ಪುತ್ತೂರು: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕುಂಬ್ರ ಪೇಟೆಗೆ ಇದೀಗ ಮತ್ತೊಂದು ಸಂಕೀರ್ಣ ಸೇರ್ಪಡೆಗೊಳ್ಳುತ್ತಿದೆ. ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ಕುಂಬ್ರದಿಂದ 200ಮೀಟರ್ ದೂರದಲ್ಲಿ ನಿರ್ಮಾಣಗೊಂಡಿರುವ ‘ಅರ್ಚನಾ ಸಂಕೀರ್ಣ’ ಜೂ.6 ರಂದು ಶುಭಾರಂಭಗೊಳ್ಳುತ್ತಿದೆ.
ಸಂಕೀರ್ಣವನ್ನು ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್.ಎಸ್.ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈ ಉದ್ಘಾಟಿಸಲಿದ್ದು, ಉದ್ಯಮಿ, ಕುಂಬ್ರ ಅಕ್ಷಯ ಆರ್ಕೇಡ್ನ ಮಾಲಕ ಜಯಂತ ನಡುಬೈಲ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಶುಭಾಶಂಸನೆ ಮಾಡಲಿದ್ದು ಅತಿಥಿಗಳಾಗಿ ಕೆದಂಬಾಡಿ ಗ್ರಾಮ ಪಂಚಾಯತ್ನ ಅಧ್ಯಕ್ಷ ರತನ್ ರೈ ಕುಂಬ್ರ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ವಾಗ್ಮಿ ಕೆ.ಆರ್.ಹುಸೇನ್ ದಾರಿಮಿ ರೆಂಜಲಾಡಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವಂತೆ ಅರ್ಚನಾ ಸಂಕೀರ್ಣದ ಮಾಲಕ ಬಾಬು ಪೂಜಾರಿ ಬಡಕ್ಕೋಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.