರವರು ಪ್ರಶಸ್ತಿಯನ್ನು ಹಸ್ತಾಂತರಿಸಿದರು.

ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಪ್ರಮೋದ್ ಮಲ್ಲಾರ, ರೋಟರಿ ಅಸಿಸ್ಟೆಂಟ್ ಗವರ್ನರ್ ಸುರೇಂದ್ರ ಕಿಣಿ, ಸುರೇಂದ್ರ ಕಿಣಿರವರ ಪತ್ನಿ ಶ್ರೀಲಕ್ಷ್ಮೀ ಕಿಣಿ, ಕಾರ್ಯದರ್ಶಿ ಗುರುರಾಜ್, ಉಪಾಧ್ಯಕ್ಷೆ ಸ್ವಾತಿ ಮಲ್ಲಾರ, ನಿಯೋಜಿತ ಅಧ್ಯಕ್ಷ ಪ್ರಶಾಂತ್ ಶೆಣೈ, ನಿಯೋಜಿತ ಕಾರ್ಯದರ್ಶಿ ಜಯಗುರು ಆಚಾರ್, ನಿಯೋಜಿತ ಕೋಶಾಧಿಕಾರಿ ಕಿರಣ್ ಬಿ.ವಿ, ನಿಯೋಜಿತ ಇಂಟರ್‌ನ್ಯಾಷನಲ್ ನಿರ್ದೇಶಕ ದಯಾನಂದ ಕೆ.ಎಸ್, ನಿಯೋಜಿತ ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ರಾಮಚಂದ್ರ ಪುಚ್ಚೇರಿರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here