ಕಲ್ಲರ್ಪೆಯಲ್ಲಿ ತ್ಯಾಜ್ಯ ಸುರಿಯುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಸಾರ್ವಜನಿಕರು

0

  • ಪಂಚಾಯತ್ ನಿಂದ ರೂ.2000 ದಂಡ

 

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲರ್ಪೆ ಎಂಬಲ್ಲಿ ಲಾರಿಯಲ್ಲಿ ತಂದು ಕಸ ಸುರಿಯುತ್ತಿರುವವರನ್ನು ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಹಿಡಿದು, ನಂತರ ಪಂಚಾಯತ್ ನಿಂದ ರೂ.2000 ದಂಡ ವಿದಿಸಿರುವ ಘಟನೆ ಜೂ.2ರಂದು ನಡೆದಿದೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲರ್ಪೆಯಲ್ಲಿ ಲಾರಿಯೊಂದರಲ್ಲಿ ತ್ಯಾಜ್ಯವನ್ನು ತಂದು ಕಸ ತಂದು ರಸ್ತೆ ಬದಿ ಸುರಿಯುತ್ತಿರುವುದನ್ನು ಕಂಡ ಸಾರ್ವಜನಿಕರು ಕೂಡಲೇ ಆರ್ಯಾಪು ಪಂಚಾಯತ್ ಹಾಗೂ ಸಂಪ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆರ್ಯಾಪು ಪಂಚಾಯತ್ ನ ಅಧಿಕಾರಿ ಹಾಗೂ ಸಿಬಂದಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ, ತ್ಯಾಜ್ಯ ಎಸೆದ ಲಾರಿಯವರಿಗೆ ದಂಡ ವಿಧಿಸಿರುವುದಲ್ಲದೆ ಸುರಿದ ತ್ಯಾಜ್ಯವನ್ನು ಮತ್ತೆ ಅದೇ ಲಾರಿಯಲ್ಲಿ ಅವರಿಂದಲೇ ತುಂಬಿಸಿ‌ ಕಳುಹಿಸಿದ್ದಾರೆ. ಇನ್ನು ಮುಂದೆ ರಸ್ತೆ ಬದಿ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ

LEAVE A REPLY

Please enter your comment!
Please enter your name here