ಪ್ರಧಾನಿ ನರೇಂದ್ರ ಮೋದಿಯವರ 8 ವರ್ಷಗಳ ಸಾಧನಾ ಸಂಭ್ರಮ – ಜೂ.7ಕ್ಕೆ ಬಿಜೆಪಿ ರೈತ ಮೋರ್ಚಾ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ

0

ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ 8 ವರ್ಷಗಳ ಪೂರ್ಣಗೊಳಿಸಿದ ಸಂಭ್ರಮದ ಹಿನ್ನೆಲೆಯಲ್ಲಿ ಸೇವೆ, ಸುಶಾಸನ, ಬಡವರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಜೂ. 7ರಂದು ಕಲ್ಲೇಗ ಭಾರತ್ ಮಾತಾ ಸಭಾಭವನದಲ್ಲಿ ನಡೆಯುವ ಸಮಗ್ರ ರೈತ ಮಾಹಿತಿ ಕಾರ್ಯಾಗಾರ, ಕೃಷಿ ಸಾಧಕರಿಗೆ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಬಿಜೆಪಿ ಕಚೇರಿಯಲ್ಲಿ ಜೂ. 4ರಂದು ಬಿಡುಗಡೆಗೊಳಿಸಲಾಯಿತು.

 

ಸೇವೆ, ಸುಶಾಸನ, ಬಡವರಕಲ್ಯಾಣ ಕಾರ್ಯಕ್ರಮದ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಅವರು ಆಮಂತ್ರನ ಬಿಡುಗಡೆಗೊಳಿಸಿ ಮಾತನಾಡಿ ಅಂದು ಬೆಳಗ್ಗಿನಿಂದ ಸಂಜೆಯ ತನಕ ಬೇರೆ ಬೇರೆ ರೀತಿಯ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ರೈತ ಮೋರ್ಚಾದ ಅಧ್ಯಕ್ಷ ಈರಣ್ಣ ಕಡಾಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಸೇರಿದಂತೆ ಮಂಡಲದ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸನ್ಮಾನ:
೨೦೨೧-೨೨ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೦೦ಕ್ಕೂ ಹೆಚ್ಚು ಅಂಕ ಪಡೆದ ರೈತರ ಮಕ್ಕಳನ್ನು ಮತ್ತು ಅಡಿಕೆ ಮರಕ್ಕೆ ಹತ್ತುವ ಕಾಯಕದಲ್ಲಿ ನಿರತರಾಗಿರುವ ೬೦ ವರ್ಷ ಮೇಲ್ಪಟ್ಟ ರೈತರನ್ನು ಗುರುತಿಸಿ ಸನ್ಮಾನಿಸಲಾಗುವುದು. ವೈವಿಧ್ಯ ರೀತಿಯಲ್ಲಿ ಕೃಷಿ ಮಾಡುವವರನ್ನು ಗೌರವಿಸಲಾಗವುದು ಎಂದು ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಸುರೇಶ್ ಕಣ್ಣಾರಾಯ, ಪ್ರಧಾನ ಕಾರ್ಯದರ್ಶಿ ಪುನೀತ್ ಮಾಡತ್ತಾರು, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ತಾ.ಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ ಬಡಗನ್ನೂರು ಶಕ್ತಿ ಕೇಂದ್ರದ ಪ್ರಮುಖ್ ಸಂತೋಷ್, ಪುಣಚ ಮಹಾಶಕ್ತಿಕೇಂದ್ರದ ಕಾರ್ಯದರ್ಶಿ ದಯಾನಂದ ಉಪಸ್ಥಿತರಿದ್ದರು.

ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 4818 ಮಂದಿ ರೈತರಿಗೆ ವಿದ್ಯಾನಿಧಿ ನೀಡುವ ಕಾರ್ಯ ಈಗಾಗಲೇ ನಡೆದಿದೆ. ಈ ಯೋಜನೆಯಲ್ಲಿ ಸುಮಾರು ರೂ. 30 ಸಾವಿರದಿಂದ 40 ಸಾವಿರದಷ್ಟು ಹಣ ರೈತರ ಖಾತೆಗೆ ಬಂದಿದೆ. ಕಿಸಾನ್ ಸಮ್ಮಾನ್ ನಿಧಿಯಲ್ಲಿ 20,753೩ ಮಂದಿ ರೈತರಿಗೆ ಅನುದಾನ ಬಂದಿದೆ. ವಿಮಾ ಯೋಜನೆಯಲ್ಲಿ ಪುತೂರು ಆಸು ಪಾಸಿನ ಎಲ್ಲಾ ಸಹಕಾರಿ ಸಂಘದಲ್ಲಿ ಕಡಿಮೆ ಪಕ್ಷ ಪುತ್ತೂರು ತಾಲೂಕಿಗೆ ವರ್ಷಕ್ಕೆ ಸುಮಾರು ರೂ. 60 ಕೋಟಿಯಷ್ಟು ಹಣ ರೈತರ ವಿಮೆ ಪರಿಹಾರ ಜಮೆ ಆಗಿದೆ. ಹಾಗಾಗಿ ಕಳೆದ 70 ವರ್ಷಗಳಿಂದ ರೈತರಿಗೆ ಈ ರೀತಿಯ ಅನುದಾನ ಬಿಡುಗಡೆ ಮಾಡಿದ್ದನ್ನು ಎಲ್ಲಿಯೂ ಕಂಡಿಲ್ಲ. ಕಳೆದ 2014ರಿಂದ ಬಿಜೆಪಿ ಸರಕಾರದಿಂದ ಸಿಗುವ ಸೌಲಭ್ಯ ರೈತರ ಮೂಲ ಖಾತೆಗೆ ಜಮೆ ಆಗಿದೆ. ಬೂಡಿಯಾರ್ ರಾಧಾಕೃಷ್ಣ ರೈ ಸಂಚಾಲಕರು ಸೇವೆ ಸುಶಾಶನ, ಬಡವರ ಕಲ್ಯಾಣ ಕಾರ್ಯಕ್ರಮ

LEAVE A REPLY

Please enter your comment!
Please enter your name here