ನಾವು ಸೃಷ್ಟಿಸಿದ ಅನಾಹುತವನ್ನು ನಾವೆ ಸರಿಪಡಿಸುವ ಕೆಲಸ ಮಾಡಬೇಕಾಗಿದೆ : ಬಿತ್ತೋತ್ಸವ -2022 ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ಪ್ರಕೃತಿಯಲ್ಲಿ ನಾವು ಸೃಷ್ಟಿಸಿದ ಅನಾಹುತದಿಂದ ಉಂಟಾಗುವ ಪ್ರಾಕೃತಿಕ ವಿಕೋಪಕವನ್ನು ತಡೆಯಲು ನಾವೆ ಸರಿಪಡಿಸುವ ಕೆಲಸ ಪ್ರಕೃತಿಯಲ್ಲಿ ಮಾಡಬೇಕಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

’ತಿರುಗುವೊಂದೆ ಭೂಮಿ ಉಳಿಸೋಣ ಬನ್ನಿ ಅನ್ನುವ’ ವಿಶೇಷ ಘೋಷ ವಾಕ್ಯದೊಂದಿಗೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪುತ್ತೂರು, ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ ಹಾಗೂ ಪುತ್ತೂರು ಉಪವಿಭಾಗ, ಪುತ್ತೂರು ವಲಯ ಜಂಟಿ ಆಶ್ರಯದಲ್ಲಿ ಬೊಳುವಾರಿನಲ್ಲಿ ’ಬಿತ್ತೋತ್ಸವ -2022’ ಹಾಗೂ ಬೀಜದ ಉಂಡೆ ವಿತರಣಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಭೂಮಿಗೆ ಅಪಾಯ ತಂದಾಗ ಭೂಮಿ ಒಂದಷ್ಟು ಪ್ರಾಕೃತಿ ವಿಕೋಪ ಮೂಲಕ ತನ್ನ ನೋವನ್ನು ತಿಳಿಸಿದೆ. ಆಗ ಮನುಷ್ಯರಾದ ನಾವು ಎಚ್ಚೆತ್ತು ವನಮಹೋತ್ಸವ, ಬಿತ್ತೋತ್ಸವ ಮಾಡುವ ಸಂಗತಿಗೆ ನಾವು ಬಂದಿದ್ದೇವೆ. ಹಾಗಾಗಿ ನಾವು ಸೃಷ್ಟಿಸಿದ ಅನಾಹುತವನ್ನು ಮತ್ತೆ ನಾವೇ ಸರಿಪಡಿಸುವ ಕೆಲಸ ಪ್ರಕೃತಿಯಲ್ಲಿ ಮಾಡಬೇಕಾಗಿದೆ ಎಂದ ಅವರು ಇತಿಹಾಸ ನೋಡಿದಾಗ ಪೃಕತಿಯನ್ನು ಉಳಿಸಿದವರು ರೈತ, ಆದಿವಾಸಿಗಳು ಇದರ ಜೊತೆಗೆ ಆತನಿಗೆ ಪ್ರಾಣಿ ಶಾಸ್ತ್ರ, ಸಸ್ಯ ಶಾಸ್ತ್ರ ಪರಿಣಿತ. ಪ್ರಕೃತಿಯನ್ನು ಹೆಚ್ಚಾಗಿ ತಿಳಿದು ಕೊಂಡವ ರೈತ ಅವನಿಂದಾಗಿ ನಾವು ಪೇಟೆಯಲ್ಲಿ ಸುಖಿಯಾಗಿದ್ದೇವೆ ಎಂದು ತಿಳಿದು ಕೊಳ್ಳಬೇಕೆಂದರು. ಸ್ಥಳೀಯ ಸಂಸ್ಥೆ ಪುತ್ತೂರು ಇದರ ಕಾರ್ಯಾಧ್ಯಕ್ಷ ಶ್ರೀಧರ್ ರೈ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಶಾಲಾ ಮಕ್ಕಳಿಗೆ ಬೀಜ ತರುವ ಸ್ಪರ್ಧೆ:

