ಕೌಕ್ರಾಡಿ: ವಿಶ್ವಪರಿಸರ ದಿನಾಚರಣೆ-ಗಿಡ ನಾಟಿ

0

ನೆಲ್ಯಾಡಿ: ಪರಿಸರ ದಿನಾಚರಣೆ ಅಂಗವಾಗಿ ಕೌಕ್ರಾಡಿ ಗ್ರಾಮ ಪಂಚಾಯತ್ ವತಿಯಿಂದ ಕೌಕ್ರಾಡಿ ಗ್ರಾಮದ ಹೊಸಮಜಲಿನ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗಿಡ ನಾಟಿ ಮಾಡಲಾಯಿತು.


ಪರಿಸರ ಪ್ರೇಮಿ, ದುರ್ಗಾಸಿಂಗ್‌ರವರ ಮಾರ್ಗದರ್ಶನದಲ್ಲಿ ಜಪಾನ್ ವಿಜ್ಞಾನಿ ’ಮಿಯಾ ವಾಕಿ’ಯವರ ಮಾದರಿ ಅನುಸರಿಸಿಕೊಂಡು ಅತೀ ಕಡಿಮೆ ಜಾಗದಲ್ಲಿ ಸುಮಾರು 600ಕ್ಕೂ ಮಿಕ್ಕಿ ವಿವಿಧ ಜಾತಿಯ ಹಣ್ಣು ಹಂಪಲು ಹಾಗೂ ಅರಣ್ಯ ಗಿಡಗಳ ನಾಟಿ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ, ಉಪಾಧ್ಯಕ್ಷೆ ಭವಾನಿ, ಎಪಿಎಂಸಿ ನಿರ್ದೇಶಕ ಬಾಲಕೃಷ್ಣ ಬಾಣಜಾಲು, ವಲಯ ಅರಣ್ಯಾಧಿಕಾರಿಗಳಾದ ಸಂದೀಪ್, ಸುನಿಲ್ ಹಾಗೂ ಅರಣ್ಯ ರಕ್ಷಕರು, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು, ಘನತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲು ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಮಹೇಶ್ ವಂದಿಸಿದರು. ಕಾರ್ಯಕ್ರಮದ ಬಳಿಕ ದುರ್ಗಾಸಿಂಗ್‌ರವರ ಮಾರ್ಗದರ್ಶನದಲ್ಲಿ ಶಾಂತಿನಗರ ಫ್ರೆಂಡ್ಸ್‌ನ ತೇಜಸ್ ಶಾಂತಿನಗರ, ಮನೋಜ್ ಶಾಂತಿನಗರ, ಹರ್ಷಿತ್ ಶಾಂತಿನಗರ, ಗೋಪಾಲಕೃಷ್ಣ ಶಾಂತಿನಗರ, ಶಿವಾನಂದ ಶಾಂತಿನಗರ, ನಾಗೇಶ ಶಾಂತಿನಗರ, ತೀರ್ಥೇಶ್ ಶಾಂತಿನಗರ, ಮಹೇಶ್ ಉಪ್ಪಿನಂಗಡಿ, ಹರ್ಷ ಅನಾಲು, ನವೀನ ಕಾಂಚನ, ಜಯಂತ್ ಅರ್ತಿಗುಳಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಮಿಯಾ ವಾಕಿ ಮಾದರಿ ಅಳವಡಿಸಿಕೊಂಡು ಗಿಡ ನಾಟಿ ಮಾಡಲಾಯಿತು.

LEAVE A REPLY

Please enter your comment!
Please enter your name here