ಮುಕ್ವೆ ಶಾಲೆಯಲ್ಲಿ‌ ಪರಿಸರ ದಿನಾಚರಣೆ

0

ಪುತ್ತೂರು: ಸಾಮಾಜಿಕ ಅರಣ್ಯ ಇಲಾಖೆಯ‌ ಮಂಗಳೂರು ವಿಭಾಗ ಮತ್ತು ಪುತ್ತೂರು ವಲಯದ ವತಿಯಿಂದ ಮುಕ್ವೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಮುಕ್ವೆ ಉ.ಹಿ.ಪ್ರಾ.ಶಾಲೆಯಲ್ಲಿ‌ ಜೂ.5ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

 

ಸಾಮಾಜಿಕ‌ ಅರಣ್ಯ ಇಲಾಖೆಯ ಪುತ್ತೂರು ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಪಿ.ಕೆ.ರವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಉಪ ವಲಯ ಅರಣ್ಯಾಧಿಕಾರಿ ಕೃಷ್ಣ ಮಾತನಾಡಿ ಶುಭ ಹಾರೈಸಿದರು.
ಎಸ್.ಡಿ .ಎಂ.ಸಿ ಅಧ್ಯಕ್ಷ ಶಮೀರ್ ಅದ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ತಾಹಿರಾ ಉಪಸ್ಥಿತರಿದ್ದರು. ಜಿ.ಪಿ.ಟಿ.ಶಿಕ್ಷಕಿ ಜಯಶ್ರೀ ಮಕ್ಕಳಿಂದ ಪರಿಸರ ಘೋಷಣೆ ಹೇಳಿಸಿದರು. ಅರಣ್ಯ ಇಲಾಖೆಯಿಂದ ತಂದ ಗಿಡಗಳನ್ನು ಕಾರ್ಯಕ್ರಮದಲ್ಲಿ ಶಾಲೆಗೆ ಹಸ್ತಾಂತರಿಸಲಾಯಿತು. ಮುಖ್ಯಗುರು ಪುಷ್ಪ ಕುಮಾರಿ ಸ್ವಾಗತಿಸಿ, ಶಿಕ್ಷಕಿ ಕಾರ್ಮಲೆಸ್ಸ್ ಅಂದ್ರಾದೆ ವಂದಿಸಿದರು. ಗೈಡ್ಸ್ ಶಿಕ್ಷಕಿ ವೇದಾವತಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ನೀಡಲಾಯಿತು.

LEAVE A REPLY

Please enter your comment!
Please enter your name here