ಹಂಟ್ಯಾರು ಶಾಲಾ ಮಂತ್ರಿಮಂಡಲ ರಚನೆ

0

ಪುತ್ತೂರು : ಹಂಟ್ಯಾರು ಶಾಲೆಯ 2022-23ನೇ ಶೈಕ್ಷಣಿಕ ವರ್ಷದ ಮಂತ್ರಿಮಂಡಲ ರಚಿಸಲಾಯಿತು. ಶಾಲಾ ನಾಯಕ ಹಾಗೂ ಉಪನಾಯಕನ ಸ್ಥಾನಕ್ಕೆ ಚುನಾವಣೆ ನಡೆದು ನಾಯಕಿಯಾಗಿ ಎಂಟನೇ ತರಗತಿಯ ಚಂದನ ಎ. ಮತ್ತು ಉಪನಾಯಕನಾಗಿ ಏಳನೇ ತರಗತಿಯ ಭುವನ್ ಎಂ. ಚುನಾಯಿತರಾದರು.

 

ಗೃಹಮಂತ್ರಿಯಾಗಿ ಚಿಂತನ್ (ಎಂಟನೇ ತರಗತಿ), ಆಹಾರ ಮಂತ್ರಿಯಾಗಿ ಪ್ರೀತಿಕಾ (ಎಂಟನೇ ತರಗತಿ), ವಿದ್ಯಾ ಮಂತ್ರಿಯಾಗಿ ಆಯಿಷತ್ ಶಹೀಮ (ಎಂಟನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ವೈಷ್ಣವಿ (ಎಂಟನೇ ತರಗತಿ), ಕೃಷಿ ಹಾಗೂ ನೀರಾವರಿ ಮಂತ್ರಿಯಾಗಿ ತೇಜಸ್ ಎಂ.ಎಸ್ (ಎಂಟನೇ ತರಗತಿ), ಆರೋಗ್ಯ ಸ್ವಚ್ಛತೆ ಮತ್ತು ಶಿಸ್ತು ಮಂತ್ರಿಗಳಾಗಿ ಬಿಂದುಶ್ರೀ ಹಾಗೂ ದೀಕ್ಷಾ, ಕ್ರೀಡಾ ಮಂತ್ರಿಗಳಾಗಿ ಫಾತಿಮತ್ ನಶ್ರಿಯಾ ಮತ್ತು ಫಾತಿಮತ್ ಅಝ್ಮೀನ ರವರನ್ನು ಆಯ್ಕೆ ಮಾಡಲಾಯಿತು. ಶಾಲಾ ಮುಖ್ಯಗುರು ಜಾನಕಿ ಎಂ.ರವರ ಮಾರ್ಗದರ್ಶನದಲ್ಲಿ ಶಿಕ್ಷಕಿಯರಾದ ಮೋಹಿನಿ, ಸಾವಿತ್ರಿ ಎನ್, ವತ್ಸಲಾ ಬಿ, ವಿದ್ಯಾ ಕೆ. ಮತದಾನ ಪ್ರಕ್ರಿಯೆನಡೆಸಿಕೊಟ್ಟರು.

LEAVE A REPLY

Please enter your comment!
Please enter your name here