ನವದೆಹಲಿಯಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಮೊಳಗಿದ ಸುದ್ದಿ ಜನಾಂದೋಲನದ ಧ್ವನಿ

0

ಕರಾವಳಿಯ ಸಮಗ್ರ ಅಭಿವೃದ್ಧಿಗೆ ರಾಜಧಾನಿಯ ಕರಾವಳಿಗರ ಸಾಥ್

ಕೇಂದ್ರ ಸರ್ಕಾರ ಅಧಿಕಾರಿಗಳಿಂದ ಘೋಷಣೆ- ನಮ್ಮೂರ ಯುವ ಸಮೂಹದ ನೆರವಿಗೆ ನಿಲ್ಲಲು ಒಪ್ಪಿಗೆ

ವೇದಿಕೆಯಲ್ಲಿ ಎಡದಿಂದ ಬಳಕ್ಕೆ ಎಸ್.ಜಿ. ಸರಸ್ವತಿ ನಿವಾಸಿ ನಿರ್ದೇಶಕಿ, ಕರ್ನಾಟಕ ಸರ್ಕಾರದ ಉದ್ಯೋಗ ಮಿತ್ರ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಹರೀಶ್ ಕುಮಾರ್ ಕಲ್ಲೇಗ, ಉಪ ನಿರ್ದೇಶಕ, ಹಣಕಾಸು ಮಂತ್ರಾಲಯ,ಭಾರತ ಸರ್ಕಾರ, ಶ್ವೇತಾ ರಾವ್ ಬಿ,ಉಪ ಕಾರ್ಯದರ್ಶಿ, ಭಾರತ ಸರ್ಕಾರ, ಡಾ. ಪ್ರಸನ್ನ ವಿ ಸಾಲ್ಯಾನ್, ನಿರ್ದೇಶಕರು, ಹಣಕಾಸು ಮಂತ್ರಾಲಯ, ವಸಂತ ಶೆಟ್ಟಿ ಬೆಳ್ಳಾರೆ, ಅಧ್ಯಕ್ಷರು, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ, ಡಾ.ಯು.ಪಿ.ಶಿವಾನಂದ್,ಅಧ್ಯಕ್ಷರು, ಸುದ್ದಿ ಮಾಹಿತಿ ಟ್ರಸ್ಟ್ ಪುತ್ತೂರು, ಡಾ. ಶಶಿಕುಮಾರ್, ಕನ್ನಡ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ

ನವದೆಹಲಿ: ನಮ್ಮ ಊರು ನಮ್ಮ ಹೆಮ್ಮೆ..ನವದೆಹಲಿಯ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ಸೇರಿದ್ದವರ ಮನದಲ್ಲಿದ್ದ ಧ್ಯೇಯವಾಕ್ಯ. ದೇಶದ ರಾಜಧಾನಿಯಲ್ಲಿ ಕುಳಿತವರು ತಮ್ಮ ಊರಿನ ಅಭಿವೃದ್ಧಿಯ ಬಗ್ಗೆ ಚಿಂತಿಸಿ, ಅದಕ್ಕಾಗಿ ಸ್ಪಂಧಿಸುವ ವಿನೂತನ ಕಾರ್ಯಕ್ರಮವನ್ನು ದೆಹಲಿ ಮಿತ್ರ ಮತ್ತು ಸುದ್ದಿ ಮಾಹಿತಿ ಟ್ರಸ್ಟ್ ಪುತ್ತೂರು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ನಾಲ್ವರು ಅಧಿಕಾರಿಗಳು ಭಾಗವಹಿಸಿ ಮಾಹಿತಿ ವಿನಿಮಯ ಮಾಡಿಕೊಂಡಿದ್ದು ಮಾತ್ರವಲ್ಲದೇ, ನಮ್ಮೂರಿನ ಯುವಕರಿಗೆ ನೆರವಾಗುವುದಾಗಿ ಭರವಸೆ ನೀಡಿದರು.

ರಾಜಧಾನಿಯಲ್ಲಿ ಊರಿನ ಅಭಿವೃದ್ಧಿಗೆ ಸ್ಫಂದನೆ:

ನವದೆಹಲಿಯ ಲೋಧಿ ಎಸ್ಟೇಟ್ ನಲ್ಲಿರುವ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು. ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರಾವಳಿಯವರು ಊರಿನ ಅಭಿವೃದ್ಧಿಗೆ ಯಾವ ರೀತಿ ಸ್ಪಂಧಿಸಬಹುದು ಎಂಬುದರ ಕುರಿತು ಚರ್ಚಿಸಿದರು.

ಲಂಚ-ಭ್ರಷ್ಟಾಚಾರವನ್ನು ವಿರೋಧಿಸುವುದು ಅತ್ಯಗತ್ಯ ಸುದ್ದಿಯ ಆಂದೋಲನದ ಬಗ್ಗೆ ಅಪಾರ ಮೆಚ್ಚುಗೆ: ಅಭಿವೃದ್ಧಿ ಅನ್ನುವ ಧ್ಯೇಯಕ್ಕೆ ಮಾರಕವಾಗಿರುವುದು ಲಂಚ, ಭ್ರಷ್ಟಾಚಾರ. ಈ ಲಂಚ ಭ್ರಷ್ಟಾಚಾರದ ವಿರುದ್ಧ ಡಾ.ಯು.ಪಿ ಶಿವಾನಂದ್ ನೇತೃತ್ವದ ಸುದ್ದಿ ಸಮೂಹ ಸಂಸ್ಥೆಗಳು ಮತ್ತು ಸುದ್ದಿ ಮಾಹಿತಿ ಟ್ರಸ್ಟ್ ಹೋರಾಟ ನಡೆಸುತ್ತಿವೆ. ಲಂಚ ಭ್ರಷ್ಟಾಚಾರ ನಿರ್ಮೂಲನೆ ಆದಾಗ ಅಭಿವೃದ್ಧಿ ಶೇಕಡಾ ೧೦೦ರಷ್ಟು ಆಗುವುದಕ್ಕೆ ಸಾಧ್ಯವೆಂದು ಕಾರ್ಯಕ್ರಮದಲ್ಲಿದ್ದ ಕರಾವಳಿಗರು ಹೇಳಿದರು.