ಮಂಗಳೂರು ಉಪವಲಯ ಅರಣ್ಯಸಂರಕ್ಷಣಾಧಿಕಾರಿ ಡಾ. ವೈ.ಕೆ ದಿನೇಶ್ ಕುಮಾರ್ ಅವರು ಮಾತನಾಡಿ ಜೂನ್ ತಿಂಗಳು ನಮಗೆ ಹೊಸ ವರ್ಷದ ಶುಭಾರಂಭವಾದ್ದಂತೆ. ಅಲ್ಲಲ್ಲಿ ಗಿಡ ನಡೆವುದು ನಮ್ಮ ಕೆಲಸ. ಈ ಭಾರಿ ಸರಕಾರ ಮೊಟ್ಟ ಮೊದಲಿಗೆ ಬೀಜೋತ್ಸವ ಕಾರ್ಯಕ್ರಮ ನಡೆಸಿದ್ದು, ಮುಂದಿನ ೧೫ ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಶಾಲಾ ಮಕ್ಕಳಿಗೆ ಹಣ್ಣಿನ ಗಿಡಗಳನ್ನು ಯಾಕೆ ಹೇಗೆ ಬೆಳೆಯಬೇಕೆಂಬ ಮನವರಿಕೆ ಶಿಬಿರ ನಡೆಸಲಾಗುವುದು. ಶಾಲಾ ಮಕ್ಕಳಿಗೆ ಹಣ್ಣಿನ ಬೀಜ ಸಂಗ್ರಹ ಮಾಡುವ ನಿಟ್ಟಿನಲ್ಲಿ ಸ್ಪರ್ಧೆ ಏರ್ಪಡಿಸಲಾಗುವುದು. ಅವರಲ್ಲಿ ಸಂಗ್ರಹವಾದ ಬೀಜಗಳನ್ನು ಅವರೊಂದಿಗೆ ಹತ್ತಿರದ ಕಾಡಿನಲ್ಲಿ ಹೋಗಿ ಬಿತ್ತುವ ಕಾರ್ಯಕ್ರಮ ನಡೆಸಲಾಗುವುದು ಎಂದರು.

ವಿನೂತನ ಕಾರ್ಯಕ್ರಮ ಮಕ್ಕಳಲ್ಲಿ ಜಾಗೃತಿ ಮೂಡಲಿದೆ:

ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ ಅವರು ಮಾತನಾಡಿ ಅರಣ್ಯ ಇಲಾಖೆ, ಹಾಗೂ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ವಿನೂತನ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂದಿದೆ ನಿಮ್ಮ ಸೇವಾ ಕಾರ್ಯ ಹೀಗೆ ಮುಂದುವರಿಯಲಿ ಎಂದರು. ವೇದಿಯಲ್ಲಿಪುತ್ತೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ವಿ. ಪಿ. ಕಾರ್ಯಪ್ಪ, ಸ್ಥಳೀಯ ನಗರ ಸಭಾ ಸದಸ್ಯ ಸಂತೋಷ್ ಬೊಳುವಾರು, ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ, ಸ್ಥಳೀಯ ಸಂಸ್ಥೆ ಪುತ್ತೂರು ಇದರ ಕಾರ್ಯದರ್ಶಿ ಹಾಗೂ ನಗರ ಸಭಾ ಉಪಾಧ್ಯಕ್ಷೆಯಾಗಿರುವ ವಿದ್ಯಾ ಆರ್ ಗೌರಿ ಉಪಸ್ಥಿತರಿದ್ದರು. ಪುತ್ತೂರು ವಲಯ ಅರಣ್ಯಧಿಕಾರಿ ಕಿರಣ್. ಬಿ.ಎಂ. ಸ್ವಾಗತಿಸಿ, ಗೈಡ್ಸ್ ಪರಮೋಚ್ಚ ಐ. ಖಿ ಪದವೀಧರ ಶ್ರೀಮತಿ ಸುನೀತಾ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here