ಸಿನಿಮಾ,ನಾಟಕ ಅಭಿನಯ ತರಬೇತಿ ಶಿಬಿರ: ನಾಳೆಯಿಂದ( ಜೂ.1) ಮೊಟ್ಟೆತ್ತಡ್ಕದಲ್ಲಿ ಆರಂಭ

0

ಪುತ್ತೂರು: ಮಂದಾರ ಕ್ರಿಯೇಷನ್ಸ್ ಸಾದರಪಡಿಸುವ ಸಿನಿಮಾ,ನಾಟಕ ಅಭಿನಯ ತರಬೇತಿ ಶಿಬಿರ ಜೂ.1 ರಿಂದ ಮೊಟ್ಟೆತ್ತಡ್ಕ ಮಿಷನ್‌ಮೂಲೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ವಠಾರದಲ್ಲಿ ಆರಂಭಗೊಳ್ಳಲಿದೆ. ತರಬೇತಿಯು ೨ ತಿಂಗಳ ಕಾಲ ನಡೆಯಲಿದ್ದು ರಾಜ್ಯದ ಪ್ರಸಿದ್ಧ ಸಿನಿಮಾ, ನಾಟಕ ಕಲಾವಿದರಿಂದ ಹಾಗೂ ತಂತ್ರಜ್ಞರಿಂದ ತರಬೇತಿ ನಡೆಯಲಿದೆ. ಪ್ರತಿದಿನ ಸಂಜೆ ೫.೩೦ ರಿಂದ ೭.೩೦ ರವರೇಗೆ ತರಬೇತಿ ನಡೆಯಲಿದೆ. ಎಲ್ಲಾ ವಯೋಮಾನದವರೂ ಕೂಡ ತರಬೇತಿಗೆ ಹಾಜರಾಗಬಹುದಾಗಿದ್ದು ತರಬೇತಿ ಬಳಿಕ ಸಿನಿಮಾ, ನಾಟಕಗಳಲ್ಲಿ ಅಭಿನಯಿಸಲು ಅವಕಾಶ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9980202308 ಗೆ ಕರೆ ಮಾಡಬಹುದು ಎಂದು ಮಂದಾರ ಕ್ರಿಯೇಷನ್ಸ್‌ನ ಸುಂದರ್ ರೈ ಮಂದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here