ಜೂ. 25: ನಿವೃತ್ತ ದೈ.ಶಿ.ಶಿಕ್ಷಕ ದಯಾನಂದ ರೈ ಕೋರ್ಮಂಡರವರಿಗೆ ಬೆಟ್ಟಂಪಾಡಿಯಲ್ಲಿ ನಾಗರಿಕ ಸನ್ಮಾನ

0

ಬೆಟ್ಟಂಪಾಡಿ: ಮೇ 31 ರಂದು ವೃತ್ತಿಯಿಂದ ನಿವೃತ್ತರಾಗಿ ವಿಶ್ರಾಂತ ಜೀವನಕ್ಕೆ ಕಾಲಿಟ್ಟ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ರಾಜ್ಯಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡರವರ ವೃತ್ತಿ ಬದುಕಿನ ಸಾಧನೆ, ಸಮಾಜಪರ ಸೇವಾ ಚಟುವಟಿಕೆಗಳನ್ನು ಗುರುತಿಸಿ ನಾಗರಿಕ ಸನ್ಮಾನ ಸಮಾರಂಭವನ್ನು ಜೂ. 25 ರಂದು ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ. ಸಹಕಾರಿ ಸಂಘದ ಆವರಣದಲ್ಲಿ ನಡೆಸುವುದೆಂದು  ನಾಗರಿಕ ಸನ್ಮಾನ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಾಗರಿಕ‌ ಸನ್ಮಾನ ಸಮಿತಿ ರಚನೆ ಮತ್ತು ಪೂರ್ವಭಾವಿ ಸಮಾಲೋಚನಾ ಸಭೆ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರ ನೇತೃತ್ವದಲ್ಲಿ ಜೂ. 5 ರಂದು ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ದಯಾನಂದ ರೈಯವರು ನಾಗರಿಕ ಸನ್ಮಾನಕ್ಕೆ  ಅರ್ಹ ವ್ಯಕ್ತಿ – ಶಶಿಕುಮಾರ್ ರೈ
ಇದೇ ವೇಳೆ ಮಾತನಾಡಿದ ನಾಗರಿಕ ಸನ್ಮಾನ ಸಮಿತಿಯ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ‘ದಯಾನಂದ ರೈಯವರು ಊರಿನಲ್ಲಿ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಹೊಂದಾಣಿಕೆಯ ಬಾಳ್ವೆ ನಡೆಸಿದವರು. ತಾವು ಸೇವೆ ಸಲ್ಲಿಸಿದ ಸಂಸ್ಥೆಗೆ, ಊರಿಗೆ ನಾವೆಲ್ಲಾ ಹೆಮ್ಮೆ ಪಡುವ ರೀತಿಯಲ್ಲಿ ತನ್ನ ಸೇವಾ ಕಾರ್ಯ ಮತ್ತು ವೃತ್ತಿ ಕಾರ್ಯವನ್ನು ಮಾಡಿದವರು. ರಾಷ್ಟ್ರ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಸನ್ಮಾನಕ್ಕೆ ಭಾಜನರಾದವರು ನಾಗರಿಕ ಸನ್ಮಾನಕ್ಕೆ ಒಳಪಡುವ ರೀತಿಯಲ್ಲಿ ದಯಾನಂದ ರೈಯವರು ರಾಜ್ಯಪ್ರಶಸ್ತಿ ಪಡೆದ ಶಿಕ್ಷಕರಾಗಿರುವುದು ಮಾತ್ರವಲ್ಲದೇ ಊರಿನ ಗೌರವ ಕೀರ್ತಿಯನ್ನು ಹೆಚ್ಚಿಸಿದವರು. ನಾಗರಿಕ ಸನ್ಮಾನಕ್ಕೆ ಎಲ್ಲಾ ರೀತಿಯಿಂದಲೂ ಅವರು ಅರ್ಹರೆಂಬ ಭಾವನೆಯಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಇದಕ್ಕೆ ಅವರ ಅಭಿಮಾನಿಗಳು, ಸಹೃದಯ ಊರವರು ಎಲ್ಲಾ ರೀತಿಯಲ್ಲೂ ಕೈಜೋಡಿಸಬೇಕು’ ಎಂದರು. 
