ಕೊನೆಗೂ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಮೈಲುಗಲ್ಲು ಬಂತು

0

ಪುತ್ತೂರು; ಮಾಣಿ-ಮೈಸೂರು ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿ ವರುಷಗಳು ಕಳೆದಿದೆ. ಹೆದ್ದರಿ ಅಗಲೀಕರಣದ ವೇಳೆ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ ಮೈಲುಗಲ್ಲು ತೆಗೆಯಲಾಗಿತ್ತು. ಆ ಬಳಿಕ ಕಳೆದ ಐದು ವರ್ಷಗಳಿಂದ ಮೈಲುಗಲ್ಲು ಇರಲಿಲ್ಲ. ಕಳೆದ ಎರಡು ದಿನಗಳಿಂದ ಹೆದ್ದಾರಿ ಬದಿ ಮೈಲುಗಲ್ಲು ಹಾಕಿ ಅದರಲ್ಲಿ ಊರಿನ ಹೆಸರು ಮತ್ತು ಕಿ ಮೀ ನಮೂದು ಮಾಡಲಾಗುತ್ತಿದೆ.

ಮೈಲುಗಲ್ಲಿಗೆ ಅದರದೇ ಆದ ಇತಿಹಾಸವಿದೆ. ಹಿಂದೆ ಎಲ್ಲಾ ರಸ್ತೆಗಳಿಗೂ ಮೈಲುಗಲ್ಲು ಹಾಕಿ ಅದರಲ್ಲಿ ಒಂದು ಊರಿಂದ ಇನ್ನೊಂದು ಊರಿಗೆ ಇರುವ ದೂರವನ್ನು (ಕಿಮೀ) ನಮೂದಿಸಲಾಗುತ್ತಿತ್ತು. ಈ ರೂಡಿ ಇಂದಿಗೂ ಚಾಲ್ತಿಯಲ್ಲಿದೆ. ಇದು ವಾಹನ ಚಾಲಕರಿಗೆ ಮತ್ತು ಪರವೂರಿನ ವಾಹನ ಚಾಲಕರಿಗೆ ತುಂಬಾ ಪ್ರಯೋಜನವನ್ನು ನೀಡುತ್ತದೆ. ಮೈಲುಗಲ್ಲು ಇಲ್ಲದೇ ಇದ್ದರೆ ಅಲ್ಲಲ್ಲಿ ವಾಹನವನ್ನು ನಿಲ್ಲಿಸಿ ದಾರಿ ಕೇಳಬೇಕಾದ ಅನಿವಾರ್ಯತೆಯೂ ಬರುತ್ತದೆ. ಮಾಣಿ-ಮೈಸೂರು ರಾ. ಹೆದ್ದಾರಿ ೨೭೫ ರ ಬದಿಯಲ್ಲಿ ಮೈಲುಗಲ್ಲು ಅಳವಡಿಸಿರುವುದು ವಾಹನ ಚಾಲಕರಿಗೆ ಖುಷಿ ತಂದಿದೆ.

LEAVE A REPLY

Please enter your comment!
Please enter your name here