ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಬ್ ಬೇಸಿಗೆ ಶಿಬಿರ

0

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರಿನಲ್ಲಿ ಕಬ್ ಬೇಸಿಗೆ ಶಿಬಿರವು 30-5-2022 ರಂದು ಉದ್ಘಾಟನೆಗೊಂಡಿತು.

ಶಿಬಿರವನ್ನು ಉದ್ಘಾಟಿಸಿದ ಸಂಸ್ಥೆಯ ಗೈಡ್ ಕ್ಯಾಪ್ಟನ್ (HWB) ಶ್ರೀಮತಿ ಅನುರಾಧ,  ಕಬ್ಬಿಂಗ್ ನ ಆಶಯವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಂದ್ರಶೇಖರ್ ಹಿತನುಡಿಗಳನ್ನಾಡಿದರು.

ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ಕೆ, ಹಿರಿಯ ಸ್ಕೌಟ್ ಮಾಸ್ಟರ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಭಾಸ್ಕರ್ ಉಪಸ್ಥಿತರಿದ್ದರು. ಲೇಡಿ ಕಬ್ ಮಾಸ್ಟರ್ಸ್ ಗಳಾದ ಶ್ರೀಮತಿ ಪುಷ್ಪಲತಾ ಕೆ ವಂದಿಸಿದರು .ಹಾಗೂ ಕು| ರಮ್ಯರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸ್ಕೌಟ್ ಮಾಸ್ಟರ್ ಮಹೇಶ್ ವರ್ಮ ಸಹಕರಿಸಿದರು.

ಶಿಬಿರಾರ್ಥಿಗಳಿಗೆ ವಿವಿಧ ರೀತಿಯ ಕಬ್ ಚಟುವಟಿಕೆಗಳು, ಮನೋರಂಜನಾತ್ಮಕ ಆಟಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕರಕುಶಲ ವಸ್ತುಗಳ ತಯಾರಿಕೆ ಗಳನ್ನು ಹಮ್ಮಿಕೊಳ್ಳಲಾಗಿತ್ತು.


 

LEAVE A REPLY

Please enter your comment!
Please enter your name here