ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಶೇ.100 ಫಲಿತಾಂಶ

0

ಪುತ್ತೂರು : ಭಾರತ್ ಸೇವಕ್ ಸಮಾಜದ ವತಿಯಿಂದ ಸುಳ್ಯ ಹಾಗೂ ಬೆಳ್ಳಾರೆಯಲ್ಲಿ ನಡೆಸಲ್ಪಡುತ್ತಿರುವ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ 2021-22ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ (ಡಿಎಂಇಡಿ)ಫಲಿತಾಂಶ ಪ್ರಕಟಗೊಂಡಿದ್ದು, ಐದನೇ ಬ್ಯಾಚ್‌ನ ಎಲ್ಲಾ ವಿದ್ಯಾರ್ಥಿ ಶಿಕ್ಷಕಿಯರು ಉತ್ತೀರ್ಣರಾಗುವ ಮೂಲಕ ಸತತ ಐದನೇ ಬಾರಿಗೆ ಶೇ.100ಫಲಿತಾಂಶ ದಾಖಲಾಗಿದೆ. ೪ ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 5 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.



2021-22ಸಾಲಿನಲ್ಲಿ 9 ವಿದ್ಯಾರ್ಥಿಗಳು ಮೊಂಟೆಸ್ಸರಿ ಶಾಲಾ ಶಿಕ್ಷಕಿಯರ ತರಬೇತಿಯ ಪರೀಕ್ಷೆ ಬರೆದಿದ್ದರು. ಸಲ್ಮಾ ಸಿ ಹೆಚ್ (1110), ಸೌಮ್ಯ (1074), ಗುಣಶ್ರೀ ಬಿ.ಎಸ್ ( 1047), ಹರಿಣಾಕ್ಷಿ ಡಿ.ಜಿ (966) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣ ರಾಗಿದ್ದಾರೆ. ಶ್ವೇತಾ ಎಸ್, ರೇಖಾ ಸಿ.ಎಚ್, ಅಝ್ಮೀನಾ ಎ, ವಿದ್ಯಶ್ರೀ ಕೆ, ನಳಿನಿ ಡಿ. ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸತತ ಐದು ವರ್ಷಗಳಿಂದ ಸಂಸ್ಥೆಯು ಶೇ.1೦೦ ಫಲಿತಾಂಶ ದಾಖಲಿಸಿದೆ. ಸಂಸ್ಥೆಯಲ್ಲಿ2022-23 ನೇ ಸಾಲಿನ ನರ್ಸರಿ ಶಿಕ್ಷಕಿಯರ ತರಬೇತಿ ಪ್ರವೇಶಾತಿ ಆರಂಭಗೊಂಡಿದೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here