ಎಸ್‌ಎಸ್‌ಎಲ್‌ಸಿ: ಪಡುಬೆಟ್ಟು ಸರಕಾರಿ ಪ್ರೌಢಶಾಲೆಗೆ ಶೇ.86.36 ಫಲಿತಾಂಶ

0

ನೆಲ್ಯಾಡಿ: 2021-22ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸರಕಾರಿ ಪ್ರೌಢಶಾಲೆಗೆ ಶೇ.86.36 ತೇರ್ಗಡೆ ಫಲಿತಾಂಶ ಲಭಿಸಿದೆ.


ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 22 ವಿದ್ಯಾರ್ಥಿಗಳ ಪೈಕಿ 19 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.86.36 ಫಲಿತಾಂಶ ಬಂದಿದೆ. ನಾಲ್ವರು ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಹಾಗೂ ಇಬ್ಬರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕುರುಬರಕೇರಿ ಲಿಂಗಪ್ಪ ಗೌಡ ಹಾಗೂ ರಾಮಕ್ಕ ದಂಪತಿ ಪುತ್ರಿ ಭಾರತಿ ಎಂ. 587, ಪಡುಬೆಟ್ಟುಬೀದಿ ರಮೇಶ್ ಶೆಟ್ಟಿ ಹಾಗೂ ಸುಜಾತ ಆರ್.ಶೆಟ್ಟಿಯವರ ಪುತ್ರ ಹಿತೇಶ್ ಆರ್.ಶೆಟ್ಟಿ 585, ಬಲ್ಯ ರಾಮಚಂದ್ರ ಗೌಡ ಹಾಗೂ ಶಾಂತರವರ ಪುತ್ರಿ ಕಾವ್ಯಶ್ರೀ 575 ಹಾಗೂ ಗಾಣಂತಿ ಜನಾರ್ದನ ಗೌಡ ಮತ್ತು ಭವಾನಿಯವರ ಪುತ್ರಿ ಶ್ರದ್ಧಾ 554 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here