ಮಾಣಿಯಲ್ಲಿ ದಿ. ಉದಯ ಚೌಟರವರಿಗೆ ಹುಟ್ಟೂರ ಶ್ರದ್ಧಾಂಜಲಿ ಕಾರ್ಯಕ್ರಮ

0

ವಿಟ್ಲ: ಮಾಣಿ-ಬದಿಗುಡ್ಡೆ ದಿ. ಉದಯ ಚೌಟರವರು ಕೇವಲ ಕಬಡ್ಡಿ ಆಟಗಾರನಲ್ಲ, ಅವರೊಬ್ಬ ಉತ್ತಮ ಕ್ರೀಡಾ ಸಂಘಟಕ ಮತ್ತು ಕ್ರೀಡಾಕೂಟಗಳಲ್ಲಿ ಸಮಸ್ಯೆಗಳು ಎದುರಾದಾಗ ಚಾಕಚಕ್ಯತೆಯಿಂದ ನಿವಾರಿಸಬಲ್ಲ ಸಾಮರ್ಥ್ಯವುಳ್ಳವರಾಗಿದ್ದರು ಎಂದು ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ಹೇಳಿದರು. ಅವರು ಮಾಣಿಯ ನಾರಾಯಣ ಗುರು ಸಮುದಾಯ ಭವನದಲ್ಲಿ ಜರಗಿದ ಉದಯ ಚೌಟರಿಗೆ ಹುಟ್ಟೂರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು. ದಿ.ಉದಯ ಚೌಟರವರ ಅಗಲುವಿಕೆ ಕಬಡ್ಡಿ ಕ್ರೀಡೆಗೆ ಮಾತ್ರವಲ್ಲ, ಇಡೀ ಕ್ರೀಡಾಲೋಕಕ್ಕೇ ತುಂಬಲಾರದ ನಷ್ಟ. ಮಾಣಿಯ ಪರಿಸರದಲ್ಲಿ ಉದಯ ಚೌಟರಂತಹ ಪ್ರತಿಭೆಗಳು ಇನ್ನಷ್ಟು ಹುಟ್ಟಿಬರಲಿ ಎಂದು ಆಶಿಸಿದರು.

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಾಣಿಗುತ್ತು ಸಚಿನ್ ರೈಯವರು ಅಧ್ಯಕ್ಷತೆ ವಹಿಸಿದ್ದರು. ಕಲ್ಲಾಜೆಗುತ್ತು ಪ್ರಫುಲ್ಲ.ಆರ್.ರೈ, ಜಡ್ತಿಲ ಪ್ರಹ್ಲಾದ ಶೆಟ್ಟಿ, ಮೋಹನ ಪೈ ಮಾಣಿ, ಸುರೇಶ್ ಪೂಜಾರಿ ಸೂರ್ಯ, ಜಗನ್ನಾಥ ಚೌಟ ಬದಿಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕ ಮಂದಿ ಗಣ್ಯರು ದಿ.ಉದಯ ಚೌಟರವರಿಗೆ ನುಡಿನಮನದ ಮೂಲಕ ಸಂತಾಪ ವ್ಯಕ್ತಪಡಿಸಿದರು. ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here