ಅರಿಯಡ್ಕ ಬಿಲ್ಲವ ಗ್ರಾಮ ಸಮಿತಿ ವಾರ್ಷಿಕ ಮಹಾಸಭೆ: ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ

0

ಪುತ್ತೂರು: ಅರಿಯಡ್ಕ ಬಿಲ್ಲವ ಗ್ರಾಮ ಸಮಿತಿಯ 2021-22ನೇ ಸಾಲಿನ ವಾರ್ಷಿಕ ಮಹಾಸಭೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಮಜ್ಜಾರಡ್ಕದಲ್ಲಿ ಜೂ.4ರಂದು ನಡೆಯಿತು.


ಅರಿಯಡ್ಕ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಚಿದಾನಂದ ಕುರಿಂಜ ಮನ್ನಾಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ನಾಗೇಶ್ ಬಲ್ನಾಡು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯಶೋಧ ಪದ್ಮನಾಭ 2021-22ನೇ ಸಾಲಿನ ವರದಿ ವಾಚಿಸಿದರು. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.

ಸನ್ಮಾನ: ಹತ್ತನೇ ತರಗತಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ  ಪ್ರಥಮ್ ಪಾಪೆಮಜಲು, ಪ್ರಣಾಮ್ ಪಾಪೆಮಜಲು, ಮಂಜುಳಾ ಕೆ.ಎಸ್ ಮಜ್ಜಾರುರವರನ್ನು ಸನ್ಮಾನಿಸಲಾಯಿತು. ಹಾಗೂ ಅರಿಯಡ್ಕ ಶ್ರೀಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡ್ಯಡ್ಕ ವಾಸು ಪೂಜಾರಿ, ಬಿಲ್ಲವ ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಗಿರೀಶ್ ಮಜ್ಜಾರಡ್ಕ ಮತ್ತು ಕಟೀಲು ಮೇಳದ ಯಕ್ಷಗಾನ ಕಲಾವಿದ ನಾರಾಯಣ ಸುವರ್ಣರವರನ್ನು ಸನ್ಮಾನಿಸಲಾಯಿತು.

ಪುತ್ತೂರು ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ನಾಗೇಶ್ ಬಲ್ನಾಡು, ಪುತ್ತೂರು ತಾಲೂಕು ಬಿಲ್ಲವ ಸಂಘದ ಕೋಶಾಧಿಕಾರಿ ಮಹೇಶ ಚಂದ್ರ ಸಾಲಿಯಾನ್, ಪುತ್ತೂರು ಗುರು ಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ, ಅರಿಯಡ್ಕ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಚಿದಾನಂದ ಕುರಿಂಜ ಮನ್ನಾಪು, ಪುತ್ತೂರು ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಕಲಾ, ಅರಿಯಡ್ಕ ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಯಶೋಧ ಪದ್ಮನಾಭ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಾಮ ಸಮಿತಿ ಉಪಾಧ್ಯಕ್ಷ ಜನಾರ್ದನ ಪೂಜಾರಿ ಬಳ್ಳಿಕಾನ, ಜಯರಾಮ್ ಪೂಜಾರಿ ಕುಕ್ಕತ್ತಡಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಜೊತೆ ಕಾರ್ಯದರ್ಶಿ ಚಂದ್ರಶೇಖರ ಪೂಜಾರಿ ಕುತ್ತಿಯಾಡಿ, ಖಜಾಂಜಿ ರಮೇಶ್ ಪೂಜಾರಿ ದರ್ಬೆತಡ್ಕ, ಮಹಿಳಾ ವೇದಿಕೆ ಉಪಾಧ್ಯಕ್ಷೆ ಸೇಸಮ್ಮ ವಾಸು ಪೂಜಾರಿ ಗುಂಡ್ಯಡ್ಕ, ಕಾರ್ಯದರ್ಶಿ ಲೋಕವತಿ, ಜೊತೆ ಕಾರ್ಯದರ್ಶಿ ವನಿತಾ ಕೌಡಿಚ್ಚಾರು, ಖಜಾಂಜಿ ಸೌಮ್ಯ ಹಾಗೂ ಸಮಾಜ ಬಾಂಧವರು ಭಾಗವಹಿಸಿದರು. ವಿಖ್ಯಾತ ಪ್ರಾರ್ಥಿಸಿದರು. ಭವಿತ್ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು. ಪ್ರತೀಕ್ ವಂದಿಸಿದರು.

 

LEAVE A REPLY

Please enter your comment!
Please enter your name here