ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಯಾಗ, ನಿಧಿಕುಂಭಕ್ಕೆ ಮುಷ್ಠಿ ಕಾಣಿಕೆ ಸಮರ್ಪಣೆ

0

  • ಮನಸ್ಸಿನ ಜೊತೆ ಭಾವನೆಗಳು ಚೆನ್ನಾಗಿದ್ದರೆ ಬದುಕಿನಲ್ಲಿ ನೆಮ್ಮದಿ- ಮಾಣಿಲ ಶ್ರೀ

ಕಾಣಿಯೂರು: ನಿಷ್ಕಲ್ಮಷವಾಗಿ ಮಾಡುವ ಪ್ರತಿಯೊಂದು ಕಾರ್ಯಗಳು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಸಮರ್ಪಣಾ ಭಾವದ ಭಕ್ತಿಗೆ ಭಗವಂತ ಒಲಿಯುತ್ತಾನೆ. ಸುಂದರ ಬದುಕಿಗೆ ದಾರಿ ದೀಪವಾದ ನಮ್ಮ ತುಳುನಾಡಿನ ಆಚರಣೆಗಳು ಇವತ್ತು ತನ್ನ ಮೂಲಸತ್ವವನ್ನು ಕಳೆದುಕೊಂಡಿದೆ. ಟಿ.ವಿ ಮೊಬೈಲ್‌ಗಳ ಹಾವಳಿಯಿಂದ ನಮ್ಮ ಅನೇಕ ಆಚರಣೆಗಳು ನೇಪಥ್ಯಕ್ಕೆ ಸರಿಯುತ್ತಿದೆ ಎಂದು ಶ್ರೀ ಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.


ಅವರು ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ನಡೆದ ಅಷ್ಠಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರವಾಗಿ ಕ್ಷೇತ್ರದಲ್ಲಿ ಮೇ 31ರಂದು ನಡೆದ 108 ತೆಂಗಿನಕಾಯಿ ಮಹಾ ಗಣಪತಿ ಹೋಮ ಮತ್ತು ರುದ್ರಯಾಗ, ನಿಧಿಕುಂಭಕ್ಕೆ ಮುಷ್ಟಿ ಕಾಣಿಕೆ ಸಮರ್ಪಣೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ನಮ್ಮ ಹಿರಿಯರು ಅತೀ ಸುಂದರವಾಗಿ ಆರೋಗ್ಯ ಪೂರ್ಣ ಜೀವನ ನಡೆಸುತ್ತಿದ್ದರು. ಕಾರಣ ಸೇವಿಸುತ್ತಿದ್ದ ಆಹಾರ ಪದ್ಧತಿ ಬಹಳ ಅಚ್ಚುಕಟ್ಟಿನ ಜೊತೆ ವೈಶಿಷ್ಠತೆಯಿಂದ ಕೂಡಿರುತ್ತಿತ್ತು. ಜೀವನದಲ್ಲಿ ಆತ್ಮಶಾಂತಿಯಿಂದ ಮತ್ತು ನೆಮ್ಮದಿಯಿಂದ ಜೀವನ ಮಾಡುವುದಾದರೆ ಅದು ದೇವತಾರಾಧನೆಯಿಂದ ಮಾತ್ರ ಸಾಧ್ಯ ಎಂದು ಸ್ವಾಮೀಜಿ ಹೇಳಿದರು.

ಸಚಿವ ಎಸ್ ಅಂಗಾರ ಭೇಟಿ :

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮದಲ್ಲಿ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖಾ ಸಚಿವ ಎಸ್. ಅಂಗಾರವರು ಪಾಲ್ಗೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಪುರಂದರ ಭಟ್ ಬರೆಪ್ಪಾಡಿ, ಜನೇಶ್ ಭಟ್ ಬರೆಪ್ಪಾಡಿ, ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ವಿಠಲ ಗೌಡ ಬರೆಪ್ಪಾಡಿ, ಸದಸ್ಯರಾದ ರಮೇಶ್ ಕೆ.ಎನ್ ಕಾರ್ಲಾಡಿ, ಜತ್ತಪ್ಪ ರೈ ಬರೆಪ್ಪಾಡಿ, ನಿರ್ಮಲಾಕೇಶವ ಗೌಡ ಅಮೈ, ಪುಷ್ಪಾವತಿ ಪಿ. ಗೌಡ, ಶ್ರೀಧರ ಗೌಡ ಕೊಯಕ್ಕುಡೆ, ಐತ್ತಪ್ಪ ಗೌಡ ಕೊಯಕ್ಕುಡೆ, ಯಶೋದಾ ಎರ್ಕಮೆ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅ`ಕ್ಷ ಸತೀಶ್ ಕುಮಾರ್ ಕೆಡೆಂಜಿ, ಅನುವಂಶೀಯ ಮೊಕ್ತೇಸರರಾದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಸುಳ್ಯ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ ವಂದಿಸಿದರು. ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ವೆಂಕಟೇಶ್ ಭಟ್ ಕೊಯಕ್ಕುಡೆ, ಉಪಾಧ್ಯಕ್ಷ ನಾಗೇಶ್ ಕೆ.ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

