ಪಡೀಲ್ ಕೆಸಿಡಿಸಿ ವಸತಿ ಗೃಹದ ಸಮೀಪ ಅಪಾಯ ಆಹ್ವಾನಿಸುತ್ತಿರುವ ವಿದ್ಯುತ್ ತಂತಿ

0

 

ಪುತ್ತೂರು: ಪಡೀಲ್‌ನಲ್ಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಪುತ್ತೂರು ವಿಭಾಗೀಯ ಕಛೇರಿಯ ವಸತಿಗೃಹದ ಸಮೀಪದಲ್ಲಿ ವಿದ್ಯುತ್ ತಂತಿ ತೀರಾ ಕೆಳ ಮಟ್ಟದಲ್ಲಿ ಹಾದು ಹೋಗಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ವಸತಿ ಗೃಹದಲ್ಲಿ ಸುಮಾರು ಹತ್ತು ಕುಟುಂಬಗಳು ವಾಸ್ತವ್ಯವಿದ್ದು, ವಸತಿಗೃಹದಲ್ಲಿನ ಮಕ್ಕಳು ಈ ಪರಿಸರದಲ್ಲಿ ಆಟವಾಡುತ್ತ ಇರುತ್ತಾರೆ. ಅಲ್ಲದೆ ಸಾರ್ವಜನಿಕರು ಕೂಡ ಇಲ್ಲಿನ ರಸ್ತೆಯಲ್ಲಿ ಸಂಚರಿಸುತ್ತಿದ್ದು ಅನಾಹುತ ಕೈಬೀಸಿ ಕರೆಯುವಂತಾಗಿದೆ. ಅಪಾಯ ಸಂಭವಿಸುವ ಮೊದಲು ಮೆಸ್ಕಾಂನವರು ಗಮನಿಸಿ ಸರಿಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here