ಉರ್ಲಾಂಡಿ ನಾಯರಡ್ಕದಲ್ಲಿ ಬೆಳಕು ಯೋಜನೆಯಲ್ಲಿ ’ಉಚಿತ ವಿದ್ಯುತ್ ಸಂಪರ್ಕ’ ಉದ್ಘಾಟನೆ: ವಿವಿಧ ಸೌಲಭ್ಯ ಒದಗಿಸಿಕೊಟ್ಟ ಶಾಸಕರಿಗೆ ಕಾಲೋನಿ ನಿವಾಸಿಗಳಿಂದ ಅಭಿನಂದನಾ ಪತ್ರ

0

  • ಕಾನೂನಿನ ತೊಡಕನ್ನು ಬದಿಗಿಟ್ಟು ವಿದ್ಯುತ್ ಸಂಪರ್ಕ ನೀಡಿದ್ದೇವೆ – ಸಂಜೀವ ಮಠಂದೂರು

ಪುತ್ತೂರು: ಕರ್ನಾಟಕ ಸರಕಾರ ಗ್ರಾಮೀಣ ಭಾಗದ ಪರಿಶಿಷ್ಟ, ಜಾತಿ, ಪಂಗಡ ಸೇರಿದಂತೆ ಬಡತನ ರೇಖೆಯಲ್ಲಿರುವವರಿಗೆ ವಿದ್ಯುತ್ ಉಚಿತವಾಗಿ ನೀಡಬೇಕು ಮತ್ತು ಅವರಿಗೆ ಮನೆಗೆ ಸಂಬಂಧಿಸಿ ದಾಖಲೆ ಇಲ್ಲದಿದ್ದರೂ ಕಾನೂನಿನಲ್ಲಿ ಮಾನವೀಯತೆ ದೃಷ್ಟಿಯಿಂದ ವಿದ್ಯುತ್ ಸಂಪರ್ಕ ನೀಡುತ್ತಿದ್ದೇವೆ ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.


ಉರ್ಲಾಂಡಿ ನಾಯರಡ್ಕದಲ್ಲಿ ಕಾಲೋನಿಯಲ್ಲಿನ ಎರಡು ಮನೆಗಳಿಗೆ ರಾಜ್ಯ ಸರಕಾರದ ಬೆಳಕು ಯೋಜನೆಯಡಿ ನೀಡಿದ ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿ ಹಲವು ಮಂದಿ ಇವತ್ತಿಗೂ ವಿದ್ಯುತ್‌ನಿಂದ ವಂಚಿತರಾಗಿದ್ದಾರೆ. ಅದರಲ್ಲಿ ಕೆಲವರಿಗೆ ಆರ್ಥಿಕವಾಗಿ ತೊಂದರೆ ಇದ್ದರೆ, ಇನ್ನು ಕೆಲವರಿಗೆ ಜಾಗದ ಸಮಸ್ಯೆ ಇದೆ. ಇದೆನ್ನಲ್ಲ ಬದಿಗಿಟ್ಟು, ವಿದ್ಯುತ್ ಕೊಡುವ ಕೆಲಸ ಮಾಡಿದ್ದೇವೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ೮೬೦ಕ್ಕೂ ಮಿಕ್ಕಿ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿದೆ. ಪುತ್ತೂರಿನಲ್ಲಿ ಈಗಾಗಲೇ ಬಲ್ನಾಡಿನ ಮಾಯ್ಲ ಕಾಲೋನಿಯಲ್ಲಿ ಉಚಿತ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದರು. ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಳೀಯ ಸದಸ್ಯ ಸಂತೋಷ್ ಬೊಳುವಾರು, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭಾ ಸದಸ್ಯೆ ದೀಕ್ಷಾ ಪೈ, ಮಾಜಿ ಪುರಸಭಾ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ನೀಲಂತ್ ಬೊಳುವಾರು, ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ದಯಾಕರ್ ಹೆಗ್ಡೆ, ಪ್ರದೀಪ್ ಹೆಗ್ಡೆ, ರವಿಪೂಜಾರಿ ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ಅಭಿನಂದನಾ ಪತ್ರ:
ಉರ್ಲಾಂಡಿ ನಾಯರಡ್ಕ ಕಾಲೋನಿಯಲ್ಲಿ ಬಹುಬೇಡಿಕೆಯ ರಸ್ತೆ ಸೌಲಭ್ಯ, ಸುಮಾರು ೫೬ ಮನೆಗಳಿಗೆ ಬೆಳಕು ಯೋಜನೆ, ನೀರಿನ ಸಂಪರ್ಕ, ಮನೆ ದುರಸ್ತಿಗೆ ಅನುದಾನ ನೀಡಿದ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸ್ಥಳೀಯ ಸದಸ್ಯ ಸಂತೋಷ್ ಕುಮಾರ್ ಅವರಿಗೆ ಉರ್ಲಾಂಡಿ – ನಾಯರಡ್ಕ ನಿವಾಸಿಗಳು ಬರೆದಿರುವ ಅಭಿನಂದನಾ ಪತ್ರವನ್ನು ನಿವಾಸಿಗಳು ಶಾಸಕರಿಗೆ ನೀಡಿದರು. ಈ ವೇಳೆ ಶಾಸಕರು ಬೇಡಿಕೆಯ ಮನವಿ ಪತ್ರವೆಂದು ಓದಿ ದಿಗ್ಭ್ರಮೆಗೊಂಡು. ಇಲ್ಲಿನ ತನಕ ಎಲ್ಲಾ ಕಡೆ ನನಗೆ ಬೇಡಿಕೆ ಮನವಿಗಳು ಮಾತ್ರ ಬಂದಿದ್ದು, ಇದೇ ಪ್ರಥಮ ಬಾರಿಗೆ ನಿಮ್ಮಿಂದ ಅಭಿಂದನಾ ಮನವಿಯೂ ಬಂದಿರುವುದು ಸಂತೋಷ ಆಗಿದೆ ಎಂದರು.

LEAVE A REPLY

Please enter your comment!
Please enter your name here