ಕ್ಷೇತ್ರದಲ್ಲಿ ಜೂ 4, 6, 7 ದೋಷಗಳ ನಿವೃತ್ತಿ ಕಾರ್ಯ:

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ದೋಷಗಳ ನಿವೃತ್ತಿ ಕಾರ್ಯಗಳು ತಂತ್ರಿಗಳಾದ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜೂ 4,6,7ರಂದು ನಡೆಯಲಿದೆ. ಜೂ 4ರಂದು ಸರ್ಪಸಂಸ್ಕಾರ, ಜೂ 6ರಂದು ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ| ಪುಣ್ಯಾಹವಾಚನ, ಅಘೋರ ಹೋಮ, ಪ್ರೇತವಾಹನೆ, ಉಚ್ಛಾಟನೆ, ಮಹಾಸುದರ್ಶನ ಹೋಮ, ಪ್ರಸಾದ ವಿತರಣೆ, ಜೂ 7ರಂದು ಸ್ವಸ್ತಿ| ಪುಣ್ಯಾಹವಾಚನ, ಮಹಾಗಣಪತಿ ಹೋಮ, ತಿಲಹೋಮ, ಸಂಸ್ಕಾರ ಮಂಗಲ ಹೋಮ, ಪವಮಾನ ಹೋಮ, ಹಂಸವಾಗೀಶ್ವರಿ ಹೋಮ, ಆಶ್ಲೇಷಾ ಬಲಿ, ಅಷ್ಟ ವಟು ಆರಾಧನೆ, ನಾಗತಂಬಿಲ ಸೇವೆ, ದೇವರಿಗೆ ಸಾನಿ`ಕಲಶ ಪೂಜೆ, ಮ`ಹ್ನ ಶ್ರೀ ದೇವರಿಗೆ ಸಾನಿ` ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪನೆ ನಡೆಯಲಿದೆ.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿಃಪುಣ್ಯಾಹವಾಚನ, 108 ತೆಂಗಿನ ಕಾಯಿ ಮಹಾಗಣಪತಿ ಹೋಮ ಮತ್ತು ರುದ್ರಯಾಗ, ಕಲಶ ಪೂಜೆ, ಯಾಗದ ಪೂರ್ಣಾಹುತಿ, ಶ್ರಿ ದೇವರಿಗೆ ಸಾನಿಧ್ಯ ಕಲಶಾಭಿಷೇಕ, ಭಕ್ತಾದಿಗಳಿಂದ ನಿಧಿ ಕುಂಭಕ್ಕೆ ಮುಷ್ಠಿ ಕಾಣಿಕೆ ಸಮರ್ಪಣೆ, ಮಹಾ ಪೂಜೆ, ಪ್ರಸಾದ ವಿತರಣೆ, ಭಕ್ತಾಧಿಗಳಿಂದ ಬಲಿವಾಡು ಕೂಟ, ಅನ್ನಸಂತರ್ಪಣೆ ನಡೆಯಿತು.

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶಿಷ್ಠವಾದ ಸಾನಿಧ್ಯವಿದೆ. ಕ್ಷೇತ್ರವು ಶೀಘ್ರದಲ್ಲಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆಯಲಿ. ದೇವರ ಪ್ರೇರಣೆಯಿಂದ ಭಕ್ತರ ಸಂಕಲ್ಪಗಳು ಈಡೇರುತ್ತದೆ. ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಮಾಡುವುದು ಪುಣ್ಯದ ಕಾರ್ಯ. ಭಕ್ತರ ಸಂಕಲ್ಪಗಳು ಗಟ್ಟಿಯಾದರೆ ಉದ್ದೇಶಿತ ಕಾರ್ಯ ಸಾಧನೆ ಸಾಧ್ಯ. ಮನಸ್ಸಿನ ಜೊತೆ ಭಾವನೆಗಳು ಚೆನ್ನಾಗಿದ್ದರೆ ಮಾತ್ರ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ. ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗವಹಿಸುವ ಸುಯೋಗ ಬಂದಿರುವುದು ನಮ್ಮೆಲ್ಲರ ಭಾಗ್ಯ
ಶ್ರೀ ಧಾಮ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ

LEAVE A REPLY

Please enter your comment!
Please enter your name here