ಪುತ್ತಿಲ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

0

ಪುತ್ತೂರು: ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇದರ ವತಿಯಿಂದ ಮುಂಡೂರು ಗ್ರಾಮದ ನಡುಗುಡ್ಡೆ ಎಂಬಲ್ಲಿ ವಾಸವಾಗಿರುವ ಬಡ ಕುಟುಂಬವೊಂದರ ಮೂವರು ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.

 

 


ಶ್ರೀರಾಮ ಗೆಳೆಯರ ಬಳಗದ ಗೌರವಾಧ್ಯಕ್ಷರು, ಹಿಂದೂ ಸಂಘಟನೆಗಳ ಮುಖಂಡರೂ ಆಗಿರುವ ಅರುಣ್ ಕುಮಾರ್ ಪುತ್ತಿಲರು ಮಕ್ಕಳಿಗೆ ಪುಸ್ತಕ ನೀಡುವಲ್ಲಿ ಸ್ಪಂದಿಸಿದರು. ಕರೆಮನೆಕಟ್ಟೆ ಹಾಲು ಉತ್ಪದಕ ಸಹಕಾರಿ ಸಂಘದ ಕಾರ್ಯದರ್ಶಿ ಶ್ವೇತಾ, ಸಹಾಯಕಿ ವೇದಾವತಿ ಕರಮನೆಕಟ್ಟೆ ಮಕ್ಕಳಿಗೆ ಪುಸ್ತಕ ವಿತರಿಸಿದರು. ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ ಬಿ.ಕೆ, ಸದಸ್ಯರಾದ ಸತೀಶ ಬಿ.ಕೆ, ಅಶೋಕ ನಾಯ್ಕ್ ಪುತ್ತಿಲ, ಪ್ರತೀಕ್ ಪುತ್ತಿಲ, ಧನಂಜಯ ಕಲ್ಲಮ, ಸ್ಥಳೀಯರಾದ ಕಿಸ್ತು ಡಿಸೋಜಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here