ಸೌತ್ತಡ್ಕ ಶ್ರೀ ಗಣಪತಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಆರೋಪಿಯ ಪತ್ತೆ

0

  • ಸುಮಾರು 3 ಲಕ್ಷಕ್ಕಿಂತ ಅಧಿಕ  ಬೆಲೆ ಬಾಳುವ ಚಿನ್ನಭರಣ ವಶ

ಸೌತಡ್ಕ: ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ಶ್ರೀಕ್ಷೇತ್ರ ಸೌತಡ್ಕಕ್ಕೆ ದೇವರ ದರ್ಶನ ಪಡೆಯಲು ಬಂದ ಬೆಳ್ತಂಗಡಿ ಮೂಲದ ಮುಂಬೈ ನಿವಾಸಿಯಾದ ಬಾಲಚಂದ್ರ ಡಿ ಎಂಬುವವರು ಸಂಸಾರ ಸಮೇತ ದೇವರ ದರ್ಶನ ಮಾಡಲು ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಸೌತ್ತಡ್ಕ ಶ್ರೀ ಗಣಪತಿ ದೇವರ ಸೇವೆ ಮತ್ತು ದರ್ಶನವನ್ನು ಪಡೆದು ತೀರ್ಥ,ಪ್ರಸಾದವನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ  ಬಾಲಚಂದ್ರ ರವರ ಪತ್ನಿಯ ಕೈಯಲ್ಲಿದ್ದ ಬ್ಯಾಗಿನಿಂದ ಚಿನ್ನಾಭರಣ ಹಾಗೂ ಪರ್ಸ್‌ ಕಳ್ಳತನವಾಗಿದ್ದು ಈ ಪ್ರಕರಣಕ್ಕೆ ಬಗ್ಗೆ ದೂರು ನೀಡಿದರ ಅನ್ವಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಠಾಣಾ ಅ,ಕ್ರ 30-2022 ಕಲಂ: 379 ಐ,ಪಿ,ಸಿ ಯಂತೆ ಪ್ರಕರಣದಾಖಲಾಗಿದ್ದು ಇದರ ಪತ್ತೆಯ ಬಗ್ಗೆ ಧರ್ಮಸ್ಥಳ ಪೊಲೀಸ್‌ ಉಪನಿರೀಕ್ಷಕರ ವಿಶೇಷ ತಂಡವು ಆರೋಪಿಯಾದ  ಗದಗ ಮೂಲದ  ಭೀಮವ್ವ ಯಾನೆ  ನಾಗಮ್ಮ ಎಂಬವರನ್ನು ಬಂಧಿಸಿದ್ದಾರೆ.

ಆರೋಪಿಯಿಂದ  ವಜ್ರದ ನೆಕ್ಲೇಸ್‌-ಒಂದು 18 ಗ್ರಾಂ .308 ಮಿಲಿ , ಉಂಗುರ –ಒಂದು 2.700 ಗ್ರಾಂ , ಉಂಗುರ-ಒಂದು 3.140 ಗ್ರಾಂ , ಜುಮುಕಿ ಒಂದು ಜೊತೆ 25.940 ಗ್ರಾಂ ಅಂದಾಜು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಸದ್ರಿ ವಶ ಪಡಿಸಿಕೊಂಡ ಆಭರಣಗಳ ಅಂದಾಜು ಮೌಲ್ಯ ಸುಮಾರು 3ಕ್ಕಿಂತ ಅಧಿಕ ಲಕ್ಷ ಆಗಬಹುದು.

ಆರೋಪಿಯು ವಿವಿಧ ಯಾತ್ರರ್ಥ ಸ್ಥಳಗಳಿಂದ ಕಳ್ಳತನ ಮಾಡುವ ಅಬ್ಯಾಸದವಳಾಗಿದ್ದು,   ಸದ್ರಿ ಆರೋಪಿಯ ಮೇಲೆ ಮುರುಡೇಶ್ವರ, ಭಟ್ಕಳ, ಸುಬ್ರಹ್ಮಣ್ಯ, ಮುಂತಾದ ಕಡೆ ಕಳ್ಳತನ ಪ್ರಕರಣ ದಾಖಲಾಗಿರುವು ಕಂಡು ಬಂದಿರುತ್ತದೆ, ಸದ್ರಿ ಆರೋಪಿಯನ್ನು ವಿಶೇಷ ತಂಡ ಪತ್ತೆ ಮಾಡಿರುತ್ತದೆ.

ಸದ್ರಿ ಪತ್ತೆ ತಂಡದಲ್ಲಿ ಮಾನ್ಯ ಪೊಲೀಸ್‌ ಅಧೀಕ್ಷಕರು ಋಷೀಕೇಶ್‌ ಸೋನಾವಣೆ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು ಕುಮಾರ್‌ ಚಂದ್ರ ರವರ ಮಾರ್ಗದರ್ಶನದಲ್ಲಿ ಮಾನ್ಯ ಪೊಲೀಸ್‌ ಉಪಾಧೀಕ್ಷಕರು ಬಂಟ್ವಾಳ ಉಪವಿಭಾಗ ಮಾನ್ಯ ಶಿವಂಶು ರಜಪೂತ್‌ ಮತ್ತು ಪೊಲೀಸ್‌ ವೃತ್ತ ನಿರೀಕ್ಷಕರು ಬೆಳ್ತಂಗಡಿ ವೃತ್ತ ಶಿವಕುಮಾರ್‌ ರವರ ನೇತೃತ್ವದಲ್ಲಿ ಪಿಎಸ್ಐ ಕೃಷ್ಣಕಾಂತ ಅ ಪಾಟೀಲ್‌ ರವರ ವಿಶೇಷ ತಂಡದ ಸಿಬ್ಬಂದಿಗಳಾದ, ಹೆಚ್‌ ಸಿ ಬೆನ್ನಿಚ್ಚನ್‌, ಹೆಚ್ ಸಿ ಪ್ರಶಾಂತ್‌, ಹೆಚ್ ಸಿ ರಾಹುಲ್‌, ಹೆಚ್‌ ಸಿ ಸತೀಶನಾಯ್ಕ ಜಿ, ಹೆಚ್‌ ಸಿ ಶೇಖರ್‌ ,ಹೆಚ್‌ ಸಿ ಕೃಷ್ಣಪ್ಪ, ಹೆಚ್‌ಸಿ ರವೀಂದ್ರ ಪಿ ಸಿ ಅನಿಲ್‌ ಕುಮಾರ್‌ ,ಚಾಲಕ ಎಪಿಸಿ ಲೋಕೇಶ್‌, ಮಪಿಸಿ ಸೌಭಾಗ್ಯ ಮತ್ತು ಜಿಲ್ಲಾ ಗಣಕ ಯಂತ್ರದ ವಿಭಾಗದ ಸಂಪತ್‌ ಮತ್ತು ದಿವಾಕರ ರವರು ಭಾಗವಹಿಸಿರುತ್ತಾರೆ.

ಪ್ರಕರಣ ದಾಖಲಾಗಿ ಶೀಘ್ರವಾಗಿ ಪ್ರಕರಣ ಬೇಧಿಸಿದ ಪೊಲೀಸ್‌ ತಂಡಕ್ಕೆ ಜಿಲ್ಲಾ ಪೊಲೀಸ್‌ ಅಧಿಕ್ಷಕರು ಬಹುಮಾನವನ್ನು ಘೋಷಿಸಿದ್ದು ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ. 

LEAVE A REPLY

Please enter your comment!
Please enter your name here