ನಿವೃತ್ತ ದೈ.ಶಿ.ಶಿಕ್ಷಕ ಎನ್. ಸಂಜೀವ ರೈ ನುಳಿಯಾಲು, ನಿವೃತ್ತ ಚಿತ್ರಕಲಾ ಶಿಕ್ಷಕ ಐ. ಗೋಪಾಲಕೃಷ್ಣ ರಾವ್, ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಕೆ.ಎಸ್. ರಂಗನಾಥ ರೈ ಗುತ್ತು, ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಸಲಹೆ ಸೂಚನೆ ನೀಡಿದರು. 
ದೇವಿಪ್ರಸಾದ್ ಬೈಲಾಡಿ, ಅರುಣ್ ಪ್ರಕಾಶ್ ರೈ ಮದಕ, ಜಗನ್ನಾಥ ರೈ ಕೊಮ್ಮಂಡ, ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ. ರಾಮಯ್ಯ ರೈ, ಹಮೀದ್ ಕೊಮ್ಮೆಮಾರ್, ಕೃಷ್ಣಪ್ರಸಾದ್ ಆಳ್ವ, ದಿನೇಶ್ ರೈ, ಆಸೀಫ್ ತಂಬುತ್ತಡ್ಕ, ಪ್ರಶಾಂತ್ ಕುಮಾರ್ ರೈ, ಮಂಜುನಾಥ ಎನ್.ಎಸ್., ಶಿವಪ್ರಸಾದ್ ತಲೆಪ್ಪಾಡಿ, ಸಂದೀಪ್ ರೈ ಬಾಜುವಳ್ಳಿ, ಶ್ರೀಹರಿ ಪಾಣಾಜೆ, ಶ್ರೀಪ್ರಸಾದ್ ಪಾಣಾಜೆ, ಶಬೀರ್ ರೆಂಜ,  ಮಹೇಶ್ ಕೆ., ಮಹಮ್ಮದ್ ಅಶ್ರಫ್ ಕೆ.ಎಚ್., ನವೀನ್ ತಲೆಪ್ಪಾಡಿ, ದೈ.ಶಿ.ಶಿಕ್ಷಕರಾದ ಸೀತಾರಾಮ ಗೌಡ ಮಿತ್ತಡ್ಕ, ಸುಧೀರ್ ರೈ ಪಾಣಾಜೆ, ಸುಧಾಕ ರೈ ಗಿಳಿಯಾಲು, ನವೀನ್ ಕುಮಾರ್ ರೈ ಕೆಲ್ಲಾಡಿ, ಮನೋಜ್ ರೈ ಸೂರಂಬೈಲು, ಸದಾಶಿವ ರೈ ಗುಮ್ಮಟೆಗದ್ದೆ, ನವೀನ್ ತಲೆಪ್ಪಾಡಿ, ಎನ್. ಸತ್ಯನಾರಾಯಣ ರೈ, ದಯಾನಂದ ರೈ ಬೆಟ್ಟಂಪಾಡಿ, ರಾಧಾಕೃಷ್ಣ ರೈ ಪಟ್ಟೆ, ಉಮೇಶ್ ಮಿತ್ತಡ್ಕ ಮತ್ತಿತರರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು.
ದೈ.ಶಿ.ಶಿಕ್ಷಕರಾದ ಕೃಷ್ಣಪ್ರಸಾದ್ ಬೆಟ್ಟಂಪಾಡಿ ಮತ್ತು ದಾಮೋದರ ಕಜೆ ಸಭೆ ನಿರ್ವಹಿಸಿದರು. 

ಪೂರ್ವಭಾವಿ ಸಭೆ –  ನಾಗರಿಕ ಸನ್ಮಾನ ಸಮಿತಿ ರಚನೆ; ಅಧ್ಯಕ್ಷ : ಶಶಿಕುಮಾರ್ ರೈ ಬಾಲ್ಯೊಟ್ಟು, ಕಾರ್ಯದರ್ಶಿ: ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಕೋಶಾಧಿಕಾರಿ: ಪ್ರಕಾಶ್ ರೈ ಬೈಲಾಡಿ

ಸಭೆಯಲ್ಲಿ ನಾಗರಿಕ ಸನ್ಮಾನ ಸಮಿತಿ ರಚಿಸಲಾಗಿ ಅಧ್ಯಕ್ಷರಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು, ಕಾರ್ಯದರ್ಶಿಯಾಗಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಕೋಶಾಧಿಕಾರಿಯಾಗಿ ಪ್ರಕಾಶ್ ರೈ ಬೈಲಾಡಿಯವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದವರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here