ಕೋಡಿಪ್ಪಾಡಿಯ ಅರ್ಕ ಹಿಂದು ಮನೆಯಲ್ಲಿ ಮುಸ್ಲಿಂ ಮಹಿಳೆ !

0

  • ಪೊಲೀಸರು ತಲುಪುತ್ತಿದ್ದಂತೆ ಚದುರಿದ ಮನೆಯ ಸುತ್ತ ಜಮಾಯಿಸಿದ ಎರಡು ಕೋಮಿನವರು

ಪುತ್ತೂರು: ಕೊಡಿಪ್ಪಾಡಿ ಸಮೀಪ ಹಿಂದು ಮನೆಯಲ್ಲಿ ಮುಸ್ಲಿಂ ಮಹಿಳೆ ಇರುವ ಕುರಿತು ಮಾಹಿತಿಯಂತೆ ಸ್ಥಳದಲ್ಲಿ ಎರಡೂ ಕೋಮಿನವರು ಜಮಾಯಿಸಿದ ಘಟನೆ ಜೂ. 2ರಂದು ನಡೆದ ಮತ್ತು ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಮನೆಗೆ ಬೀಗ ಹಾಕಿರುವುದನ್ನು ಗಮನಿಸಿ ಪೊಲೀಸರು ಮನೆಯ ಸುತ್ತ ಜಮಾಯಿಸಿದ ಜನರನ್ನು ಚದುರಿಸಿದ ಘಟನೆ ನಡೆದಿದೆ.

ಆಟೋ ಚಾಲಕರೊಬ್ಬರು ಮನೆಯ ಎದುರು ಬೀಗ ಹಾಕಿ ಹಿಂಬಾಗಿಲ ಮೂಲಕ ಮನೆಯಲ್ಲಿ ಮುಸ್ಲಿಂ ಮಹಿಳೆಯನ್ನು ಇರಿಸಿಕೊಂಡಿದ್ದಾರೆಂಬ ಮಾಹಿತಿ ಹರಿದಾಡುತ್ತಿದ್ದಂತೆ ಸ್ಥಳದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದವರು ಜಮಾಯಿಸಿದರು. ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಮನೆಗೆ ಬೀಗ ಹಾಕಿದ್ದು, ಮನೆಯೊಳಗೆ ಯಾರು ಇಲ್ಲ ಎಂದು ಹೇಳಿ ಸ್ಥಳದಲ್ಲಿ ಜಮಾಯಿಸಿದವರನ್ನು ಚದುರಿಸಿದ್ದಾರೆ. ಪೊಲೀಸರು ತೆರಳಿದ ಬಳಿಕ ಮನೆಯೊಳಗಿದ್ದ ಮಹಿಳೆ ಮತ್ತು ಚಾಲಕ ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here