ಬೊಬ್ಬೆಕೇರಿ ಶಾಲೆಯಲ್ಲಿ ಪೋಷಕರ ಸಭೆ: ಚೈತ್ರೇಶ್ ಎಂ.ಎಸ್‌ಗೆ ಸನ್ಮಾನ

0

ಕಾಣಿಯೂರು: ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ ಹಾಗೂ ಕಳೆದ ಎಸ್‌ಎಸ್‌ಎಲ್‌ಸಿಯಲ್ಲಿ 601 ಅಂಕ ಪಡೆದ ಬೊಬ್ಬೆಕೇರಿ ಶಾಲಾ ಹಿರಿಯ ವಿದ್ಯಾರ್ಥಿ, ಬಾಳಿಲ ವಿದ್ಯಾಬೋಧಿನಿ ಶಾಲಾ ವಿದ್ಯಾರ್ಥಿ, ಪುಣ್ಚತ್ತಾರು ಸೀತಾರಾಮ ಮತ್ತು ಲತಾರವರ ಪುತ್ರ ಚೈತ್ರೇಶ್ ಎಂ.ಎಸ್. ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ತೀರ್ಥಕುಮಾರ್ ಪೈಕ, ಉಪಾಧ್ಯಕ್ಷೆ ಸುಂದರಿ ದರ್ಖಾಸು, ಶಾಲಾ ಮುಖ್ಯಗುರು ಶಶಿಕಲಾ, ನಿವೃತ್ತ ಮುಖ್ಯಗುರು ಸೋಮಪ್ಪ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಕಾರ್ಯದರ್ಶಿ ಪ್ರವೀಣ್ ನಾವೂರು, ಕೋಶಾಧಿಕಾರಿ ಸುಕುಮಾರ ಕಲ್ಪಡ, ಜತೆ ಕಾರ್ಯದರ್ಶಿ ಅಶ್ವಿನ್ ಕರಿಮಜಲು, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜಯರಾಮ ನಾವೂರು, ಶಿಕ್ಷಕರಾದ ಜನಾರ್ದನ ಗೌಡ, ಗೀತಾಕುಮಾರಿ, ಶ್ರುತಿ, ದಿವ್ಯಾ ಹಾಗೂ ಎಸ್‌ಡಿಎಂಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here