SKSSF ಆತೂರು ಶಾಖೆ ವತಿಯಿಂದ ಪರಿಸರ ದಿನಾಚರಣೆ ಹಾಗು ಕೃಷಿಕರಿಗೆ ಸನ್ಮಾನ

0

ಆತೂರು: SKSSF ಆತೂರು ಶಾಖೆ ವತಿಯಿಂದ ಪರಿಸರ ದಿನಾಚರಣೆ ಹಾಗು ಕೃಷಿಕರಿಗೆ ಸನ್ಮಾನ ಕಾರ್ಯಕ್ರಮ ಆತೂರು ಬದ್ರಿಯಾ ಜುಮಾ ಮಸೀದಿ ಪರಿಸರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಆತೂರು ಮುದರಿಸ್ ಅಸ್ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಗಳ್ ಫೈಝಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF ಆತೂರು ಶಾಖೆ ಅಧ್ಯಕ್ಷರಾದ ಬಿ ಕೆ ಅಬ್ದುಲ್ ರಝಕ್ ವಹಿಸಿದರು.ಕೃಷಿಕರಾದ ಬದ್ರಿಯಾ ಜುಮಾ ಮಸೀದಿ ಆತೂರು ಅಧ್ಯಕ್ಷರಾದ ಎಚ್ ಅಹಮದ್ ಕುಂಞಿ, ಶಂಸುಲ್ ಉಲಮಾ ಕ್ರಿಯಾ ಸಮಿತಿ ಆತೂರು ಪ್ರದಾನ ಕಾರ್ಯದರ್ಶಿ ಕರೀಂ ಹೆಂತಾರ್, SKSSF ಆತೂರು ಕ್ಲಸ್ಟರ್ ವಿಖಾಯ ಕಾರ್ಯದರ್ಶಿ ಅಝೀಝು ಪಲ್ತಾಡಿ ಹಾಗು SKSSF ಆತೂರು ಶಾಖೆ ಸಂಘಟನೆ ಕಾರ್ಯದರ್ಶಿ ಉಮಾರುಲ್ ಫಾರೂಕ್ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತದ್ ಬಿರುಲ್ ಇಸ್ಲಾಂ ಮದರಸ ಆತೂರು ಸದರ್ ಉಸ್ತಾದ್ ಸಿದ್ದಿಕ್ ಫೈಝಿ, SKSSF ಆತೂರು ಶಾಖೆ ವಿಖಾಯ ಕಾರ್ಯದರ್ಶಿ ನಾಸಿರ್ ಮರೋಡಿ, ಶಾಕಿರ್, ಬಸೀರ್ ಹಾಗು ಮದರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. SKSSF ಆತೂರು ಶಾಖೆ ಪ್ರಧಾನ ಕಾರ್ಯದರ್ಶಿ ಎನ್ ಸಿದ್ದಿಕ್ ಸ್ವಾಗತಿಸಿ, ಮುನೀರ್ ಆತೂರು ವಂದಿಸಿದರು.

LEAVE A REPLY

Please enter your comment!
Please enter your name here