ಕರಾವಳಿಯ ತಾಲೂಕುಗಳು ಮತ್ತು ದೆಹಲಿಯಲ್ಲಿ ಸಮಿತಿ ರಚನೆಗೆ ಚಿಂತನೆ:

ಸಮಾಜಕ್ಕೆ ಒಳಿತಾಗುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಸಮಿತಿ ರಚನೆ ಕುರಿತು ಚಿಂತಿಸಲಾಯಿತು. ಈ ಸಮಿತಿಯವರು ನಮ್ಮ ಊರಿನ ಅಭಿವೃದ್ಧಿಯ ಫೈಲ್ ಎಲ್ಲಿ ಬಾಕಿಯಾಗಿದೆ. ಯಾವ ಹಂತದಲ್ಲಿದೆ ಎಂಬುವುದರ ಬಗ್ಗೆ ಸಮಿತಿ ಅಧ್ಯಯನ ಮಾಡಲಿದೆ. ನಂತರ ಅವುಗಳನ್ನು ದೆಹಲಿಯಲ್ಲಿರುವ ಸಮಿತಿಗೆ ಕಳುಹಿಸಿಕೊಡಲಿದೆ. ಈ ದಾಖಲೆ ಪತ್ರಗಳನ್ನು ಅಧಿಕಾರಿಗಳಿಗೆ ಕಳುಹಿಸಿಕೊಡುವುದು, ಅದರ ರಾಜಧಾನಿಯಲ್ಲಿ ಮಾಡಬೇಕಾದ ಫಾಲೋ ಅಪ್, ದೆಹಲಿಯ ಸಮಿತಿ ಮಾಡುವುದಾಗಿ ನಿರ್ಧರಿಸಲಾಯಿತು.

ನಾನು ಎಲ್ಲೂ ಲಂಚ ಕೊಡುವುದಿಲ್ಲ, ಲಂಚ ತೆಗೆದುಕೊಳ್ಳಲ್ಲ
ಕಾರ್ಯಕ್ರಮದಲ್ಲಿ ಸೇರಿದವರಿಂದ ಒಕ್ಕೊರಲಿನ ನಿರ್ಧಾರ
ಘೋಷಣೆ ಕೂಗುವ ಮೂಲಕ ಸಂಕಲ್ಪ ಮಾಡಿದ ದೆಹಲಿ ಮಿತ್ರರು

ಸುದ್ದಿಯ ಲಂಚ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಸಭೆಯಲ್ಲಿ ಅಭೂತಪೂರ್ವ ಸಾಥ್ ಸಿಕ್ಕಿದ್ದು ಮಾತ್ರವಲ್ಲದೇ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ನಾವು ಎಲ್ಲೂ ಲಂಚ ಕೊಡುವುದಿಲ್ಲ ಮತ್ತು ಲಂಚ ತೆಗೆದುಕೊಳ್ಳುವುದಿಲ್ಲ ಅನ್ನುವುದನ್ನು ಸಾರಿದರು. ಅಲ್ಲದೇ, ಲಂಚ ಭ್ರಷ್ಟಾಚಾರದ ವಿರೋಧಿ ಘೋಷಣೆಯನ್ನು ಕೂಗುವ ಮೂಲಕ ಸುದ್ದಿಯ ಆಂದೋಲನಕ್ಕೆ ದೆಹಲಿ ಮಿತ್ರರು ಸಾಥ್ ನೀಡಿದರು.

ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು ಪಣ, ಕರಾವಳಿ ಕೃಷಿ ವಿಶ್ವ ವಿದ್ಯಾನಿಲಯ ಬೇಕು ಅನ್ನುವ ಕೂಗು: ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕರಾವಳಿಯಲ್ಲಿ ಕೃಷಿ ವಿಶ್ವ ವಿದ್ಯಾನಿಲಯ ನಿರ್ಮಾಣವಾಗಬೇಕು ಅನ್ನುವ ಧ್ವನಿ ಒಕ್ಕೊರಲಿನಿಂದ ಕೇಳಲ್ಪಟ್ಟತು. ಇದರ ಜೊತೆ ಜೊತೆಗೆ ಪುತ್ತೂರು ತಾಲೂಕಿಗೆ ಮೆಡಿಕಲ್ ಕಾಲೇಜು,ಕುಂದಾಪುರದ ಹಲವು ಗ್ರಾಮಗಳಿಗೆ ಶಾಶ್ವತ ನೀರಿನ ವ್ಯವಸ್ಥೆ ಬೇಕು, ಸುಳ್ಯಕ್ಕೆ ರೈಲು ಬರುವಂತಾಗಬೇಕು ಅನ್ನುವ ಬೇಡಿಕೆಗಳ ಬಗ್ಗೆಯೂ ಚರ್ಚಿಸಲಾಯಿತು. ನಮ್ಮ ಊರಿಗೆ ಕೆಲಸ ಮಾಡುವವರನ್ನು ಗೌರವಿಸಬೇಕು.ಮುಂದಿನ ದಿನಗಳಲ್ಲಿ ನಮ್ಮ ಶಾಲೆ, ನಮ್ಮ ಪಂಚಾಯತ್ , ನಮ್ಮ ತಾಲೂಕಿನ ಅಭಿವೃದ್ದಿ ಬಗ್ಗೆ ಒಂದಾಗಿ ಕೈ ಜೋಡಿಸಬೇಕಿದೆ ಎಂಬ ಧ್ವನಿ ಒಕ್ಕೊರಲಿನಿಂದ ಮೂಡಿತ್ತು. ಹೀಗಾಗಿ ದೆಹಲಿಯಲ್ಲಿ ನಡೆದ ನಮ್ಮೂರು ನಮ್ಮ ಹೆಮ್ಮೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

ಭ್ರಷ್ಟಾಚಾರ ರಹಿತ ಕರಾವಳಿ,ರಾಜ್ಯ ನಮ್ಮದಾಗಬೇಕು
ನಾವು ಊರಿಗೆ ಹೇಗೆ ಸ್ಪಂದಿಸಬೇಕು ಅನ್ನುವುದು ನಮ್ಮ ಧೇಯ


