ಹೊಸ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ:  ಗಿಡ,ಮರಗಳನ್ನು ಬೆಳೆಸುವುದು ಎಲ್ಲರ ಕರ್ತವ್ಯ – ನ್ಯಾಯಾಧೀಶ ಓಂಕರಾಪ್ಪ

0

ಪುತ್ತೂರು: ಭೂಮಿಯ ಮೇಲೆ ಉಸಿರಾಟಕ್ಕೆ ಶುದ್ದವಾದ ಆಮ್ಲಜನಕವನ್ನು ಗಿಡ, ಮರಗಳು ಕೊಡುವುದರಿಂದ ನಾವು ಆರೋಗ್ಯವಂತರಾಗಿದ್ದೇವೆ. ನಮ್ಮ ಆರೋಗ್ಯ ಮತ್ತು ಪರಿಸರ ಉಳಿಸಲು ಗಿಡ, ಮರಗಳನ್ನೆ ಬೆಳೆಸಬೇಕೆಂದು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್ ಓಂಕರಾಪ್ಪ ಅವರು ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜೂ.೪ರಂದು ಆನೆಮಜಲ್ಲಿರುವ ಹೊಸ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಪ್ರಾಣಿ ಪಕ್ಷಿಗಳು ಪ್ರಯೋಜನ ಆಗುತ್ತದೆ. ನಾವೆಲ್ಲ ಪರಿಸರವನ್ನು ಕಾಪಾಡೋಣ ಎಂದರು.

ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ನಮಗೆ ಬೇಕಾದನ್ನು ಪ್ರಾಣಿ, ಪಕ್ಷಿಗಳನ್ನು ಗೂಡಿನಲ್ಲಿ ಇಟ್ಟು ಸಾಕುವ ಬದಲು ಗಿಡ ಮರಗಳನ್ನು, ಪ್ರಕೃತಿಯನ್ನು ಉಳಿಸಿ ಬೆಳೆಸುವ ಮನಸ್ಸು ಮಾಡಿದಾಗ ಪ್ರಾಣಿ, ಪಕ್ಷಿಗಳು ತಾವಾಗಿಯೇ ಬರುತ್ತವೆ. ಪ್ರಕೃತಿಯೊಂದಿಗೆ ಪ್ರೀತಿಯನ್ನು ಹಂಚಿದಾದ ಅದು ಕೂಡಾ ನಮಗೆ ಉತ್ತಮ ಫಲ ಕೊಡುತ್ತದೆ ಎಂದರು.

ಬಿತ್ತೋತ್ಸವ:
ಅರಣ್ಯ ಇಲಾಖೆಯಿಂದ ನಡೆದ ಬಿತ್ತೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಗೌಡ ಆರ್.ಪಿ ಅವರು ಹಲಸಿನ ಬೀಜವನ್ನು ಬಿತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ವಕೀಲರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ, ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ, ಕಾನೂನು ಸೇವೆ ಸಮಿತಿಯ ರಂಗಪ್ಪ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here