ಕೃಷ್ಣನಗರ ಹಿ.ಪ್ರಾ.ಶಾಲಾ ವಿದ್ಯಾರ್ಥಿ ಸಂಸತ್

0

ಪುತ್ತೂರು : ಕೆಮ್ಮಾಯಿ ಕೃಷ್ಣನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತಿಗೆ ಚುನಾವಣಾ ಪ್ರಕ್ರಿಯೆ ನಡೆಸಿ ಶಾಲಾ ನಾಯಕರು ಹಾಗೂ ಇತರರನ್ನು ಆಯ್ಕೆ ಮಾಡಲಾಯಿತು. ೮ನೇ ತರಗತಿಯ ಭಾವನಾ ಪಿ. ಶಾಲಾ ನಾಯಕಿಯಾಗಿ ಮತ್ತು ಏಳನೇ ತರಗತಿಯ ನಿತೀಶ ಎಸ್. ಉಪನಾಯಕನಾಗಿ ಆಯ್ಕೆಯಾದರು. ವಿದ್ಯಾರ್ಥಿಗಳನ್ನು ವಿವಿಧ ಮಂತ್ರಿಗಳಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು. ಶಾಲಾ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಸಂಘಗಳ ರಚನೆ ಮಾಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಮ್ಮ ಕಾರ್ಯಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಶಾಲಾ ಮುಖ್ಯಗುರು ಮರಿಯಮ್ಮ ಪಿ.ಎಸ್ ಮಾರ್ಗದರ್ಶನ ನೀಡಿದರು. ಶಿಕ್ಷಕಿ ನಾಗವೇಣಿ ಚುನಾವಣೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಪ್ರತಿಭಾ ಕೆ., ಶ್ರುತಿ ಯು. ಹಾಗೂ ಶೇಷಮ್ಮ ಎಮ್. ರವರು ಚುನಾವಣಾ ಪ್ರಕ್ರಿಯೆ ಹಾಗೂ ವಿವಿಧ ಸಂಘಗಳ ರಚನೆಗೆ ಸಹಕರಿಸಿದರು.

 

LEAVE A REPLY

Please enter your comment!
Please enter your name here