ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದ ವತಿಯಿಂದ ಸರ್ವೆ ಕಲ್ಪಣೆ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಣೆ-ಸ್ವಚ್ಛತಾ ಶ್ರಮದಾನ

0

ಪುತ್ತೂರು: ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲೆಯಲ್ಲಿ ಶಾಲೆಗೆ ಮಕ್ಕಳ ಜೊತೆಗೂಡಿ ಹಣ್ಣಿನ ಸಸಿ ನೆಡುವುದರ ಮೂಲಕ ಆಚರಿಸಲಾಯಿತು.


ನಂತರ ಶಾಲೆಯ ಸುತ್ತ-ಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಹಾಗೂ ಮುಖ್ಯಗುರು ಕಮಲಾರವರು ಸ್ವಸ್ತಿಕ್ ಗೆಳೆಯರ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು. ಶಿಕ್ಷಕರಾದ ನವೀನ್ ಕುಮಾರ್, ಸತೀಶ್, ಚಂದ್ರಶೇಖರ್, ಶಿಕ್ಷಕಿ ಜ್ಯೋತಿ ಉಪಸ್ಥಿತರಿದ್ದರು. ಸಸ್ತಿಕ್ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯಕ್, ಗೌರವಾಧ್ಯಕ್ಷ ಸುಂದರ ಬಲ್ಯಾಯ, ಗೌರವ ಸಲಹೆಗಾರರಾದ ಅಶೋಕ ನಾಯ್ಕ, ತಿಮ್ಮಪ್ಪ ನಾಯ್ಕ, ಸದಸ್ಯರುಗಳಾದ ನವೀನ, ಪ್ರಣಮ್, ಪ್ರದೀಪ್, ಚಂದ್ರಶೇಖರ, ಜಗದೀಶ್ ಬಾಲಯ, ನವೀನ್ ಬಾಲಯ, ವಿಜ್ಞೇಶ್ ಪಂಡಿತ್, ಸುಬ್ರಹ್ಮಣ್ಯ ಶರತ್, ನಾರಾಯಣ ಬಲ್ಯಾಯ, ಪುರುಷೋತ್ತಮ, ಬಾಲಚಂದ್ರ, ದೀಕ್ಷಿತ್ ಪಂಡಿತ್, ರವಿ ಗೌಡ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here