ಸುದ್ದಿ ಸಮೂಹ ಸಂಸ್ಥೆಗಳು ಆರಂಭದಲ್ಲಿ ಸುಳ್ಯ ಪುತ್ತೂರು ಬೆಳ್ತಂಗಡಿ ತಾಲೂಕನ್ನು ಭ್ರಷ್ಟಾಚಾರ ರಹಿತವನ್ನಾಗಿ ಮಾಡಲು ಮುಂದಾಗಿದ್ದಾರೆ. ಆದರೆ ರಾಜಧಾನಿಯಲ್ಲಿ ಸೇರಿರುವ ಕರಾವಳಿಯವರು ಸಂಪೂರ್ಣ ಕರಾವಳಿಯನ್ನು ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡಬೇಕು ಅಂತ ಹೇಳುತ್ತಿದ್ದಾರೆ. ಇದರ ಜೊತೆ ಈ ಆಂದೋಲನ ರಾಜ್ಯವ್ಯಾಪಿ ತಲುಪಬೇಕು. ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿರುವ ಆರು ಜನ ಸಂಸದರಿದ್ದಾರೆ. ನಾವು ಅವರನ್ನು ಸೇರಿಸಿಕೊಂಡು ಏನು ಮಾಡಬಹುದು ಅನ್ನುವ ಕುರಿತು ಯೋಚಿಸಬೇಕಿದೆ, ಕರ್ನಾಟಕದ ಎಲ್ಲಾಅಧಿಕಾರಿಗಳನ್ನು ನಾವು ಒಟ್ಟುಗೂಡಿಸಬೇಕು. ರಾಜಧಾನಿಯಲ್ಲಿ ಕನ್ನಡ ಅಧ್ಯಯನ ಪೀಠ, ಕನ್ನಡ ಸಂಘ, ಕನ್ನಡ ಕಟ್ಟಡಗಳಿಗೆ ನೆರವು ನೀಡಿದವರು ಅಂದಾಗ ರಾಜಕೀಯ ನಾಯಕರ ಹೆಸರು ಬರುತ್ತೆ, ಆದರೆ ಆ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅವರಿಗೆ ತಲುಪಿಸಿ, ಆ ಕಾರ್ಯಗಳು ಆಗಲು ನೆರವಾಗಿದ್ದು ಅಧಿಕಾರಿಗಳು,ಅವರನ್ನು ನಾವು ನೆನಪಿಸಿಕೊಳ್ಳಬೇಕು. ರಾಜಧಾನಿಯಲ್ಲಿರುವ ನಾವು ನೀವು ಊರಿಗೆ ಏನು ಮಾಡಬೇಕು ಅನ್ನುವುದರ ಕುರಿತು ಚಿಂತಿಸಬೇಕಿದೆ. ನಮಗೆ ರಾಜಧಾನಿಯಲ್ಲಿರುವ ಹಲವರು ಸ್ಫೂರ್ತಿಯಾಗಿದ್ದಾರೆ. ನಮ್ಮೂರಿನ ಯುವ ಸಮೂಹಕ್ಕೆ ಎಂ ಆರ್ ಪಿ ಎಲ್ ನಲ್ಲಿ ಉದ್ಯೋಗ ಪಡೆಯುವುದೇ ಬಹುದೊಡ್ಡ ವಿಷಯವಾಗಿದೆ. ಆದರೆ ಎಂ ಆರ್ ಪಿ ಎಲ್ ಮಾತ್ರವಲ್ಲದೇ ಅದೇ ರೀತಿಯ ಬೇರೆ ಬೇರೆ ಕಂಪೆನಿಗಳಿವೆ. ಆ ಕಂಪೆನಿಗಳ ಬಗ್ಗೆ ಮಾಹಿತಿ ಯುವಕರಿಗೆ ಕೊಡಬೇಕು.

ವಸಂತ ಶೆಟ್ಟಿ ಬೆಳ್ಳಾರೆ, ಅಧ್ಯಕ್ಷರು, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ

ನಾವು ಸುದ್ದಿಯ ಜೊತೆ ಕೈ ಜೋಡಿಸಿದರೆ ಗ್ರಾಮೀಣಾಭಿವೃದ್ಧಿಗೆ ನೆರವಾಗಬಹುದು


ಸುಳ್ಯದಂತಹ ಹಿಂದುಳಿದ ಪ್ರದೇಶದಲ್ಲಿ 1980ರ ದಶಕದಲ್ಲಿ ಬಳಕೆದಾರರ ಚಳುವಳಿ ಆರಂಭಿಸಿ ಅಭಿವೃದ್ಧಿಗೆ ನಾಂದಿ ಹಾಡಿದವರು ಡಾ.ಯು.ಪಿ.ಶಿವಾನಂದ್. ನಂತರ ಅಭಿವೃದ್ಧಿ ಪತ್ರಿಕೋದ್ಯಮ ಆರಂಭಿಸಿ, ಸುದ್ದಿಯ ಮೂಲಕ ಹಲವು ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.ಎಂ ಬಿ ಬಿ ಎಸ್ ಮಾಡಿದ ಶಿವಾನಂದ್ ರವರು ಆಸ್ಪತ್ರೆ ಮಾಡಿದಿದ್ದರೆ ಹಣ ಮಾಡಬಹುದಿತ್ತು. ಹಾಗೇ ಮಾಡದೇ ಅಭಿವೃದ್ಧಿ ಪತ್ರಿಕೋದ್ಯಮವನ್ನು ಮಾಡಿದರು. ಸುಳ್ಯದಿಂದ ಪುತ್ತೂರು, ಬೆಳ್ತಂಗಡಿ ತಾಲೂಕಿಗೆ ಸುದ್ದಿ ಪತ್ರಿಕೆಯನ್ನು ವಿಸ್ತರಿಸಿದ್ರು. ಈ ಮೂರು ತಾಲೂಕುಗಳಲ್ಲಿ ಓದಬಲ್ಲವರು ಯಾರೂ ಕೂಡ ಸುದ್ದಿ ಪತ್ರಿಕೆಯನ್ನು ಓದದವರು ಇಲ್ಲ. ಅಭಿವೃದ್ಧಿ ಮತ್ತು ಪ್ರಾದೇಶಿಕ ಪತ್ರಿಕೋದ್ಯಮಕ್ಕೆ ಮಾದರಿಯನ್ನು ಹಾಕಿಕೊಟ್ಟವರು ಡಾ.ಯು.ಪಿ ಶಿವಾನಂದ್. ದೆಹಲಿಯಲ್ಲಿರುವ ನಾವು ಪ್ರತಿದಿನ ಮೊದಲು ಆನ್ ಲೈನ್ ನಲ್ಲಿ ಸುದ್ದಿ ಓದುತ್ತೇವೆ. ಸುಳ್ಯದಲ್ಲಿ ಹರೀಶ್ ಬಂಟ್ವಾಳ್, ದುರ್ಗಾಕುಮಾರ್ ರಂತಹ ವರದಿಗಾರರು ಯು ಪಿ ಶಿವಾನಂದರ ಜೊತೆಗೆ ಕಳೆದ ಮೂವತ್ತು ವರ್ಷಗಳಿಂದ ಇದ್ದಾರೆ. ಆ ವರದಿಗಾರರು ಇವರ ಪ್ರಾಮಾಣಿಕತೆಯನ್ನು ನೋಡಿ ಜೊತೆಗಿದ್ದಾರೆ. ಈಗ ಭ್ರಷ್ಚಾಚಾರ ಮುಕ್ತ ಆಂದೋಲನವನ್ನು ಮಾಡುತ್ತಿದ್ದಾರೆ.ಇದು ದೊಡ್ಡ ಸವಾಲು,ಯಾಕಂದ್ರೆ ಈಗ ಶೇಕಡಾ 40 ಕಮಿಷನ್ ಬಹುದೊಡ್ಡ ಸುದ್ದಿಯಾಗಿದೆ. ಗ್ರಾಮೀಣ ಪ್ರದೇಶದವರ ಶೈಕ್ಷಣಿಕ,ಸಾಮಾಜಿಕ,ಆರ್ಥಿಕ ಬೆಳವಣಿಗೆಗೆ ಸುದ್ದಿ ಸಾಥ್ ಕೊಡುತ್ತಿದೆ.ನಾವು ರಾಜಧಾನಿಯಲ್ಲಿರುವವರು ಅಂತಹ ಅವಕಾಶಗಳನ್ನು ಶಿವಾನಂದರಿಗೆ ತಿಳಿಸಬೇಕು. ಆಗ ಆ ಸುದ್ದಿಯನ್ನು ಅವರ ಪತ್ರಿಕೆಯಲ್ಲಿ ಪ್ರಕಟಿಸಿದ್ರೆ, ಆ ಜನರಿಗೆ ನೆರವಾಗುತ್ತದೆ. ಆ ಜನರಿಗೆ ಅಂತಹ ಅನುದಾನ ಇದ್ದರೆ, ಜನರಿಗೆ ಅದನ್ನು ತಲುಪಿಸುವುದಾದರೆ ಅದರಲ್ಲಿ ಯಾವುದೇ ದುಡ್ಡು ಪೋಲಾಗದಂತೆ ಶಿವಾನಂದರ ನೇತೃತ್ವದ ಸುದ್ದಿ ಮಾಹಿತಿ ಟ್ರಸ್ಟ್ ನೋಡಿಕೊಳ್ಳುತ್ತದೆ ಅನ್ನುವ ನಂಬಿಕೆ ನನಗಿದೆ. ದೆಹಲಿ ಮತ್ತು ಹಳ್ಳಿಯ ನಡುವೆ ಆರ್ಥಿಕ ಸಂಬಂಧವನ್ನು ಬೆಳೆಸಬೇಕು. ಸರ್ಕಾರದಲ್ಲಿ ಹಲವು ಅತ್ಯದ್ಭುತ ಯೋಜನೆಗಳಿವೆ. ದೆಹಲಿಯಲ್ಲಿರುವ ನಾವೆಲ್ಲರು ಸೇರಿ ಗ್ರಾಮೀಣಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯೋನ್ಮುಖರಾಗಬೇಕು. ಊರಿನಲ್ಲಿ ನಮ್ಮ ಪರವಾಗಿ ಸುದ್ದಿಯವರು ನಿಲ್ಲುತ್ತಾರೆ.

ಡಾ.ಪುರುಷೋತ್ತಮ ಬಿಳಿಮಲೆ,
ಜನಪದ ವಿದ್ವಾಂಸ,ಜೆಎನ್ ಯು ಕನ್ನಡ ಪೀಠದ ಮಾಜಿ ಮುಖ್ಯಸ್ಥ

ನಾವು ಕೆಲಸ ಮಾಡುವಾಗ ನಮ್ಮೂರು, ನಮ್ಮ ಹಳ್ಳಿಯ ಬಗ್ಗೆ ಯೋಚಿಸಬೇಕು


ದೆಹಲಿಯ ಕಾರ್ಯಕ್ರಮ ಗ್ರಾಮ ಸಭೆಯ ರೀತಿಯಲ್ಲಿರಬೇಕು.ನಾವು ರಾಜಧಾನಿಯಲ್ಲಿ ಒಟ್ಟುಗೂಡಿರುವ ಉzಶ ನಮ್ಮೂರಿನವರಿಗೆ ಒಳಿತಾಗಬೇಕು. ನಾವು ಅಧಿಕಾರಿಗಳಾಗಿ ದೆಹಲಿಯಲ್ಲಿ ಕೆಲಸ ಮಾಡುತ್ತಿzವೆ,ನಾವು ಯೋಜನೆ ರೂಪಿಸುವಾಗ ಹಳ್ಳಿಯ ಬಗ್ಗೆ ಯೋಚಿಸಿ ಮಾಡಬೇಕಿದೆ. ಉದ್ಯೋಗ ಖಾತ್ರಿ ಯೋಜನೆ ಈಗ ಬಹಳ ಯಶಸ್ಸು ಪಡೆದಿದೆ. ಈಗ ಹಳ್ಳಿಯವರು ಸರ್ಕಾರದ ಯೋಜನೆಯ ಮಾಹಿತಿ ಪಡೆದು ಗ್ರಾಮೀಣಾಭಿವೃದ್ಧಿಯ ಕೆಲಸ ಮಾಡಿಸಿಕೊಳ್ಳಬಹುದಾಗಿದೆ. ಅಧಿಕಾರಿಗಳಿಂದ ಮಾಹಿತಿ ಪಡೆಯುವುದು, ನಾವು ಮಾಹಿತಿ ಕೊಡುವುದು ಅಭಿವೃದ್ಧಿಗೆ ಬಹುಮುಖ್ಯವಾಗಿದೆ. ಡಾ.ಯು ಪಿ ಶಿವಾನಂದರ ಬಗ್ಗೆ ಕೇಳಿದಾಗ ನಮಗೆ ಸ್ಫೂರ್ತಿಯಾಗಿದೆ. ಅವರ ಪತ್ರಿಕೆ ನಮಗೆ ಪ್ರೇರಣೆ ನೀಡಿದೆ.ನಾವು ಸಣ್ಣ ಸಣ್ಣ ಸಹಾಯಹಸ್ತವನ್ನು ಚಾಚಿದ್ರೆ ನಮ್ಮೂರಿನ ಅಭಿವೃದ್ಧಿ ಸಾಧ್ಯ. ಮುಂದಿನ ದಿನಗಳಲ್ಲಿ ನಿರಂತರವಾಗಿ ಭೇಟಿಯಾಗುತ್ತಿರೋಣ.

