ಪುತ್ತೂರು: ಪವಿತ್ರ ಉಮ್ರಾ ಯಾತ್ರೆಗೆ ತೆರಳಿದ್ದ ಕುಂಬ್ರ ಶೇಕಮಲೆ ನಿವಾಸಿ ಅಬ್ದುಲ್ ರಹಿಮಾನ್ ಯಾನೆ ಅಂದುಮಚ್ಚ (70) ರವರು ಮದೀನದಲ್ಲಿ ನಿಧನರಾದ ಘಟನೆ ಜೂ.3 ರಂದು ನಡೆದಿದೆ.

ಮೇ.22 ರಂದು ಸೌದಿ ಅರೇಬಿಯಾದಲ್ಲಿರುವ ತನ್ನ ಪುತ್ರ ನಾಸಿರ್ ಬಳಿ ತೆರಳಿದ್ದರು. ಅಲ್ಲಿಂದ ಅವರು ನೇರವಾಗಿ ಮದೀನಾ ಯಾತ್ರೆ ಕೈಗೊಂಡಿದ್ದರು. ಮದೀನಾ ಮಸೀದಿಯಲ್ಲಿರುವ ವೇಳೆ ಅವರು ಹಠಾತ್ತನೆ ನಿಧನರಾಗಿದ್ದಾರೆ. ಮೃತರ ದಫನ ಕಾರ್ಯ ಮದೀನಾದಲ್ಲೇ ನಡೆಯಲಿದೆ. ಮೃತರು ಇಬ್ಬರು ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.