ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ವತಿಯಿಂದ ಸರ್ವೆ ಅಂಗನವಾಡಿ ಕೇಂದ್ರಕ್ಕೆ 10 ಚೆಯರ್ ಕೊಡುಗೆ

0

ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ವತಿಯಿಂದ ಸರ್ವೆ ಅಂಗನವಾಡಿ ಕೇಂದ್ರಕ್ಕೆ ೧೦ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಯುವಕ ಮಂಡಲದ ಗೌರವ ಸಲಹೆಗಾರರಾದ ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ ಎಚ್ ಬಿ ಮಾತನಾಡಿ ಯುವಕ ಮಂಡಲದ ವತಿಯಿಂದ ವಿದ್ಯಾಕೇಂದ್ರಗಳ ಬೆಳವಣಿಗೆಗೆ ನಿರಂತರ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಗೌರವ ಸಲಹೆಗಾರರಾದ ಕಲ್ಲಮ ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ ಸೀತಾರಾಮ್ ಭಟ್ ಕಲ್ಲಮ ಮಾತನಾಡಿ ಸರ್ವೆ ಅಂಗನವಾಡಿ ಕೇಂದ್ರದ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲು ಅನುಕೂಲವಾಗುವಂತೆ ಮೂಲಸೌಕರ್ಯ ಕಲ್ಪಿಸಲು ಯುವಕ ಮಂಡಲ ಬದ್ಧವಿದೆ ಎಂದರು.

ಯುವಕ ಮಂಡಲದ ಅಧ್ಯಕ್ಷರಾದ ಗೌತಮ್ ರಾಜ್ ಕರಂಬಾರು ಮಾತನಾಡಿ ಡಾ.ಸೀತಾರಾಮ್ ಭಟ್ ಕಲ್ಲಮ ಹಾಗೂ ಶ್ರೀನಿವಾಸ್ ಎಚ್ ಬಿ ಅವರು ಯುವಕ ಮಂಡಲದ ಕಾರ್ಯಯೋಜನೆಗೆ ದೇಣಿಗೆ ನೀಡುವ ಮೂಲಕ ಅಂಗನವಾಡಿಗೆ ಅಗತ್ಯವಿದ್ದ ಕುರ್ಚಿಗಳನ್ನು ನೀಡಲು ಸಹಕರಿಸಿದ್ದು ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ ಎಂದರು.

ಮುಂಡೂರು ಗ್ರಾ.ಪಂ ಸದಸ್ಯರಾದ ಕಮಲೇಶ್ ಸರ್ವೆದೋಳಗುತ್ತು ಮಾತನಾಡಿ ಯುವಕ ಮಂಡಲ ಅಂಗನವಾಡಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ಪೋಷಕರು, ಸ್ತ್ರೀ ಶಕ್ತಿ ಸದಸ್ಯರು, ದಾನಿಗಳ ಸಹಕಾರದಿಂದ ಅಂಗನವಾಡಿ ಅಭಿವೃದ್ಧಿ ಹೊಂದಿದೆ ಎಂದರು.

ಯುವಕ ಮಂಡಲದ ಗೌರವ ಸಲಹೆಗಾರರಾದ ಶಶಿಧರ್ ಎಸ್.ಡಿ ಮಾತನಾಡಿ ಅಂಗನವಾಡಿಯ ಬೆಳವಣಿಗೆಗಾಗಿ ನಿರಂತರ ಶ್ರಮಿಸುವ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸೌಮ್ಯ ಕಾಯರುಮೊಗರು ಅವರು ಯುವಕ ಮಂಡಲ ಅಂಗನವಾಡಿ ಕೇಂದ್ರಕ್ಕೆ ನೀಡಿರುವ ಕೊಡುಗೆಗೆ ಕೃತಜ್ಞತೆ ಸಲ್ಲಿಸಿ ಅಂಗನವಾಡಿ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಸ್ವಾಗತಿಸಿದರು. ಅಂಗನವಾಡಿ ಸಹಾಯಕಿ ಕಮಲ ಸಹಕರಿಸಿದರು. ಬಾಲವಿಕಾಸ ಸಮಿತಿ ಸದಸ್ಯರು, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here