ಗ್ರೀಸ್ ಮಂಕಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳ ಸಾಧನೆ

0


ಪುತ್ತೂರು: ಮೇ.29ರಂದು ಮೈಸೂರಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ  ಆಟೋಮೋಬೈಲ್ ಇಂಡಸ್ಟ್ರಿಯವರು ಆಯೋಜಿಸಿದ ಒಂದು ಟಿಕ್ನಿಕಲ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಗ್ರೀಸ್ ಮಂಕಿ ಎಂಬ ವಿಷಯದಲ್ಲಿ  ಕರ್ನಾಟಕದ ವಿವಿಧ ಪಾಲಿಟೆಕ್ನಿಕ್‌ಗಳ ಸುಮಾರು 33 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಸ್ಪರ್ಧೆಯನ್ನು ಮೆಕ್ಯಾನಿಕಲ್ ಹಾಗೂ ಆಟೋಮೋಬೈಲ್ ವಿದ್ಯಾರ್ಥಿಗಳಿಗೆ ಮಾತ್ರ ಆಯೋಜಿಸಲಾಗಿತ್ತು. ಒಂದು ತಂಡದಲ್ಲಿ ಕೇವಲ 2 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿತ್ತು. ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್‌ನ 5 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇದರಲ್ಲಿ ದ್ವೀತಿಯ ಆಟೋಮೋಬೈಲ್ ವಿದ್ಯಾರ್ಥಿಗಳಾದ ಅಸ್ಮಿತ್ ಬಿ. ಹಾಗೂ ಶ್ರವಣ್ ಕುಮಾರ್ ದ್ವೀತಿಯ ರನ್ನರ್ ಅಫ್ ಸ್ಥಾನವನ್ನು ಗಳಿಸುವುದರೊಂದಿಗೆ ಟ್ರೋಫಿ ಹಾಗೂ ನಗದು ಬಹುಮಾನ ಪಡೆದುಕೊಂಡು ವಿವೇಕಾನಂದ ಪಾಲಿಟೆಕ್ನಿಕ್‌ನ ಹಿರಿಮೆಯನ್ನು ಎತ್ತರಕ್ಕೆ ಏರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್, ಆಟೋಮೋಬೈಲ್ ವಿಭಾಗ ಮುಖ್ಯಸ್ಥರಾದ ಶ್ರೀ ಶಿವಶಂಕರ ಕೋರೆ ಹಾಗೂ ಶಿಕ್ಷಕ ವೃಂದ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here