ಜೂ.4: ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನೂತನ ಸಭಾಂಗಣ ಉದ್ಘಾಟನೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ, ಶಿಕ್ಷಕರಿಗೆ ತಾಲೂಕು ಮಟ್ಟದ ತರಬೇತಿ ಶಿಬಿರ

0

ಪುತ್ತೂರು: ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನೂತನ ಸಭಾಂಗಣ ಉದ್ಘಾಟನೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಶಿಕ್ಷಕರಿಗೆ ತಾಲೂಕು ಮಟ್ಟದ ತರಬೇತಿ ಶಿಬಿರ ಜೂ.4ರಂದು ನಡೆಯಲಿದೆ.

 


ಮಧುರಾ ಗ್ರೂಪ್‌ನ ಸ್ಥಾಪಕ ಡಿ.ಎ.ಖಾದರ್ ಹಾಜಿ ಮಧುರಾ ಉದ್ಘಾಟಿಸಲಿದ್ದು ಈಶ್ವರಮಂಗಲ ಖತೀಬ್ ಸಯ್ಯದ್ ಎನ್‌ಪಿಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ದುವಾಶೀರ್ವಚನ ನೀಡಲಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀ ಹರೇಕಳ ಹಾಜಬ್ಬ ಹಾಗೂ ಶ್ರೀ ಮಹಾಲಿಂಗ ನಾಯ್ಕ ವಿಟ್ಲ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಶಿಕ್ಷಕರ ತರಬೇತಿ ಶಿಬಿರದ ಉದ್ಘಾಟನೆಯನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ನೆರವೇರಿಸಲಿದ್ದುAVP-L&zÀ Pharmed Limited Bengaluru ಇದರ ವಿಕ್ರಂ ಸಾಗರ್ ಸಕ್ಸೇನ ಅವರು ಶಿಕ್ಷಕರಿಗ ತರಬೇತಿ ನೀಡಲಿದ್ದಾರೆ. ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ಮಧುರಾ ಸ್ಕೂಲ್‌ನ ಕಾರ್ಯನಿರ್ವಾಹಕ ಶೈಕ್ಷಣಿಕ ನಿರ್ದೇಶಕ ರಫೀಕ್ ಮಾಸ್ಟರ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಧುರಾ ವಿದ್ಯಾಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here