ಡಾ. ಪ್ರಸನ್ನ ವಿ ಸಾಲ್ಯಾನ್, ನಿರ್ದೇಶಕರು, ಹಣಕಾಸು ಮಂತ್ರಾಲಯ, ಭಾರತ ಸರ್ಕಾರ

ಐಎಎಸ್, ಐಈಎಸ್ ಮಾತ್ರವಲ್ಲ, ಬೇರೆ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಬೇಕಿದೆ


ಇದೊಂದು ಅತ್ಯದ್ಭುತ ಕಾರ್ಯಕ್ರಮ. ನಾನು ಉಜಿರೆಗೆ ಭೇಟಿ ಕೊಟ್ಟಿದ್ದೆ. ಈಗ ಮಾಹಿತಿ ವೆಬ್ ಸೈಟ್ ನಲ್ಲಿ ಸಿಗುತ್ತದೆ. ಆದರೆ ಆ ಬಗ್ಗೆ ಯುವ ಸಮೂಹದಲ್ಲಿ ಅರಿವು ಹೆಚ್ಚಿಸಬೇಕು.ದೆಹಲಿ ನಮಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತವೆ.ದೆಹಲಿ ಕನ್ನಡ ಸಂಘ ನಮ್ಮೂರಿನ ಜನರಿಗೆ ದೆಹಲಿಯೊಂದಿಗಿನ ಒಡನಾಟವನ್ನು ಜನರಲ್ಲಿ ಹೆಚ್ಚಿಸಬಹುದು. ಸರ್ಕಾರದ ಕೆಲಸ ಅಂದ್ರೆ ಮಂಗಳೂರು ಉಡುಪಿಯಲ್ಲಿ ಐಎ ಎಸ್ ಮಾತ್ರ. ಅದಲ್ಲ ಬೇರೆ ಹಲವು ಉದ್ಯೋಗಗಳಿವೆ.ಎಸ್ ಎಸ್ ಎಲ್ ಸಿಯಲ್ಲಿ ಅತ್ಯುತ್ತಮ
ಮಾರ್ಕ್ಸ್ ಬಂದ್ರೆ ವಿಜ್ಞಾನ ತೆಗೆದುಕೊಳ್ಳುವುದು ಸಾಮಾನ್ಯವಾಗುತ್ತಿದೆ. ಆದರೆ ಹಾಗಾಗದೇ ನಮ್ಮ ಮಕ್ಕಳ ಆಸಕ್ತಿಯ ಅದ್ಯಯನ ಮಾಡಲು ಅವಕಾಶ ನೀಡಬೇಕು. ಹತ್ತು ಹಲವು ಕೋರ್ಸ್ ಗಳಿವೆ ಅವುಗಳ ಬಗ್ಗೆ ಗ್ರಾಮೀಣ ಪ್ರದೇಶದವರಿಗೆ ಅರಿವೇ ಇಲ್ಲ. ನಾವು ದೊಡ್ಡದಾಗಿ ಯೋಚನೆ ಮಾಡಬೇಕಾಗಿದೆ. ರಾಜಧಾನಿಯಲ್ಲಿ ಕನ್ನಡಿಗರ ಇಂಡಸ್ಟ್ರೀ ಹೆಚ್ಚಬೇಕಾಗಿದೆ. ದೆಹಲಿಯಲ್ಲಿ ನಮ್ಮೂರಿನ ಸಂಸ್ಕೃತಿ ಸಾರುವ ಅಗತ್ಯವಿದೆ. ಕರ್ನಾಟಕದ ಶಾಲೆಯಲ್ಲಿ ಬಂದು ಮಾಹಿತಿ ಕೊಡಲು ನಾವು ಸಿದ್ಧರಿzವೆ. ಅದನ್ನು ಮಾಡೋಣ

ಶ್ವೇತಾ ರಾವ್ ಬಿ,ಉಪ ಕಾರ್ಯದರ್ಶಿ, ಭಾರತ ಸರ್ಕಾರ

ಪಿಯುಸಿ ಆದ ನಂತರ ಡಾಕ್ಟರ್,ಇಂಜಿನಿಯರ್ ಕೋರ್ಸ್ ಮಾತ್ರವಲ್ಲ


ಬಿಎಸ್ಸಿ ಅಗ್ರಿಕಲ್ಚರ್ ಕೋರ್ಸ್ ಕರ್ನಾಟಕದ ಕೆಲವು ಜಿಲ್ಲೆಯಲ್ಲಿ ಮಾತ್ರ ಇದೆ. ಪಿಯುಸಿ ಆದ್ರೆ ಡಾಕ್ಟರ್ ಇಂಜಿನಿಯರ್ ಅಂತಾರೆ.ಸಿವಿಲ್ ಸರ್ವೀಸ್ ಎಕ್ಸಾಂಗೆ ಜನ ಬರುತ್ತಿದ್ದಾರೆ. ನಮ್ಮವರು ಬೇರೆ ಅವಕಾಶಗಳನ್ನು ಪಡೆಯಲು ನೋಡುತ್ತಾರೆ.

