ಕಾಲೇಜು ಕಾರಿಡಾರಿನಲ್ಲೂ ಹಿಜಾಬ್ ನಿಷೇಧ ಉಪ್ಪಿನಂಗಡಿ ಸಿಡಿಸಿ ಸಭೆಯಲ್ಲಿ ನಿರ್ಣಯ

0

ಉಪ್ಪಿನಂಗಡಿ:ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಗೊಂದಲಕ್ಕೆ ಸಂಬಂಧಿಸಿ ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಸಿಡಿಸಿ ಸಭೆ ನಡೆದಿದ್ದು, ಕಾಲೇಜು ಕ್ಯಾಂಪಸ್‌ನೊಳಗೂ ಕಾಲೇಜು ಸಮವಸ್ತ್ರ ಹೊರತಾದ ಬಟ್ಟೆ ತೊಡುವಂತಿಲ್ಲ ಎಂದು ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿದೆ.
ವಿದ್ಯಾರ್ಥಿನಿಯರು ಕಾಲೇಜು ಕ್ಯಾಂಪಸ್ ಪ್ರವೇಶಿಸಿ ಡ್ರೆಸಿಂಗ್ ರೂಮ್‌ನಲ್ಲಿ ಬಟ್ಟೆ ಬದಲಾಯಿಸಿದ ಬಳಿಕ ಯಾವುದೇ ಕಾರಣಕ್ಕೂ ಕಾಲೇಜು ಕ್ಯಾಂಪಸ್‌ನೊಳಗೆ ಕಾಲೇಜು ಸಮವಸ್ತ್ರ ಹೊರತಾದ ಬಟ್ಟೆ ತೊಡುವಂತಿಲ್ಲ.ಈ ನಿಯಮವನ್ನು ಉಲ್ಲಂಸುವ ವಿದ್ಯಾರ್ಥಿಗಳನ್ನು ತಕ್ಷಣದಿಂದಲೇ ಅಮಾನತುಗೊಳಿಸಬೇಕು. ಬಳಿಕ ಮುಚ್ಚಳಿಕೆ ಬರೆಸಿಕೊಂಡು ಕಲಿಕೆಗೆ ಅವಕಾಶ ಕಲ್ಪಿಸಬೇಕು.ಮುಚ್ಚಳೀಕೆಯ ಹೊರತಾಗಿಯೂ ನಿಯಮ   ಉಲ್ಲಂಘಿಸುವ ಕೃತ್ಯವೆಸಗಿದರೆ ನಿರ್ದಾಕ್ಷಿಣ್ಯವಾಗಿ ಕಾಲೇಜಿನಿಂದ ಡಿಬಾರ್‌ಗೊಳಿಸಬೇಕೆಂದು ನಿರ್ಣಯ ಕೈಗೊಂಡು ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲಾಯಿತು.

ಉಪ್ಪಿನಂಗಡಿ ಸ.ಪ್ರ.ದ ಕಾಲೇಜಿಗೆ ಶಾಸಕ ಮಠಂದೂರು ಭೇಟಿ

ವಿದ್ಯಾರ್ಥಿನಿಯರು ಹಿಜಾಬ್‌ಗೆ ಸಂಬಂಧಿಸಿ ನ್ಯಾಯಾಲಯದ ತೀರ್ಪನ್ನು ತರಗತಿ ಕೊಠಡಿಯೊಳಗೆ ಮಾತ್ರ ಅನ್ವಯಿಸುವುದೆಂದು ವಾದಿಸಿ ಕಾಲೇಜು ಕಾರಿಡಾರ್‌ನಲ್ಲಿ ಹಿಜಾಬ್ ಧರಿಸಿ ಅಲೆದಾಡುತ್ತಿರುವುದರಿಂದ ಈವರೆಗಿನ ಸಮಸ್ಯೆಗಳು ಗೋಚರಿಸಿದ್ದು, ಈ ಬಗ್ಗೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಿಡಿಸಿ ಸಭೆಯಲ್ಲಿ ಸ್ಪಷ್ಠ ನಿರ್ಧಾರ ತಳೆಯಲಾಗಿದೆ.

ಜೂನ್ ೨ರಂದು ಕಾಲೇಜಿನಲ್ಲಿ ನಡೆದ ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣ, ರಕ್ಷಣೆಗೆ ಪೊಲೀಸರನ್ನು ಕರೆಯಿಸದೇ ಇರುವ ಪ್ರಾಂಶುಪಾಲರ ನಡೆ, ಸಿಸಿ ಕ್ಯಾಮರಾದ ದಾಖಲಾತಿ ದಿಢೀರ್ ಕಣ್ಮರೆಯಾದ ಟೀಕೆಯ ಬಗ್ಗೆ, ರಾತ್ರಿ ವೇಳೆ ನಾಲ್ವರು ವಿದ್ಯಾರ್ಥಿನಿಯರನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕರೆಯಿಸಿ ಪತ್ರಕರ್ತರ ವಿರುದ್ದ ಸುಳ್ಳು ದೂರು ಸಲ್ಲಿಸಲು ಒತ್ತಡವೇರಲಾಗಿತ್ತು ಎಂಬ ಆರೋಪದ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು.

LEAVE A REPLY

Please enter your comment!
Please enter your name here