ಪುತ್ತೂರು : ಕರ್ನಾಟಕ ಹೋಮಿಯೋಪತಿ ಮಂಡಳಿ ಸದಸ್ಯರಾಗಿ ಪುತ್ತೂರಿನ ಡಾ. ಪ್ರವೀಣ್ ಕುಮಾರ್ ರೈ ಆಯ್ಕೆಯಾಗಿದ್ದಾರೆ. ಮಂಡಳಿ ಸದಸ್ಯರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಾ.ಪ್ರವೀಣ್ ಕುಮಾರ್ ರೈರವರು ಗೆಲುವು ಪಡೆದಿದ್ದಾರೆ.
ಕರ್ನಾಟಕ ಹೋಮಿಯೋಪಥಿ ಮಂಡಳಿಯಲ್ಲಿ ನೋಂದಾಯಿತ 10 ಸಾವಿರಕ್ಕೂ ಅಧಿಕ ಹೋಮಿಯೋಪತಿ ವೈದ್ಯರು ಮತ ಚಲಾಯಿಸಲು ಅವಕಾಶ ಇತ್ತು. ಚಲಾವಣೆಯಾದ 328 ಸಿಂಧು ಮತಗಳಲ್ಲಿ ಡಾ. ರೈಯವರು 2200ಗಳನ್ನು ಪಡೆಯುವ ಮೂಲಕ ಭಾರಿ ಅಂತರದಲ್ಲಿ ವಿಜಯ ಗಳಿಸಿದ್ದಾರೆ.
ಮಂಗಳೂರಿನ ಬೆಂದೂರ್ವೆಲ್ನಲ್ಲಿ ವೈದ್ಯ ವೃತ್ತಿ ನಡೆಸುತ್ತಿರುವ ಡಾ. ಪ್ರವೀಣ್ ಕುಮಾರ್ ರೈ ಯವರು ಭಾರತೀಯ ಹೋಮೀಯೊಪತಿ ವೈದ್ಯರ ಸಂಘ((IHMA) ಮಂಗಳೂರಿನ ನಿಕಟ ಪೂರ್ವ ಅಧ್ಯಕ್ಷರಾಗಿದ್ದು ಪ್ರಸ್ತುತ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪ್ರಗತಿಪರ ಕೃಷಿಕ, ಧಾರ್ಮಿಕ ಮುಖಂಡ ದಿ.ಸುಬ್ಬಣ್ಣ ರೈ ಪಾಂಬಾರು ಹಾಗೂ ಹೇಮಾವತಿ ಎಸ್. ರೈಯವರ ಕಿರಿಯ ಪುತ್ರ.