ಹರೀಶ್ ಕುಮಾರ್ ಕಲ್ಲೇಗ, ಉಪ ನಿರ್ದೇಶಕ, ಹಣಕಾಸು ಮಂತ್ರಾಲಯ,ಭಾರತ ಸರ್ಕಾರ

 

 

 

 

 

ಉದ್ಯೋಗ ಮಿತ್ರದ ಮೂಲಕ ಜನರೊಂದಿಗೆ ಸಂಪರ್ಕದಲ್ಲಿದ್ದೇವೆ


ಕರ್ನಾಟಕ ಸರ್ಕಾರದಿಂದ ಕೈಗಾರಿಕೋದ್ಯಮಿಗಳಿಗೆ ಉತ್ತೇಜನ ಕೊಡಲು ಯೋಜನೆಗಳಿವೆ. ತಾಲೂಕುಗಳಲ್ಲಿರುವವರು ಜಿಲ್ಲಾ ಘಟಕವನ್ನು ಸಂಪರ್ಕಿಸಬಹುದು. ರಾಜಧಾನಿಯಲ್ಲಿ ಕೇಂದ್ರದ ಯೋಜನೆ ಯಾಕೆ ಬಾಕಿಯಾಗಿದೆ ಅಂತ ತಿಳಿಸಿ, ರಾಜ್ಯ ಸರ್ಕಾರ ಅದಕ್ಕೆ ಬೇಕಾದ ದಾಖಲೆ ಪತ್ರವನ್ನು ಸಿದ್ಧಪಡಿಸುವಂತೆ ಮಾಡಲು ನಾವು ನೆರವಾಗುತ್ತೇವೆ. ಯಾರಿಗೆ ಯಾವ ರೀತಿಯ ಮಾಹಿತಿ, ಸಲಹೆ ಸೂಚನೆ,ಸಹಾಯ ಬೇಕಾದರೆ ನಮ್ಮನ್ನು ಸಂಪರ್ಕಿಸಬಹುದು.ಉದ್ಯೋಗ ಮಿತ್ರ ಕರ್ನಾಟಕ ಮತ್ತು ದೆಹಲಿಯ ನಡುವಿನ ಸಂಪರ್ಕಕೊಂಡಿಯಾಗಿದೆ.

ಎಸ್.ಜಿ. ಸರಸ್ವತಿ, ನಿವಾಸಿ ನಿರ್ದೇಶಕಿ, ಕರ್ನಾಟಕ ಸರ್ಕಾರದ ಉದ್ಯೋಗ ಮಿತ್ರ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

 

ನಾವು ಯಾರನ್ನು ಸಂಪರ್ಕಿಸಬೇಕು ಅನ್ನುವುದರ ಮಾಹಿತಿ ನೀಡಬೇಕು


ಪುತ್ತೂರು,ಉಡುಪಿ,ಬೆಳ್ತಂಗಡಿ,ಸುಳ್ಯದ ಸಮಸ್ಯೆಯನ್ನು ಪರಿಹರಿಸಲು ಯಾರನ್ನು ಸಂಪರ್ಕಿಸಬೇಕು ಅನ್ನುವುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಆಗ ನಾವು ನಮ್ಮೂರಿನವರಿಗೆ ನೆರವಾಗಬಹುದು. ಅದು ಗೊತ್ತಿಲ್ಲದೇ ಇದ್ದರೆ ದಲ್ಲಾಳಿಯನ್ನು ಸಂಪರ್ಕಿಸಬೇಕಾಗುತ್ತದೆ. ಅದಕ್ಕಾಗಿ ನಾವು ಸಂಪರ್ಕಿಸಬೇಕಾದ ವಿಳಾಸದ ಬಗ್ಗೆ ಮಾಹಿತಿ ಜನರಿಗೆ ಒದಗಿಸಿಕೊಡಬೇಕು. ಯಾವ ಸಚಿವಾಲಯದ ಯೋಜನೆಗಳು ಯಾವುವು, ಯಾವ ಸಚಿವರನ್ನು ಸಂಪರ್ಕಿಸುವುದು ಹೇಗೆ ಅನ್ನುವುದರ ಕುರಿತು ನಾವು ಕೆಲಸ ನಿರ್ವಹಿಸಬೇಕಾಗಿದೆ.

ಡಾ. ಶಶಿಕುಮಾರ್, ಕನ್ನಡ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ

 

 

ಡಾ.ಯು.ಪಿ. ಶಿವಾನಂದ್ ಈಗ ಸಮಾಜಕ್ಕೆ ಮದ್ದು ಕೊಡುತ್ತಿದ್ದಾರೆ


ಸುದ್ದಿ ಸಮೂಹ ಸಂಸ್ಥೆಗಳು, ಸುದ್ದಿ ಮಾಹಿತಿ ಟ್ರಸ್ಟ್ ನ ಮೂಲಕ ಅದರ ಅಧ್ಯಕ್ಷರಾದ ಡಾ. ಯು ಪಿ ಶಿವಾನಂದ್ ಈಗ ಸಮಾಜಕ್ಕೆ ಮದ್ದು ಕೊಡುತ್ತಿದ್ದಾರೆ. ಸಮಾಜದಲ್ಲಿ ಬೀಡುಬಿಟ್ಟಿರುವ ಭ್ರಷ್ಟಾಚಾರ ಎಂಬ ಖಾಯಿಲೆಯನ್ನು ಹೊಡೆದಟ್ಟಲು ಪ್ರಯತ್ನಿಸುತ್ತಿದ್ದಾರೆ. ಆಂದೋಲನ, ಜನಜಾಗೃತಿಯ ಮೂಲಕ ಜನರ ಏಳಿಗೆಗೆ ಶ್ರಮಿಸುತ್ತಿದ್ದಾರೆ.

ಡಾ.ಅವನೀಂದ್ರ ನಾಥ್ ರಾವ್,
ಕೇಂದ್ರ ಸಂಸ್ಕೃತಿ ಇಲಾಖೆಯ ಗ್ರಂಥಾಲಯ ಮತ್ತು ವಾರ್ತಾಧಿಕಾರಿ

 

 

 

 

ಮೋದಿ-ರಾಹುಲ್ ವಿರುದ್ಧ ಚುನಾವಣೆಗೆ ನಿಂತಿದ್ದು ಕೂಡ ಅಭಿವೃದ್ಧಿಗಾಗಿ
ಗ್ರಾಮಸ್ಥರು ಬಯಸುವ ಅಭಿವೃದ್ಧಿ ಕೆಲಸಕ್ಕೆ ಕೈ ಜೋಡಿಸೋಣ


ಇವತ್ತು ದೆಹಲಿಯಲ್ಲಿ ಸೇರಿರುವರೆಲ್ಲರೂ ಸೇರಿ ನನ್ನ ಸಾಧನೆಯನ್ನು ಕೊಂಡಾಡಿದ್ದೀರಿ. ಇವತ್ತು ನನ್ನ ತಂದೆ-ತಾಯಿಯವರು ಇದ್ದರೆ ಖುಷಿ ಪಡುತ್ತಿದ್ದರು. ಸಮಾಜದ ಏಳಿಗೆಗಾಗಿ, ಸಮಾಜಮುಖಿ ಕೆಲಸವನ್ನು ಮಾಡುವುದಕ್ಕಾಗಿ ನಾನು ಪತ್ರಿಕೆಯಿಂದ ಹೊರಬಂದು ಕೆಲಸ ಮಾಡುತ್ತೇನೆ. ಆದರೆ ನಾನು ಈ ಕೆಲಸ ಮಾಡಲು ನನಗೆ ಅರ್ಹತೆಯನ್ನು ಸುದ್ದಿ ಪತ್ರಿಕೆ ಕೊಟ್ಟಿದೆ. ನಾವು ದುಃಖ,ಸಂತೋಷಗಳಲ್ಲಿ ಜನರೊಂದಿಗೆ ಸಮುದಾಯದ ಸುದ್ದಿಯಾಗಿzವೆ.ನಾನು ಪತ್ರಿಕೆ ಆರಂಭಿಸಲು ಭ್ರಷ್ಟಾಚಾರದ ವಿರುದ್ಧದ ಹೋರಾಟವೇ ಕಾರಣವಾಯಿತು.ನಾನು ಗಾಂಧಿವಾದ, ಗ್ರಾಮಸ್ವರಾಜ್ಯವನ್ನು ನಂಬಿದವನು,ನಾನು ಹಳ್ಳಿಯಿಂದ ದೆಹಲಿಗೆ ಅನ್ನುವ ಮಾತಿನಲ್ಲಿ ನಂಬಿಕೆಯಿಟ್ಟವನು. ನಾನು ಮೂರು ವರ್ಷ ಮೊದಲು ವಾರಣಾಸಿ,ಅಮೇಥಿಯಲ್ಲಿ ಮೋದಿ,ರಾಹುಲ್ ಗಾಂಧಿಯವರ ವಿರುದ್ಧ ಚುನಾವಣೆಗೆ ನಿಂತಿದ್ದೆ, ಅದಕ್ಕೆ ಕಾರಣ, ನನ್ನಲ್ಲಿರುವ ಚಿಂತನೆಯನ್ನು, ನನ್ನ ಅಭಿಪ್ರಾಯವನ್ನು ಮೋದಿ ಮತ್ತು ರಾಹುಲ್ ಅವರಿಗೆ ತಲುಪಿಸುವ ಪ್ರಯತ್ನ ಮಾಡಿದೆ. ನಾನು ಯಾರ ವಿರುದ್ಧವೂ ನಿಂತದ್ದಲ್ಲ,ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಸೇರುವ, ರಾಜಕೀಯ ಮಾಡುವ ಉzಶವೂ ನನಗಿಲ್ಲ. ನಮ್ಮೂರಿನಿಂದ ಅಭಿವೃದ್ಧಿಯ ಚಿಂತನೆ ಮಾಡಬೇಕು. ನಾವು ಅಭಿವೃದ್ದಿಯ ಸ್ಪಂಧನೆ ದೆಹಲಿಯಿಂದ ಆರಂಭಿಸಿರುವ ಉzಶ, ಇಲ್ಲಿರುವ ಉದ್ಯಮಿಗಳು, ಉದ್ಯೋಗದಲ್ಲಿರುವವರು, ತಮ್ಮೂರಿನ ಅಭಿವೃದ್ದಿಗೆ ನೆರವಾಗುವವರನ್ನು ಸೇರಿಸಿ, ಅಭಿವೃದ್ಧಿ ಕಾರ್ಯಕ್ಕೆ ಮುಂದಾಗೋಣ. ನಮ್ಮ ಬಲಾತ್ಕಾರದ ಬಂದ್, ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಜನರಿಂದ ಉತ್ತಮ ಬೆಂಬಲ ಸಿಕ್ಕಿದೆ. ಮೂರೂ ತಾಲೂಕುಗಳಲ್ಲಿ ಭ್ರಷ್ಟಾಚಾರ ಮುಕ್ತ ಗ್ರಾಮ ಘೋಷಣೆಯಾಗುತ್ತಿದೆ. ಲಂಚವನ್ನು ಪಡೆಯುವುದಿಲ್ಲ ಅನ್ನುವ ಅಧಿಕಾರಿಗಳ ಫೋಟೋ ಪ್ರಕಟಿಸಿzವೆ. ಹಲವು ಗ್ರಾಮ ಪಂಚಾಯತ್ ಸದಸ್ಯರು ಯಾವುದೇ ಅಧಿಕಾರಿ ಲಂಚ ಪಡೆದರೇ ಅದನ್ನು ವಾಪಾಸ್ ತೆಗೆಸಿಕೊಡುವ ಸಂಕಲ್ಪ ಮಾಡಿದ್ದಾರೆ. ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳು ಲಂಚ ಭ್ರಷ್ಟಾಚಾರ ಮುಕ್ತವಾಗಲಿದೆ. ಅದು ಜಿಲ್ಲೆಗೆ ಮತ್ತು ರಾಜ್ಯಕ್ಕೆ, ದೇಶಕ್ಕೆ ವಿಸ್ತರಿಸಬೇಕಾಗಿದೆ. ಅದರೊಂದಿಗೆ ನಮ್ಮ ಆಂದೋಲನ ಗ್ರಾಮಸ್ಥರು ಸೇರಿ, ಗ್ರಾಮಸ್ಥರು ಕೇಳುವ ಅಭಿವೃದ್ಧಿ ಕಾರ್ಯವಾಗಬೇಕು ಅನ್ನುವುದು ನನ್ನ ಭಾವನೆ.

ಡಾ.ಯು.ಪಿ.ಶಿವಾನಂದ್,ಅಧ್ಯಕ್ಷರು, ಸುದ್ದಿ ಮಾಹಿತಿ ಟ್ರಸ್ಟ್ ಪುತ್ತೂರು

ಸುದ್ದಿ ಸಮೂಹ ಸಂಸ್ಥೆಗಳ ಪರವಾಗಿ ಸುದ್ದಿ ಚಾನೆಲ್‌ನ ಮುಖ್ಯಸ್ಥ ದಾಮೋಧರ ದೊಂಡೋಲೆ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು. ದೆಹಲಿ ಕನ್ನಡ ಸೀನಿಯರ್ ಸೆಕೆಂಡರಿ ಸ್ಕೂಲ್‌ನ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಕಾರ್ಯಕ್ರಮದ ವ್ಯವಸ್ಥೆಗಳನ್ನು ಏರ್ಪಡಿಸಿದ್ದರು. ದೆಹಲಿ ಕರ್ನಾಟಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಪೂಜಾ ಪ್ರದೀಪ್ ನಿರೂಪಣೆಗೈದರು ದೆಹಲಿಯ ಪತ್ರಕರ್ತ ರಾಘವ ಶರ್ಮಾ ವಂದನಾರ್ಪಣೆಗೈದರು.

ಪ್ರಶಾಂತ್ ಕುಮಾರ್, ಗ್ರೀಷ್ಮಾ ಶೆಟ್ಟಿ, ಮಿಥುನ ಸಿ.ಆರ್., ಪ್ರಕಾಶ್ ನಾಯಕ್, ಗಣೇಶ್ ರಾವ್, ವೈ.ಮಲ್ಲಿಕಾರ್ಜುನ ನಾಕ್, ಮನೋಜ್ ಎಂ.ಕೆ, ವಿಶ್ವನಾಥ ಮಾಲಗಾಂವಿ, ಉದಯ್ ಹೆಮ್ಮಟಿ, ಕೆ.ಮುಡೂಪ, ಕೆ.ಆರ್.ರಾಮಮೂರ್ತಿ, ಬಿ.ಪ್ರದೀಪ್, ಸರಸ್ವತಿ ಕೊತಾರಿ, ವೀಣಾ ಕೊಟಾರಿ, ಅಭಿಷೇಕ್ ಉಬಲೆ, ಎನ್.ಪೂರ್ಣಿಮ, ಪಿ.ರಂಗನಾಥ ರಾವ್, ಭವ್ಯ ರಾವ್, ಶ್ರೀಹರಿ.ಕೆ, ಚಂದ್ರಶೇಖರ್.ಕೆ, ಮಹೇಶ್ ರೈ, ಸುಶ್ಮಿತಾ ಸುವರ್ಣ, ಸನ್ವಿತ್ ಸುವರ್ಣ, ಗೀತಾ ಸುವರ್ಣ, ಮೊಲಿನ್ ಡಿ’ಸಿಲ್ವಾ, ಜಾಸ್ಮಿನ್ ಡಿ’ಮೆಲ್ಲೊ, ಗಾಡ್‌ಫ್ರೆ ಫ್ರಾಂಕ್, ಅನಿಲ್, ವಿನ್ಸೆಂಟ್ ಕ್ರಾಸ್ಟಾ, ಫಯಾರh ಮೊಂತೆರೋ, ಶೀಲಾ ಡಿ’ಸೋಜಾ, ರಿವ ಮೊಂತೆರೋ, ಪದ್ಮನಾಭ ಗೌಡ, ಜಿ.ಕೆ.ಭಟ್, ಐ.ಎಸ್.ಎನ್.ಭಟ್, ರವಿ, ಅನುಮಪ ಸಾಲ್ಯಾನ್, ಕೆ.ಶ್ರೀನಿವಾಸ, ಜಗನ್ನಾಥ, ಸುಮನ್ ಹೈಕ್ವಾಡ್, ರಾಜು ಎಸ್.ಜಿ, ರಾಧಾಕೃಷ್ಣ, ಪ್ರಸಾದ್ ಶೆಟ್ಟಿ, ಕಿರಣ್ ತಮರ‍್ಕಾರ್, ಪವಿತ್ರ ತಮರ‍್ಕಾರ್, ಅಂಬಿಕಾ ಇಡೂರು, ಪ್ರಸಾದ್ ನಾಕ್ ಕೆ., ಕೆ.ಎಸ್.ಮೂರ್ತಿ, ಟಿ.ಪಿ.ಬೆಳಿಯಪ್ಪ, ಮಾಲಿನಿ ಪ್ರಹ್ಲಾದ್, ಪೂಜಾ ರಾವ್, ಚಂದ್ರಶೇಖರ್ ಶೆಟ್ಟಿ, ರೊನಾಲ್ಡ್ ಡಿ.ಸೋಜಾ, ಸರೋಜ ಮಾಧವ, ಪಿ.ಎಸ್.ಶೆಟ್ಟಿ, ಎನ್.ಎ.ಮಾಧವ, ಕೆ.ಎಮ್ ಅನರ್ಘ್ಯ, ಡಾ| ನಿಸರ್ಗ್ ಎಸ್.ಕುಂಬಾರ, ರತನ್ ಚೌಟ, ಸುಜಾತ ಎಸ್, ಮಿತೇಶ್ ಕೆ.ಶೆಟ್ಟಿ, ಸಂತೋಷ್ ಶೆಟ್ಟಿ, ರೀನಾ ಕುರ್ಮೋಳಿ, ಪುಷ್ಪಾ.ಆರ್. ಮಬಿಜು, ನಯನ ಭಟ್, ಪಿ.ಸುಧಾಕರ್ ನಾಯಕ್, ಪಿ.ಸುರೇಶ್ ಅಚಾರ್ಯ, ಸವಿತಾ ನೆಲ್ಲಿ, ರುಕ್ಮಿಣಿ ಹಂಡೆ, ಕೃಷ್ಣಾ ರಾಜ್, ವಿಖ್ಯಾತ್.ಸಿ.ಶೆಟ್ಟಿ, ಲೀನಾ ಮಿಸ್ಕಿಟ್, ಎನ್, ಎಮ್. ಸೌಮ್ಯ, ಎನ್.ಎಮ್. ಸನ್ಮಾನ್, ಸಿರೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here